Advertisement

ವಲಸೆ ಕಾರ್ಮಿಕರು ಊರಿಗೆ ಮರಳುವುದರಿಂದ Covid ವೈರಸ್ ಹರಡುವ ಸಾಧ್ಯತೆ ಹೆಚ್ಚು; ವಿಶ್ವಬ್ಯಾಂಕ್

09:22 AM Apr 13, 2020 | Nagendra Trasi |

ನವದೆಹಲಿ:ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುವ ಮೂಲಕ ಕೋವಿಡ್ ವೈರಸ್ ಅನ್ನು ಸೋಂಕು ರಹಿತ ರಾಜ್ಯ ಮತ್ತು ಗ್ರಾಮಗಳಿಗೆ ಸೋಂಕು ಹರಡಿಸುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಭಾನುವಾರ ಎಚ್ಚರಿಕೆ ಸಂದೇಶ ನೀಡಿದೆ.

Advertisement

ಪ್ರಾಥಮಿಕ ಪತ್ತೆ ಕಾರ್ಯದಲ್ಲಿ ಭಾರತದ ಹಲವು ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು ಬಂದಿರುವ ಪ್ರದೇಶಗಳಲ್ಲಿ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿರುವುದು ಕಂಡುಬಂದಿದೆ ಎಂದು ತಿಳಿಸಿದೆ.

ವಿಶ್ವಬ್ಯಾಂಕ್ ನ ಅರ್ಧವಾರ್ಷಿಕ ವರದಿಯಲ್ಲಿ, ದಕ್ಷಿಣ ಏಷ್ಯಾ ಪ್ರಪಂಚದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಅದರಲ್ಲಿಯೂ ಮುಖ್ಯವಾಗಿ ನಗರ ಪ್ರದೇಶ. ಈ ಪ್ರದೇಶದಲ್ಲಿ ದೇಶೀಯವಾಗಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವುದು ತುಂಬಾ ಸವಾಲಿನ ಕೆಲಸವಾಗಿದೆ ಎಂದು ಹೇಳಿದೆ.

ಇಂತಹ ಪ್ರದೇಶ ಸೋಂಕು ಹರಡಲು ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಮುಖ್ಯವಾಗಿ ಅತೀ ಹೆಚ್ಚು ತಿರುಗಾಡುವ ವ್ಯಕ್ತಿಗಳು, ಕೊಳಗೇರಿ ನಿವಾಸಿಗಳು ಮತ್ತು ವಲಸೆ ಕಾರ್ಮಿಕರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next