Advertisement

ಸಾಪೋರ್‌ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರ ಹತ್ಯೆ

09:12 AM Aug 04, 2019 | keerthan |

ಕಾಶ್ಮೀರ: ಉತ್ತರ ಕಾಶ್ಮೀರದ ವಾರ್ಪೊರಾದ ಸಾಪೋರ್‌ ಪ್ರದೇಶದಲ್ಲಿ ಶನಿವಾರ ನಡೆದ ಎನ್‌ ಕೌಂಟರ್‌ ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಗುಂಡಿನ ಕಾಳಗದಲ್ಲಿ ಓರ್ವ ಭಾರತೀಯ ಯೋಧ ಗಾಯಗೊಂಡಿರುವುದಾಗಿ ವರದಿಯಾಗಿದೆ.

Advertisement

ವಾರ್ಪೋರಾದಿಂದ 52 ಕಿ.ಮೀ ದೂರದ ಮಲ್ಮಾಪಾಂಪೋರಾದಲ್ಲಿ ಉಗ್ರರ ಚಟುವಟಿಕೆಯ ಮಾಹಿತಿ ಪಡೆದ ಸೇನೆ, ರಾಷ್ಟ್ರೀಯ ರೈಪಲ್ಸ್‌ ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣಾ ದಳ ಜಂಟಿ ಆಪರೇಷನ್‌ ನಡೆಸಿದೆ.

ಕಾರ್ಯಾಚರಣೆಯ ಆರಂಭಿಕ ಹಂತದಲ್ಲಿ ಇಬ್ಬರು ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದ್ದು, ಭಾರತೀಯ ಯೋಧನೋರ್ವ ಗಾಯಗೊಂಡಿದ್ದರು. ತಕ್ಷಣ ಭಾರತೀಯ ಯೋಧರು ಆ ಉಗ್ರರತ್ತ ಗುಂಡಿನ ದಾಳಿ ನಡೆಸಿ ಅವರನ್ನು ಹೊಡೆದುರುಳಿಸಿದ್ದಾರೆ.

ಸ್ಥಳದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದ್ದು, ಇತರ ಉಗ್ರರ ಇರುವಿಕೆಯ ಬಗ್ಗೆ ಹುಡುಕಾಟ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next