ಕೆಂಗೇರಿ: ಕ್ಷೇತ್ರದಲ್ಲಿರುವ ವಲಸೆ ಕಾರ್ಮಿಕರಿಗೆ ಉಚಿತವಾಗಿ ಮನೆ ನಿರ್ಮಾಣಮಾಡಿಕೊಡುವುದರ ಮೂಲಕ ಶಾಶ್ವತನೆಲೆಯನ್ನು ಕಲ್ಪಿಸಿಕೊಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ತಿಳಿಸಿದರು.
ಯಶವಂತಪುರ ಕ್ಷೇತ್ರದ ಆಗರ ಗ್ರಾಪಂವ್ಯಾಪ್ತಿಯ ರಾಜೀವ್‌ಗಾಂಧಿನಗರದನವಗ್ರಾಮದಲ್ಲಿ ವಲಸೆ ಕಾರ್ಮಿಕರಿಗಾಗಿನಿರ್ಮಾಣ ಮಾಡಲಾದ 18 ಮನೆಗಳನ್ನುಆರ್ಹ ಫಲಾನುಭವಿಗಳಿಗೆ ವಿತರಿಸಿಮಾತನಾಡಿದರು.
ಕೊರೊನಾ ಸಂಕಷ್ಟಕಾಲದಲ್ಲಿ ವಲಸೆ ಕಾರ್ಮಿಕರು ದುಡಿಯಲು ಕೆಲಸವಿಲ್ಲದೆ ಬಾಡಿಗೆ ಮನೆಯಲ್ಲಿವಾಸವಿದ್ದು, ಪರದಾಡುವುದನ್ನು ಆರಿತುದಾನಿಗಳ ಸಹಕಾರದಲ್ಲಿ ರಾಜೀವ್‌ಗಾಂಧಿನಗರದಲ್ಲಿರುವ ಸರ್ಕಾರಿ ಜಾಗದಲ್ಲಿಮನೆ ನಿರ್ಮಿಸಿ ಕೊಡಲಾಗಿದ್ದು, ಇದೇಜಾಗದಲ್ಲಿ ಇನ್ನೂ3 ಎಕರೆ ಜಾಗವಿದೆ. ಆದರೆ,ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು,ಪ್ರಕರಣ ನಿವಾರಣೆಯಾದ ಬಳಿಕ ಇಲ್ಲಿನೆಲೆಸಿರುವ ಎಲ್ಲಾ ವಲಸೆಕಾರ್ಮಿಕರಿಗೆ ಮನೆನಿರ್ಮಿಸಿ ಕೊಡಲಾಗುವುದು ಎಂದರು.ಕೊರೊನಾ ನಡುವೆಯೂ ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡುತ್ತಿದ್ದು, ಅಗರಗ್ರಾಮದಲ್ಲಿ ಸುಮಾರು5.25ಕೋಟಿ ವೆಚ್ಚದಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆಎಂದರು.
ಇದೇ ವೇಳೆ ಅಗರ ಗ್ರಾಮದಲ್ಲಿ,ಬಂಜಾರ ಪಾಳ್ಯ ಹಾಗೂ ತಾತಗುಣಿಯಲ್ಲಿರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆನೀಡಿದರು. ಅಗರ ಗ್ರಾಪಂ ಅಧ್ಯಕ್ಷಸಿ.ನರಸಿಂಹಮೂರ್ತಿ, ಗ್ರಾಮಾಂತರಮಂಡಲಾಧ್ಯಕ್ಷ ಎಂ.ರಂಗರಾಜು, ಬಿಜೆಪಿಮುಖಂಡ ಹನುಮಂತೇಗೌಡಇತರರಿದ್ದರು.