Advertisement

ಕೇಂದ್ರ-ದೀದಿ ವಲಸೆ ಫೈಟ್‌

01:08 AM May 10, 2020 | Sriram |

ಹೊಸದಿಲ್ಲಿ/ಕೋಲ್ಕತಾ: ವಿವಿಧ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ನಿರೀಕ್ಷಿತ ಸಹಕಾರ ನೀಡದೆ ಪಶ್ಚಿಮ ಬಂಗಾಲ ಸರಕಾರ ತನ್ನ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

Advertisement

ಈ ಕುರಿತಂತೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿರುವ ಶಾ, ವಿಶೇಷ ಶ್ರಮಿಕ್‌ ರೈಲುಗಳು ರಾಜ್ಯ ಪ್ರವೇಶಿ ಸಲು ಅವಕಾಶ ನೀಡದೆ, ದೇಶದ ವಿವಿಧ ರಾಜ್ಯಗಳಿಗೆ ವಲಸೆ ಹೋಗಿರುವ ಬಂಗಾಲದ ಕಾರ್ಮಿಕರಿಗೆ ನೀವು ಅನ್ಯಾಯ ಮಾಡು ತ್ತಿದ್ದೀರಿ. ನಿಮ್ಮ ಈ ನಿಲುವಿನಿಂದ ತವರಿಗೆ ಮರ ಳುವ ಆಸೆ ಹೊತ್ತಿರುವ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಗೃಹ ಸಚಿವರ ಆರೋಪ ತಳ್ಳಿಹಾಕಿರುವ ತೃಣಮೂಲ ಕಾಂಗ್ರೆಸ್‌, ರಾಜ್ಯ ದಿಂದ ವಲಸೆ ಹೋಗಿರುವ ಕಾರ್ಮಿಕರನ್ನು ವಾಪಸ್‌ ಕರೆಸಿಕೊಳ್ಳುವ ಸಂಬಂಧ ಕರ್ನಾಟಕ, ತಮಿಳುನಾಡು, ಪಂಜಾಬ್‌ ಮತ್ತು ತೆಲಂಗಾಣ ರಾಜ್ಯಗಳಿಂದ ಎಂಟು ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಮೊದಲ ರೈಲು ಹೈದರಾಬಾದ್‌ನಿಂದ ಮಾಲ್ಡಾಗೆ ಶನಿವಾರ ಬಂದಿದೆ ಎಂದು ಹೇಳಿದೆ.

ಕ್ಷಮೆ ಕೇಳಿ: ಈ ನಡುವೆ ಸಚಿವ ಅಮಿತ್‌ ಶಾ ಸುಳ್ಳುಗಳ ಸರಮಾಲೆ ಹರಡುತ್ತಿದ್ದಾರೆ ಎಂದು ಆರೋಪಿಸಿರುವ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ, ಗೃಹ ಸಚಿವರು ತಾವು ಮಾಡಿರುವ ಆರೋಪವನ್ನು ಸಾಬೀತುಪಡಿ ಸಬೇಕು ಇಲ್ಲವೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಸ್ತಾಪವೇ ಬಂದಿಲ್ಲ: ವಲಸೆ ಕಾರ್ಮಿಕರ ರೈಲಿನ ಬಗ್ಗೆ ಕೇಂದ್ರ ಮತ್ತು ಪಶ್ಚಿಮ ಬಂಗಾಲ ಸರಕಾರಗಳ ನಡುವೆ ತಕರಾರು ಎದ್ದಿರುವಂತೆಯೇ ಅಚ್ಚರಿಯ ವಿಚಾರ ಬಹಿರಂಗ ವಾಗಿದೆ. ಪಶ್ಚಿಮ ಬಂಗಾಲದಿಂದ ಶ್ರಮಿಕ ವಿಶೇಷ ರೈಲುಗಳ ಸಂಚಾರಕ್ಕೆ ಅಧಿಕೃತ ಮನವಿಯೇ ಬಂದಿಲ್ಲ ಎಂದು ರೈಲ್ವೇ ಇಲಾಖೆ ತಿಳಿಸಿದೆ.

Advertisement

3.4 ಲಕ್ಷ ಮಂದಿ ಪಯಣ: ಮೇ 1ರಿಂದ ಇದುವರೆಗೆ 302 ಶ್ರಮಿಕ ವಿಶೇಷ ರೈಲುಗಳು ಪ್ರಯಾಣ ಬೆಳೆಸಿವೆ. ಅದರಲ್ಲಿ 3.4 ಲಕ್ಷ ಮಂದಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ ಎಂದು ರೈಲ್ವೇ ಸಚಿವಾಲಯ ಶನಿವಾರ ತಿಳಿಸಿದೆ.

ಹರ್ಯಾಣಗೆ ಮರಳಲು ಲಕ್ಷ ವಲಸೆ ಕಾರ್ಮಿಕರ ಇಂಗಿತ: ದೇಶಾದ್ಯಂತ ವಲಸೆ ಕಾರ್ಮಿಕರು ತವರಿಗೆ ಮರಳಲು ಹಾತೊರೆಯುತ್ತಿದ್ದಾರೆ. ಆದರೆ ಹರ್ಯಾಣದಲ್ಲಿ ಪರಿಸ್ಥಿತಿ ತಲೆಕೆಳಗಾಗಿದೆ. ಬಿಹಾರ, ಉತ್ತರ ಪ್ರದೇಶದ ಸುಮಾರು 1.09 ಲಕ್ಷ ಕಾರ್ಮಿಕರು ರಾಜ್ಯಕ್ಕೆ ವಾಪಸ್‌ ಬರುವುದಾಗಿ ಹರ್ಯಾಣ ಸರಕಾರದ ವೆಬ್‌ಸೆ„ಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಶೇ. 79.29 ಕಾರ್ಮಿಕರು ಗುರುಗ್ರಾಮ, ಫರೀದಾಬಾದ್‌, ಪಾಣಿಪತ್‌, ಸೋನಿಪತ್‌, ಯಮುನಾನಗರ ಮತ್ತು ರೇವಾರಿ ಜಿಲ್ಲೆಗಳಿಗೆ ಬರುವುದಾಗಿ ಹೇಳಿದ್ದಾರೆ.

ಇವರಲ್ಲಿ 50 ಸಾವಿರಕ್ಕೂ ಅಧಿಕ ಕಾರ್ಮಿಕರು ಗುರುಗ್ರಾಮ ಜಿಲ್ಲೆಗೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹರ್ಯಾಣದ ಈ ಎಲ್ಲಾ ಜಿಲ್ಲೆಗಳು ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಜತೆಗೆ, ಇಲ್ಲಿ ಹೆಚ್ಚಿನ ಪ್ರಮಾಣದ ವಾಣಿಜ್ಯ, ವ್ಯವಹಾರ ಚಟುವಟಿಕೆ ಗಳು ನಡೆಯುತ್ತವೆ. ಕಾರ್ಮಿಕರೇ ವಾಪಸ್‌ ಬರುವುದಾಗಿ ಹೇಳಿರುವ ಕಾರಣ ಅವರನ್ನು ಕರೆಸಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ಹರ್ಯಾಣ ಸರಕಾರ ಶನಿವಾರ ಭರವಸೆ ನೀಡಿದೆ.

ಬರಲಿದೆ ವಲಸೆ ಕಾರ್ಮಿಕರ ನೋಂದಣಿ
ಹೊಟ್ಟೆಪಾಡಿಗಾಗಿ, ತಮ್ಮ ಊರುಗಳಿಂದ ಬೇರೆ ಊರುಗಳಿಗೆ, ರಾಜ್ಯಗಳಿಗೆ ವಲಸೆ ಹೋಗುವ ಕೂಲಿ ಕಾರ್ಮಿಕರ ಸಮಗ್ರ ಮಾಹಿತಿಯುಳ್ಳ ರಾಷ್ಟ್ರೀಯ ನೋಂದಣಿಯನ್ನು ಕೇಂದ್ರ ಸರಕಾರ ಸಿದ್ಧಪಡಿಸುತ್ತಿದೆ. ಕೇಂದ್ರ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೀರಾಲಾಲ್‌ ಸಮರಿಯಾ ಅವರು ಈ ವಿಷಯ ಪ್ರಕಟಿಸಿದ್ದಾರೆ.

ಸಚಿವರ ಭರವಸೆ: ತಮ್ಮ ಸ್ವಂತ ಊರುಗಳಿಗೆ ತೆರಳಲು ಒಪ್ಪದ ವಲಸೆ ಕಾರ್ಮಿಕರ ಮನವೊಲಿಸಲು ಆಯಾ ರಾಜ್ಯಗಳಲ್ಲಿರುವ ಕಾರ್ಮಿಕ ಸಂಘಟನೆಗಳು ಪ್ರಯತ್ನಿಸಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಮನವಿ ಮಾಡಿದ್ದಾರೆ. ನಾನಾ ರಾಜ್ಯಗಳ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಜೊತೆಗೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ವೇಳೆ ಅವರು ಈ ಮನವಿ ಮಾಡಿದರು.

ಘರ್ಷಣೆ: 100 ಮಂದಿ ವಶಕ್ಕೆ
ಗುಜರಾತ್‌ನ ಸೂರತ್‌ ಜಿಲ್ಲೆಯ ಮೋರಾ ಗ್ರಾಮದಲ್ಲಿ ವಲಸೆ ಕಾರ್ಮಿಕರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಹಜಾರಿಯಾ ಕೈಗಾರಿಕಾ ಪ್ರದೇಶಗಳಲ್ಲಿ ಉದ್ದಿಮೆಗಳನ್ನು ಶುರು ಮಾಡಬೇಕು, ಇಲ್ಲದೇ ಇದ್ದರೆ ಸ್ವಗ್ರಾಮಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎನ್ನುವುದು ಅವರ ಬೇಡಿಕೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 100ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಬಂಗಾಳಿಗಳಿಗೆ ವಿಶೇಷ ರೈಲು
ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಪಶ್ಚಿಮ ಬಂಗಾಲ ಮೂಲದ ನಾಗರಿಕರನ್ನು ಕರೆತರಲು ವಿಶೇಷ ರೈಲುಗಳ ವ್ಯವಸ್ಥೆ ಮಾಡುತ್ತಿರುವುದಾಗಿ ಸರಕಾರ ಹೇಳಿದೆ. ವಲಸೆ ಕಾರ್ಮಿಕರಿಗಾಗಿನ ಶ್ರಮಿಕ ರೈಲುಗಳ ಸಂಚಾರಕ್ಕೆ ಪಶ್ಚಿಮ ಬಂಗಾಲ ಸರಕಾರ ಅನುವು ಮಾಡಿಕೊಡು ತ್ತಿಲ್ಲ ಎಂಬ ಗೃಹ ಸಚಿವ ಅಮಿತ್‌ ಶಾ ಆರೋಪದ ಬೆನ್ನಲ್ಲಿಯೇ ಈ ಬೆಳವಣಿಗೆ ನಡೆದಿದೆ. ಕರ್ನಾಟಕ, ತೆಲಂಗಾಣ, ತಮಿಳು ನಾಡು ಮತ್ತು ಪಂಜಾಬ್‌ನಲ್ಲಿ ಲಾಕ್‌ಡೌನ್‌ನಿಂದಾಗಿ ಅತಂತ್ರ ಸ್ಥಿತಿಯಲ್ಲಿ ಸುಮಾರು 30 ಸಾವಿರ ಮಂದಿ ಬಂಗಾಲಿಗಳು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next