Advertisement

18 ದಿನದ ಹಿಂದೆ ಭಯೋತ್ಪಾದನೆಗೆ ಸೇರಿ ಗನ್ ಹಿಡಿದವ ಎನ್ ಕೌಂಟರ್ ನಲ್ಲಿ ಸಾವು

09:59 AM Jan 29, 2020 | keerthan |

ಶ್ರೀನಗರ: ಕೇವಲ 18 ದಿನಗಳ ಹಿಂದೆ ಭಯೋತ್ಪಾದನೆಗೆ ಸೇರಿದ್ದ ಜಮ್ಮು ಕಾಶ್ಮೀರದ ಯುವಕನೋರ್ವ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದಾನೆ.

Advertisement

ಜಮ್ಮು ಕಾಶ್ಮೀರದ ರೆದ್ವಾನಿ ಕುಲ್ಗಮ್ ನಿವಾಸಿಯಾಗಿದ್ದ 20ರ ಹರೆಯದ ಶಹೀದ್ ಖರ್ ಎಂಬಾತನೇ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಉಗ್ರ.

ಸೋಮವಾರ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಈ ಎನ್ ಕೌಂಟರ್ ನಡೆದಿದೆ.

ಸಾವನ್ನಪ್ಪಿದ ಶಹೀದ್ ಖರ್ ಇದೇ ತಿಂಗಳ 9ರಂದು ಮನೆಯಿಂದ ನಾಪತ್ತೆಯಾಗಿದ್ದ. ಈಗ ಭಯೋತ್ಪಾದಕನಾಗಿ ಸತ್ತು ಬಿದ್ದಿದ್ದಾನೆ.

ಸೋಮವಾರ ಅನಂತ್ ನಾಗ್ ಜಿಲ್ಲೆಯ ಅರ್ವಾನಿಯಲ್ಲಿ ಉಗ್ರರು ಗಸ್ತು ತಿರುಗುತ್ತಿದ್ದ ರಾಷ್ಟ್ರೀಯ ರೈಫಲ್ಸ್ ನ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದಾಗಿ ಓರ್ವ ಯೋಧ ಗಾಯಗೊಂಡಿದ್ದಾರೆ.

Advertisement

ಕೂಡಲೇ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ನೂತನವಾಗಿ ಉಗ್ರ ಸಂಘಟನೆಗೆ ಸೇರಿದ ಖರ್ ಸೈನಿಕರ ಎದುರಿಗೆ ಕಾಣಿಸಿಕೊಂಡಿದ್ದು, ಅತನನ್ನು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಶರಣಾಗದೆ ಎಕೆ-47 ರೈಫಲ್ ನಲ್ಲಿ ಯೋಧರತ್ತ ಗುಂಡು ಹಾರಿಸಿದ. ಇದಕ್ಕೆ ಪ್ರತಿದಾಳಿ ನಡೆಸಿದ ಸೇನೆ ಆತನನ್ನು ಹೊಡೆದುರುಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next