ಅಹಮದಾಬಾದ್ : ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಸ್ವಲ್ಪ ಚೇತರಿಸಿಕೊಳ್ಳುತ್ತಿರುವಾಗಲೇ ಗುಜರಾತ್ ರಾಜ್ಯದ ಕಛ್ ಜಿಲ್ಲೆಯಲ್ಲಿ ಇಂದು (ಭಾನುವಾರ, ಜುಲೈ 4) ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕಛ್ ಜಿಲ್ಲೆಯ ಕೆಲವಡೆ ಇಂದು ಬೆಳಗ್ಗೆ ಅಂದಾಜು 7 : 40ರ ಹೊತತಿಗೆ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ ಎಂದು ಗಾಂಧಿನಗರದ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ದೃಢಪಡಿಸಿದೆ. ಅದೃಷ್ಟವಶಾತ್ ಈ ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕೋಡಿಹಳ್ಳಿಯಲ್ಲಿ ಅನುಮಾನಾಸ್ಪದ ಸ್ಪೋಟಕಗಳು ಪತ್ತೆ: ಪರೀಕ್ಷೆ ನಡೆಸುತ್ತಿದ್ದ ವ್ಯಕ್ತಿಗೆ ಗಾಯ
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಕಛ್ ಜಿಲ್ಲೆಯ ದುಧೈ ಈಶಾನ್ಯ ದಿಕ್ಕಿನಲ್ಲಿ 19 ಕಿ.ಮೀ ದೂರದಲ್ಲಿ, 11.8 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು, ಕಛ್ ಜಿಲ್ಲೆ ಅತಿ ಹೆಚ್ಚು ಅಪಾಯದ ಭೂಕಂಪನ ವಲಯವಾಗಿದ್ದು, 2001 ರ ಜನವರಿಯಲ್ಲಿ ಜಿಲ್ಲೆಯಲ್ಲಿ 6.9 ತೀವ್ರತೆಯ ಭೂಕಂಪ ಸಂಭವಸಿರುವುದಾಗಿ, ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ : ಮಲ್ಲೇಶ್ವರಂ ಕ್ಷೇತ್ರದಲ್ಲಿ ಲಸಿಕಾ ಅಭಿಯಾನ ತ್ವರಿತಗೊಳಿಸಲು ಅಶ್ವತ್ಥ ನಾರಾಯಣ ಒತ್ತು