Advertisement

ಸೈನಿಕ ಕೀಟ ಬಾಧೆ ನಿರ್ವಹಣೆ ಮಾಹಿತಿ

01:54 PM Jul 05, 2020 | Suhan S |

ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ವ್ಯಾಪ್ತಿಯ ಜಮೀನುಗಳಿಗೆ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಭೇಟಿ ನೀಡಿ ಮೆಕ್ಕೆಜೋಳದಲ್ಲಿ ಸೈನಿಕ ಹುಳು ನಿರ್ವಹಣೆ ಕುರಿತು ಮಾಹಿತಿ ನೀಡಿದರು.

Advertisement

ಈ ಸಮಯ ಮಾತನಾಡಿದ ಪ್ರಮೋದ ತುಂಬಳ, ಮೆಕ್ಕೆಜೋಳ ಬೆಳೆಯನ್ನು ಲದ್ದಿಹುಳು ಹಾಗೂ ಇತರ ಕೀಟಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಸೂಕ್ತ ನಿರ್ವಹಣಾ ಕ್ರಮಗಳ ಅವಶ್ಯವಿದ್ದು, ಕೀಟನಾಶಕಗಳಾದ ಕ್ಲೋರ್‍ಯಾಂಟ್ರಿನಿಲಿಪ್ರೊಲ್‌ 18.5 ಇ.ಸಿ.ಯನ್ನು 0.4 ಮಿ.ಲೀ. ಅಥವಾ ಲ್ಯಾಮ್ ಸೈಯಲೊತ್ರಿನ್‌ 49  ಇ.ಸಿ.ಯನ್ನು 1 ಮಿ.ಲೀ. ಅಥವಾ ಎಮಾಮೆಕ್ಟಿನ ಬೆಂಜೊಯೇಟ್‌ ಎಸ್‌

.ಜಿ. ಯನ್ನು 0.5 ಮಿ.ಲೀ. ಅಥವಾ ಸ್ಪೈನೋಸ್ಯಾಡ್‌ 45 ಎಸ್‌.ಸಿ.ಯನ್ನು 0.2 ಮಿ.ಲೀ. ಅಥವಾ ಇಂಡಾಕ್ಸಿಕಾರ್ಬ್ 14.5 ಎಸ್‌.ಸಿ.ಯನ್ನು 0.5 ಮಿ.ಲೀ. ಅಥವಾ ಸ್ಪೆನೆಟ್ರಾಮ್‌ 11.7 ಎಸ್‌.ಸಿ. ಯನ್ನು 0.5 ಮಿ.ಲೀ. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಮೆಕ್ಕೆಜೋಳದಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿ ರವಿಕುಮಾರ ಹಾವನೂರು, ಕೃಷಿ ಅಧಿಕಾರಿ ಎಸ್‌.ಬಿ. ರಾಮೇನಹಳ್ಳಿ, ಬಸವರಾಜ ಬೇವಿನಮರದ, ಮಾರುತಿ ಕೊಡ್ಲಿ, ದಾವಲಸಾಬ್‌ ಸೊರಟೂರು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next