ಶ್ರೀನಗರ : ಇಂದು ಸೋಮವಾರ ನಸುಕಿನ ವೇಳೆ ಉಗ್ರರು ಜಮ್ಮು ಕಾಶ್ಮೀರದ ಅಖನೂರ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಗೆ ಎರಡು ಕಿ.ಮೀ. ಸನಿಹದಲ್ಲಿರುವ ಜನರಲ್ ಇಂಜಿನಿಯರಿಂಗ್ ರಿಸರ್ವ್ ಫೋರ್ಸ್ (ಜಿಆರ್‌ಪಿಎಫ್ ) ಶಿಬಿರದ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಮೂವರು ನಾಗರಿಕರು ಕೊಲ್ಲಲ್ಪಟ್ಟ ಘಟನೆ ವರದಿಯಾಗಿದೆ.
ಉಗ್ರರ ದಾಳಿಯನ್ನು ಅನುಸರಿಸಿ ಭದ್ರತಾ ಪಡೆ ಈಗ ಇಡಿಯ ಪ್ರದೇಶವನ್ನು ಸುತ್ತುವರಿದಿವೆ.
ನಸುಕಿನ ಸುಮಾರು 2 ಗಂಟೆಯ ವೇಳೆಗೆ ಅಖನೂರ್ ವಲಯದ ಬತ್ತಾಲ ಪ್ರದೇಶಕ್ಕೆ ಸಮೀಪ ಉಗ್ರರು ಜಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದ್ದರು.
ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಜಮ್ಮು ಜಿಲ್ಲೆಯಾದ್ಯಂತ ಮಾತ್ರವಲ್ಲದೆ ಖೌರ್ ತೆಹಶೀಲ್ ವ್ಯಾಪ್ತಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಜಿಆರ್‌ಪಿಎಫ್ ದಳವು ಬಿಎಸ್‌ಎಫ್ ನ ಅಂಗ ಸಂಸ್ಥೆಯಾಗಿದ್ದು ಇದು ದೇಶದ ಗಡಿ ಭಾಗಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಅದರ ನಿರ್ವಹಣೆಯ ಹೊಣೆಗಾರಿಕೆಯನ್ನು ಹೊಂದಿದೆ.
ಕಳೆದ ವರ್ಷ ಸೆ.28-29ರಂದ ಭಾರತ ಪಾಕ್ ಗಡಿಯೊಳಗೆ ನುಗ್ಗಿ ಸರ್ಜಿಕಲ್ ದಾಳಿ ಎಸಗಿದ ಬಳಿಕ ಗಡಿಯಯಲ್ಲಿ ಸೇನಾ ಹೊರ ಠಾಣೆಗಳನ್ನು ಗುರಿ ಇರಿಸಿ ಉಗ್ರರು ದಾಳಿ ನಡೆಸುವುದು ಈಗ ನಿರಂತರವಾಗಿ ನಡೆದಿದೆ.