Advertisement
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ಪರೀಕ್ಷೆ ನಡೆದಿದ್ದು, ನಗರದ ಪಿಳ್ಳೆಕೇರೆನಹಳ್ಳಿ ಬಾಪೂಜಿ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ 476 ಮಕ್ಕಳು ಹಾಜರಾಗಿದ್ದರು. ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗುತ್ತಿದ್ದಂತೆ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮದ ಪ್ರಶ್ನೆಪತ್ರಿಕೆಗಳನ್ನು ಅದಲು ಬದಲಾಗಿ ವಿತರಿಸಲಾಗಿದೆ. ಪರೀಕ್ಷೆ ಆರಂಭವಾದ ಒಂದು ಗಂಟೆ ಬಳಿಕ ತಪ್ಪಿನ ಅರಿವಾಗಿ ವಿತರಿಸಿದ್ದ ಪ್ರಶ್ನೆ ಪತ್ರಿಕೆಗಳನ್ನು ವಾಪಸ್ ಪಡೆಯಲಾಯಿತು. ಅಷ್ಟರೊಳಗೆ ವಿದ್ಯಾರ್ಥಿಗಳು ಒಎಂಆರ್ ಶೀಟ್ ಕೋಡ್ ಹಾಗೂ ಬುಕ್‌ಲೆಟ್ ಸಂಖ್ಯೆ ಯನ್ನು ನಮೂದಿಸಿದ್ದು, ಮೌಲ್ಯ ಮಾಪನ ವೇಳೆ ಸ್ಕ್ಯಾನಿಂಗ್ ಸಮಸ್ಯೆ ಯಾಗಲಿದೆ. ಇದರಿಂದಾಗಿ ಇಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
– ಕೆ. ರವಿಶಂಕರ ರೆಡ್ಡಿ, ಉಪನಿರ್ದೇಶಕರು