Advertisement

Bangladeshದಲ್ಲಿ ಸೇನಾಡಳಿತ: ಭಾರತಕ್ಕೂ ತಲೆನೋವು!

12:21 AM Aug 06, 2024 | Team Udayavani |

ಹೊಸದಿಲ್ಲಿ:  ಬಾಂಗ್ಲಾದೇಶದ ಅಸ್ಥಿರತೆ, ದಂಗೆ, ಸೇನಾಡಳಿತ ಭಾರತಕ್ಕೂ ತಲೆ ನೋವಾಗಿ ಪರಿಣಮಿ ಸುವ ಸಾಧ್ಯ ತೆ ಯಿದೆ. ಭಾರತ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಹಸೀನಾ ಅವರ ರಾಜೀನಾಮೆಯೊಂದಿಗೆ ಭಾರತಕ್ಕೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ.

Advertisement

* ಹತ್ತಿ, ಆಹಾರ ಪದಾರ್ಥ, ಸೆಣಬು, ಕಾಫಿ ಸೇರಿ ಹಲವು ವಸ್ತುಗಳನ್ನು ಬಾಂಗ್ಲಾಗೆ ಭಾರತ ರಫ್ತು ಮಾಡುತ್ತದೆ. ಅಲ್ಲಿನ ಸದ್ಯದ ಬೆಳವಣಿಗೆ ರಫ್ತಿಗೆ ಅಡ್ಡಿಯುಂಟಾಗಬಹುದು.

* ಈಗಾಗಲೇ ಪಾವತಿ ಬಾಕಿಯಂಥ ಸಮಸ್ಯೆಗಳು ಎದುರಾಗಿವೆ. ಈಗ ಅದು ಮತ್ತಷ್ಟು ಬಿಗಡಾಯಿಸಿ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧಕ್ಕೂ ತೊಡಕಾಗಬಹುದು.

* ದಂಗೆ ಹಿನ್ನೆಲೆಯಲ್ಲಿ ಬಾಂಗ್ಲಾದಿಂದ ಪರಾರಿಯಾದವರಿಗೆ ಆಶ್ರಯ ಒದಗಿಸಬೇಕಾದ ಸ್ಥಿತಿ ಎದುರಾಗಬಹುದು. ಗಡಿಯಲ್ಲಿನ ಸ್ಥಳೀಯರ ವಿರೋಧ ಎದುರಿಸಬೇಕಾಗಬಹುದು.

* ಬಾಂಗ್ಲಾದ ಮೂಲಕ ಪಾಕ್‌ ಉಗ್ರರನ್ನು ಭಾರತಕ್ಕೆ ಕಳುಹಿಸಬಹುದು.

Advertisement

*ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳಿಗೆ ಬಾಂಗ್ಲಾ  ದೇಶದಲ್ಲಿ ನೆಲೆ ಸಿಗುವ ಅಪಾಯವೇ ಹೆಚ್ಚು.

*ಬಾಂಗ್ಲಾ ದೇಶದಲ್ಲಿ ಪ್ರಮುಖ ಭೂ ಬಂದರು ಪೆಟ್ರಾಪೋಲ್‌ನಲ್ಲಿ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

*ಬಾಂಗ್ಲಾ ದೇಶದ ಸಂಭಾವ್ಯ ಸರಕಾರ ದೊಂದಿಗೆ ಚೀನ ಕೈ ಜೋಡಿಸಿ, ಭಾರತದ ವಿರುದ್ಧ ಕುತಂತ್ರ ರೂಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮೋದಿ ಉನ್ನತ ಮಟ್ಟದ ಸಭೆ
ಬಾಂಗ್ಲಾದಲ್ಲಿ ದಂಗೆ ಪರಿಸ್ಥಿತಿ ಮಿತಿ ಮೀರುತ್ತಿರುವ ಹಿನ್ನಲೆ ದೇಶದ ಗಡಿ ಭದ್ರತಾ ಕ್ರಮಗಳ ಬಗ್ಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿದಂತೆ ಇತರೆ ಉನ್ನತ ಮಟ್ಟದ ಅಧಿಕಾರಿಗಳ ಜತೆ ಪ್ರಧಾನಿ ಮೋದಿ ಸೋಮವಾರ ರಾತ್ರಿ ತುರ್ತು ಸಭೆ ನಡೆಸಿದ್ದಾರೆ. ಅಜಿತ್‌ ದೋವಲ್‌ ಹಾಗೂ ಜೈಶಂಕರ್‌ ಪರಿಸ್ಥಿತಿ ಬಗ್ಗೆ ವಿವರ ನೀಡಿದ್ದಾರೆ.

ಭಾರತ ಗಡಿಯಲ್ಲಿ ಹೈ ಅಲರ್ಟ್‌
ಬಾಂಗ್ಲಾದಲ್ಲಿ ಸೇನಾಡಳಿತ ಜಾರಿಯಾಗುತ್ತಿದ್ದಂತೆ ಭಾರ ತ- ಬಾಂಗ್ಲಾ ಗಡಿ ಯಲ್ಲಿ ಕಟ್ಟೆ ಚ್ಚರ ವಹಿ ಸ ಲಾ ಗಿದೆ. ಗಡಿಯುದ್ದಕ್ಕೂ ಪ್ರತೀ ಪೋಸ್ಟ್‌ ಗಳಿಗೂ ಬಿಎಸ್‌ಎಫ್ ಹೈ ಅಲರ್ಟ್‌ ಘೋಷಿಸಿದ್ದು, ಯಾವುದೇ ಗಡಿ ನಿಯಮ ಉಲ್ಲಂಘನೆಗಳು ನಡೆಯದಂತೆ ಎಚ್ಚರ ವಹಿಸಿದೆ.

ಭಾರತ-ಬಾಂಗ್ಲಾ ರೈಲು ಸ್ಥಗಿತ
ಮುನ್ನೆಚ್ಚರಿಕೆ ಕ್ರಮ ವೆಂಬಂತೆ ಭಾರತ ಮತ್ತು ಬಾಂಗ್ಲಾ ನಡುವೆ ರೈಲು ಸಂಚಾರ ನಿರ್ಬಂಧವನ್ನು ಭಾರತೀಯ ರೈಲ್ವೇ ವಿಸ್ತರಿಸಿದೆ. ಜು. 19 ಮತ್ತು 21ರಂದೇ ಭಾರತ ಬಾಂಗ್ಲಾಗೆ ಸಂಪರ್ಕ ಕಲ್ಪಿಸುವ ರೈಲುಗಳ ಸಂಚಾರಕ್ಕೆ ನಿರ್ಬಂಧ ಹೇರಲಾ ಗಿತ್ತು. ಇದೀಗ ಗಡಿಯಲ್ಲಿ ಬಿಎಸ್‌ಎಫ್ ಸೂಚನೆ ಮೇರೆಗೆ ಕಟ್ಟೆಚ್ಚರಿಕೆ ವಹಿಸಬೇಕಾಗಿರುವುದರಿಂದ ಮುಂದಿನ ಆದೇಶದವರೆಗೂ ರೈಲು ಸಂಚಾರಕ್ಕೆ ತಡೆ ಮುಂದುವರಿಸಲಾಗಿದೆ.

ಬಾಂಗ್ಲಾ ಪ್ರಯಾಣ ಮುಂದೂಡಿ: ನಾಗರಿಕರಿಗೆ ಭಾರತ ಸಲಹೆ
ಬಾಂಗ್ಲಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಆ ದೇಶಕ್ಕೆ ಪ್ರಯಾಣಿಸುವುದನ್ನು ಮುಂದೂಡುವಂತೆ ಭಾರ ತೀ ಯ ರಿಗೆ ಕೇಂದ್ರ ಸರಕಾರ ಸೂಚಿ ಸಿದೆ. ಅಲ್ಲದೇ ಬಾಂಗ್ಲಾದಲ್ಲಿ ನೆಲೆಸಿರುವ ಭಾರತೀಯರು ಎಚ್ಚರಿಕೆ ವಹಿಸುವಂತೆ ಮತ್ತು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದೆ.

ಹಸೀನಾ -ದೋವಲ್‌ ಭೇಟಿ
ಉತ್ತರ ಪ್ರದೇಶದ ಗಾಜಿಯಾಬಾದ್‌ನ ವಾಯುನೆಲೆಗೆ ಬಂದಿಳಿದ ಬಳಿಕ ಶೇಖ್‌ ಹಸೀನಾ ಅವ ರ ನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಭೇಟಿಯಾಗಿದ್ದಾರೆ. ಈ ವೇಳೆ ಏನು ಚರ್ಚೆ ನಡೆ ದಿದೆ ಎಂಬ ಮಾಹಿ ತಿ ಯಿ ಲ್ಲ.

“ಬಾಂಗ್ಲಾದೇಶದಲ್ಲಿನ ಹಿಂಸಾಚಾರದಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ದೇಶದಲ್ಲಿ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸಬೇಕೆಂದು ಅಲ್ಲಿನ ಆಡಳಿತಕ್ಕೆ ಮನವಿ ಮಾಡುತ್ತೇವೆ.‘ – ಕೀರ್‌ ಸ್ಟಾರ್ಮರ್‌, ಬ್ರಿಟನ್‌ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next