Advertisement

India-Singapore: ಸಿಂಗಾಪುರ ಜತೆ ಸಮರಾಭ್ಯಾಸ

11:20 PM Sep 20, 2023 | Team Udayavani |

ಹೊಸದಿಲ್ಲಿ: ದಕ್ಷಿಣ ಸಮುದ್ರ ಚೀನ ವ್ಯಾಪ್ತಿಯಲ್ಲಿ ಚೀನ ಪ್ರಾಬಲ್ಯ ತಡೆಯುವ ನಿಟ್ಟಿನಲ್ಲಿ ಸಿಂಗಾಪುರದ ಜತೆಗೆ ಸಮರಾಭ್ಯಾಸ ನಡೆಸಲು ಭಾರತ ನಿರ್ಧರಿಸಿದೆ. ಅದಕ್ಕಾಗಿ ಭಾರತದ ಯುದ್ಧ ನೌಕೆಗಳು, ಸಬ್‌ಮರಿನ್‌ಗಳು ಗಸ್ತು ವಿಮಾನಗಳು ಸಿಂಗಾಪುರ ತಲುಪಿವೆ. ಗುರುವಾರದಿಂದ ಸಮರಾಭ್ಯಾಸ ಶುರುವಾಗಲಿದೆ.

Advertisement

ಅದಕ್ಕೆ “ಎಸ್‌ಐಎಂಬಿಇಎಕ್ಸ್‌’  ಎಂದು ಹೆಸರಿಸಲಾಗಿದೆ.  ಐಎನ್‌ಎಸ್‌ ರಣವಿಜಯ್‌, ಜಲಾಂತರ್ಗಾಮಿ ವಿರೋಧಿ ನೌಕೆ ಐಎನ್‌ಎಸ್‌ ಕವರತ್ತಿ, ಐಎನ್‌ಎಸ್‌ ಸಿಂಧೂಕೇಸರಿ ಮತ್ತು ಪಿ-8ಐ ವಿಮಾನಗಳು ಸಿಂಗಾಪುರ ತಲುಪಿವೆ. ಸಿಂಗಾಪುರ ನೌಕಾಪಡೆ ಮತ್ತು ಭಾರತೀಯ ನೌಕಾಪಡೆಯ  30ನೇ ಆವೃತ್ತಿಯ ಜಂಟಿ ಸಮಾರಾಭ್ಯಾಸ ಇದಾಗಿದೆ. 1994ರಿಂದ ಎರಡು ದೇಶಗಳು ವಾರ್ಷಿಕ ಸಮಾರಾಭ್ಯಾಸ ನಡೆಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next