Advertisement

ಧೀಮಂತ ದಿರಿಸು 

12:30 AM Feb 15, 2019 | |

ಪರಮಾಣು, ಉರಿಯಂಥ ಸೇನೆಯ ಕುರಿತಾದ ಚಲನಚಿತ್ರಗಳು ತೆರೆಯ ಮೇಲೆ ಬರುವುದಕ್ಕೂ, ಮಿಲಿಟರಿ ಪ್ರಿಂಟ್‌ನ ದಿರಿಸುಗಳು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಆಗುತ್ತಿರುವುದಕ್ಕೂ ನೇರ ಸಂಬಂಧ ಇಲ್ಲದಿರಬಹುದು. ಆದರೆ, ಯುವಜನತೆ ಮಿಲಿಟರಿ ಪ್ರಿಂಟ್‌ನ ದಿರಿಸುಗಳಿಗೆ ಮಾರುಹೋಗಿರುವುದಂತೂ ನಿಜ!

Advertisement

ಮಿಲಿಟರಿ ಸಮವಸ್ತ್ರದಂಥ ದಿರಿಸುಗಳನ್ನು ಉಟ್ಟ ಹುಡುಗ-ಹುಡುಗಿಯರನ್ನು ನಿಮ್ಮ ಸುತ್ತಮುತ್ತ ನೋಡಿರಬಹುದು. “ಪರಮಾಣು’, “ಉರಿ’ಯಂಥ ಸೇನೆಯ ಕುರಿತಾದ ಚಲನಚಿತ್ರಗಳು ತೆರೆಯ ಮೇಲೆ ಬರುವುದಕ್ಕೂ , ಮಿಲಿಟರಿ ಪ್ರಿಂಟ್‌ನ ದಿರಿಸುಗಳು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಆಗುತ್ತಿರುವುದಕ್ಕೂ ನೇರ ಸಂಬಂಧ ಇಲ್ಲದಿರಬಹುದು. ಆದರೆ, ಯುವಜನತೆ ಮಿಲಿಟರಿ ಪ್ರಿಂಟ್‌ನ ದಿರಿಸುಗಳಿಗೆ ಮಾರುಹೋಗಿರುವುದಂತೂ ನಿಜ! ಜಾಕೆಟ್‌, ಅಂಗಿ, ಶಾರ್ಟ್ಸ್, ಲಂಗ, ಪ್ಯಾಂಟ್‌ ಅಲ್ಲದೆ ಶಾಲುಗಳಲ್ಲೂ ಮಿಲಿಟರಿ ಸಮವಸ್ತ್ರದ ಪ್ರಿಂಟ್‌ ಕಾಣಸಿಗುತ್ತಿದೆ. ಅಲ್ಲದೆ ಹಾಲಿವುಡ್‌, ಬಾಲಿವುಡ್‌ ನಟಿಯರು ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ರೂಪದರ್ಶಿಗಳು ಹಾಗೂ ಗಾಯಕಿಯರೂ ಈ ಫ್ಯಾಷನ್‌ ಫಾಲೋ ಮಾಡುತ್ತಿರುವುದೂ ಈ ಟ್ರೆಂಡ್‌ ಜನಪ್ರಿಯವಾಗಲು ಕಾರಣವಾಗಿದೆ.
ಉಲ್ಟಾಪಟ್ಟಾ ಜಾಕೆಟ್‌
ಈ ಮಿಲಿಟರಿ ಫ್ಯಾಷನ್‌ ಹೊಸತೇನಲ್ಲ. ಆಗಾಗ್ಗೆ ಈ ಟ್ರೆಂಡ್‌ ಸುದ್ದಿ ಮಾಡುತ್ತಲೇ ಇರುತ್ತದೆ. ಮೈಗಂಟುವಷ್ಟು ಬಿಗಿಯಾದ ಸಾಲಿಡ್‌ ಕಲರ್‌ನ (ಒಂದೇ ಬಣ್ಣದ) ಅಂಗಿ ಮತ್ತು ಪ್ಯಾಂಟ್‌ ಜೊತೆ ಓವರ್‌ ಸೈಜ್ಡ್ (ದೊಡ್ಡ ಗಾತ್ರದ) ಮಿಲಿಟರಿ ಜಾಕೆಟ್‌ ತೊಟ್ಟುಕೊಂಡು ಸ್ಟೈಲ್‌ ಸ್ಟೇಟ್‌ಮೆಂಟ್‌ ಮಾಡಬಹುದು. ಒಳಗೂ, ಹೊರಗೂ- ಎರಡೂ ಬದಿಯೂ ಬೇರೆ ಬೇರೆ ಬಣ್ಣದ ಮಿಲಿಟರಿ ಪ್ರಿಂಟ್‌ ಇರುವ ಜಾಕೆಟ್‌ಗಳನ್ನು ರಿವರ್ಸೆಬಲ್‌ ಜಾಕೆಟ್‌ ಎನ್ನುತ್ತಾರೆ. ಇದರ ವಿಶೇಷತೆ ಎಂದರೆ ಜಾಕೆಟನ್ನು ಉಲ್ಟಾ ಮಾಡಿಯೂ ತೊಡಬಹುದು. ಉದಾ: ಒಳಗೆ ಗಾಢ ಹಸಿರು ಬಣ್ಣವಿದ್ದು, ಹೊರಗೆ ಕಂದು ಮತ್ತು ಬೂದಿ ಬಣ್ಣದ ಮಿಲಿಟರಿ ಪ್ರಿಂಟ್‌ ಇದ್ದರೆ, ಮಿಲಿಟರಿ ಜಾಕೆಟ್‌ ಎಂದು ಒಂದು ದಿನ ತೊಡಬಹುದು. ಇನ್ನೊಂದು ದಿನ ಒಳಗಿನ ಭಾಗವನ್ನು ಹೊರಹಾಕಿ, ಹಸಿರು ಬಣ್ಣದ ಜಾಕೆಟ್‌ ಎಂದು ತೊಡಬಹುದು. ಈ ರೀತಿ ತೊಟ್ಟ ಪ್ಯಾಂಟ್‌, ಶಾರ್ಟ್ಸ್ ಅಥವಾ ಲಂಗಕ್ಕೆ ಹೋಲುವಂಥ ಬಣ್ಣದ ಭಾಗವನ್ನು ಹೊರಹಾಕಿ ಈ ಜಾಕೆಟ್‌ ತೊಡಬಹುದು.
ಹುಡುಗ-ಹುಡುಗಿಯರಿಬ್ಬರಿಗೂ…

ಇಂಥ ಜಾಕೆಟ್‌ಗಳಲ್ಲಿ ಚಳಿಯ ವಿರುದ್ಧ ಹೋರಾಡಲು, ನಮ್ಮನ್ನು ಬೆಚ್ಚಗಿರಿಸಲು ಸಿಕ್ಕಾಪಟ್ಟೆ ಹತ್ತಿ, ಉಣ್ಣೆ ಅಥವಾ ಇನ್ನಿತರ ಬಟ್ಟೆಯನ್ನು ತುಂಬಿಸಲಾಗುತ್ತದೆ. ಆಗ ಈ ಜಾಕೆಟ್‌ಗೆ ಗಾಳಿ ತುಂಬಿಸಿದಂತೆ ಕಾಣುತ್ತದೆ. ಅಂತ ಜಾಕೆಟ್‌ ಅನ್ನು ಪಫ‌ರ್‌ ಜಾಕೆಟ್‌ ಎಂದು ಕರೆಯಲಾಗುತ್ತದೆ. ಮಿಲಿಟರಿ ಪ್ರಿಂಟ್‌ ದಿರಿಸು ಯುನಿಸೆಕ್ಸ್‌ (ಮಹಿಳೆಯರು ಮತ್ತು ಪುರುಷರು ಇಬ್ಬರೂ ತೊಡಬಹುದಾದ) ಆದ ಕಾರಣ ಇಂಥ ಕೋಟು ಅಥವಾ ಜಾಕೆಟ್‌ ಅನ್ನು ಗೌನ್‌, ಡ್ರೆಸ್‌, ಶಾರ್ಟ್‌, ಸ್ಕರ್ಟ್‌, ಜಂಪ್‌ಸೂಟ್‌, ಪ್ಯಾಂಟ್‌, ಶಾರ್ಟ್ಸ್, ಲಂಗ, ಬರ್ಮುಡಾ, ಶಾರ್ಟ್ಸ್ ಜೊತೆಗೂ ಹಾಕಿಕೊಳ್ಳಬಹುದು. ಮಿಲಿಟರಿ ಪ್ರಿಂಟ್‌ನ ಕಾರ್ಗೋ ಪ್ಯಾಂಟ್‌ ಅನ್ನು ಬಿಳಿ, ಕಪ್ಪು , ಹಸಿರು, ನೀಲಿ, ಕಂದು ಅಥವಾ ಬೂದಿ ಬಣ್ಣದ ಟ್ಯಾಂಕ್‌ಟಾಪ್‌ ಜೊತೆಗೂ ತೊಟ್ಟು , ಹಿಂದೊಮ್ಮೆ ಟ್ರೆಂಡ್‌ ಆಗಿದ್ದ ಈ ಸ್ಟೈಲ್‌ ಅನ್ನು ಮತ್ತೆ ಸಂಭ್ರಮಿಸಬಹುದು.

ಎಲ್ಲೆಲ್ಲೂ ಮಿಲಿಟರಿ ಪ್ರಿಂಟ್‌
ಬೇಡಿಕೆ ಇರುವ ಕಾರಣ, ಮಿಲಿಟರಿ ಪ್ರಿಂಟ್‌ ಕೇವಲ ಉಡುಪು ಗಳಿಗೆ ಮಾತ್ರ ಸೀಮಿತವಾಗಿಲ್ಲ. ಪಾದರಕ್ಷೆ, ಟೊಪ್ಪಿ, ಕನ್ನಡಕದ ಫ್ರೆàಮ್‌, ಸಾಕ್ಸ್‌ , ಗ್ಲವ್ಸ್‌ , ಬ್ಯಾಗ್‌, ಕೈಗಡಿಯಾರದ ಸ್ಟಾಪ್‌-ಡಯಲ್‌, ನೈಲ್‌ ಪಾಲಿಶ್‌, ಕಿವಿಯೋಲೆ, ಬ್ಲೇಸ್ಲೆಟ್‌, ರಿಸ್ಟ್‌ ಬ್ಯಾಂಡ್‌, ಬೆಡ್‌ಶೀಟ್‌, ತಲೆದಿಂಬಿನ ಕವರ್‌, ಪರದೆಗಳು, ಕಾರ್ಪೆಟ್‌, ಟೇಬಲ್‌ ಕ್ಲಾತ್‌, ಸೋಫಾ ಕವರ್‌… ಹೀಗೆ ತರಹೇವಾರಿ ವಸ್ತುಗಳ ಮೇಲೆಲ್ಲ ಮಿಲಿಟರಿ ಪ್ರಿಂಟ್‌ಗಳು ರಾರಾಜಿಸುತ್ತಿವೆ.

ಅದಿತಿ ಮಾನಸ

Advertisement
Advertisement

Udayavani is now on Telegram. Click here to join our channel and stay updated with the latest news.

Next