Advertisement

ಬಿ.ಸಿ. ರೋಡ್‌: ಊರಿಗೆ ತೆರಳಿದ ಕಾರ್ಮಿಕರು

04:33 PM May 06, 2020 | sudhir |

ಬಂಟ್ವಾಳ: ಬಂಟ್ವಾಳ ತಾಲೂಕಿನಿಂದ ಎರಡನೇ ಹಂತದಲ್ಲಿ ತಾಲೂಕಿನಾದ್ಯಂತ ಇರುವ ವಲಸೆ ಕಾರ್ಮಿಕರು ಸೋಮವಾರ ರಾತ್ರಿ ಬಿ.ಸಿ. ರೋಡ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ತಮ್ಮ ಊರುಗಳಿಗೆ ತೆರಳಿದರು.

Advertisement

ಕೋಲಾರ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಬೀದರ್‌, ಯಾದಗಿರಿ, ರಾಯಚೂರು, ಹಾಸನ, ಬೆಂಗಳೂರು, ತುಮ ಕೂರು, ಮೈಸೂರು, ಕೊಡಗು, ಕೊಪ್ಪಳ, ಹಾವೇರಿ, ವಿಜಯಪುರ, ಅಂಕೋಲ, ಬಾಗಲಕೋಟೆ, ಗದಗ, ಕಾರವಾರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ ಹೀಗೆ 27 ಜಿಲ್ಲೆಗಳಿಗೆ 353 ಕಾರ್ಮಿಕರು ತೆರಳಿದರು.

ಕಾರ್ಮಿಕರಿಗಾಗಿ ಬಿ.ಸಿ. ರೋಡ್‌ ಕೆಎಸ್‌ಆರ್‌ಟಿಸಿ ಡಿಪೋದಿಂದ 15 ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಆಹಾರವನ್ನು ನೀಡಿ ಕಳುಹಿಸಿಕೊಡಲಾಯಿತು.

ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸ್ಥಳದಲ್ಲಿದ್ದು, ಸೂಕ್ತ ಸಲಹೆಗಳನ್ನು ನೀಡಿದರು. ಬುಡಾ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ತಾ.ಪಂ. ಇಒ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು, ಕಾರ್ಮಿಕ ನಿರೀಕ್ಷಕಿ ಮೆರ್ಲಿನ್‌ ಗ್ರೇಸಿ ಡಿ’ಸೋಜಾ, ವಿಟ್ಲ ಪ.ಪಂ. ಮುಖ್ಯಾಧಿಕಾರಿ ಮಾಲಿನಿ, ಬಂಟ್ವಾಳ ಡಿವೈಎಸ್ಪಿ ವೆಲಂಟೈನ್‌ ಡಿ’ಸೋಜಾ, ನಗರ ಪಿಎಸ್‌ಐ ಅವಿನಾಶ್‌, ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಮೊದಲಾದ ಅಧಿಕಾರಿಗಳು, ಶಾಸಕರ ನೆರವು ತಂಡದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next