ಹಾವೇರಿ: ಅಕ್ಷರ ದಾಸೋಹದಡಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮ ಗುರುವಾರದಿಂದ ಜಿಲ್ಲಾದ್ಯಂತ ಪುನಾರಂಭಗೊಂಡಿದ್ದು, ಹಾವೇರಿಯ ಕೆರೆಮತ್ತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಕಾರ್ಯಕ್ರಮವನ್ನು ಮಕ್ಕಳಿಗೆ ಸಿಹಿ ಊಟ ನೀಡುವುದರ ಮೂಲಕ ಆರಂಭಿಸಲಾಯಿತು. ಕೆರೆಮತ್ತಿಹಳ್ಳಿ ಸರ್ಕಾರಿ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸುವುದರ ಮೂಲಕ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅ ಧಿಕಾರಿ ಬಸವರಾಜಪ್ಪ, ಕ್ಷೇತ್ರ ಶಿಕ್ಷಣಾಧಿ ಕಾರಿ ಎಂ.ಎಚ್.ಪಾಟೀಲ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಉಮೇಶಪ್ಪ ಅವರು ಚಾಲನೆ ನೀಡಿದರು. ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತ ಗೊಂಡಿದ್ದ ಬಿಸಿಯೂಟ ಜಿಲ್ಲಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆರಂಭಗೊಂಡಿದ್ದು, ಕೆರೆಮತ್ತಿಹಳ್ಳಿಯಲ್ಲಿ ಮೊದಲ ದಿನ 40 ವಿದ್ಯಾರ್ಥಿಗಳು ಸಿಹಿಯೂಟ ಸವಿದರು. ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ಬಿ.ಡಿ.ಮುದಗಲ್ಲ, ಮಂಜುಳಾ ಎಸ್., ಸಹ ಶಿಕ್ಷಕರಾದ ಎಸ್.ಕೆ.ಪಟಗಾರ, ಸಿ.ಎಸ್.ಚಟಿÉ, ಎಸ್.ಡಿ.ಕುಲಕರ್ಣಿ, ಶೋಭಾರಾಣಿ,, ಎಸ್.ಎಚ್.ಹರಿಹರ, ವಿ.ಜಿ.ದೇವಗಿರಿಮಠ, ಎಸ್.ಎಸ್. ಮಳಗಾವಿ ಇತರರು ಇದ್ದರು.
ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ
ಹಿರೇಕೆರೂರ: ಪಟ್ಟಣದ ಸಿಎಸ್ ಹೆಣ್ಣು ಮಕ್ಕಳ ಪ್ರೌಢಶಾಲೆ, ಡಿಆರ್‌ಟಿ ಬಾಲಕರ ಪ್ರೌಢಶಾಲೆ ಹಾಗೂ ಎಸ್‌ಎನ್‌ಕೆ ಪ್ರಾಥಮಿಕ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೂಲಕ ತಹಶೀಲ್ದಾರ್ ಕೆ.ಎ.ಉಮಾ ಉದ್ಘಾಟಿಸಿದರು. ಸಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿ ಕಾರಿ ಜಗದೀಶ ಬಳಿಗಾರ, ಗ್ರೇಡ್-2 ತಹಶೀಲ್ದಾರ್ ಶೆಟ್ಟರ್, ಬಿಸಿಯೂಟ ಅ ಕಾರಿ ಮಾರುತೆಪ್ಪ, ಆಡಳಿತಾ ಕಾರಿ ಎಸ್.ವೀರಭದ್ರಯ್ಯ, ಮುಖ್ಯ ಶಿಕ್ಷಕರಾದ ಕೆ.ಎಂ.ಸುಕುಮಾರ, ಆರ್.ಎಚ್.ಪೂಜಾರ ಇತರರು ಹಾಜರಿದ್ದರು.
ಬಿಸಿಯೂಟದಿಂದ ಮಕ್ಕಳ ಆರೋಗ್ಯ ಸದೃಢ: ಉಮಾ
ಹಿರೇಕೆರೂರ: ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬಿಸಿಯೂಟ ಸಿಗುವುದರಿಂದ ಮಕ್ಕಳು ದೈಹಿಕ ಹಾಗೂ ಮಾನಸಿಕ ಸದೃಢಗೊಳ್ಳುತ್ತಾರೆ ಎಂದು ತಹಶೀಲ್ದಾರ್ ಕೆ.ಎ.ಉಮಾ ಹೇಳಿದರು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾ ಧಿಕಾರಿ ಜಗದೀಶ ಬಳಿಗಾರ, ಗ್ರೇಡ್-2 ತಹಶೀಲ್ದಾರ್ ಶೆಟ್ಟರ್, ಬಿಸಿಯೂಟ ಅ ಕಾರಿ ಮಾರುತೆಪ್ಪ, ಪ್ರಾಚಾರ್ಯ ಸಾಮ್ಯ ನಾಯ್ಕ, ಮುಖ್ಯ ಶಿಕ್ಷಕ ಎನ್.ಸುರೇಶಕುಮಾರ, ವಿ.ವಿ.ಹಿತ್ತಲಮನಿ, ಜೆ.ಸಿ.μàರಜಾದೆ, ಶಿವರಾಜ ವಾಲ್ಮೀಕಿ ಇತರರು ಹಾಜರಿದ್ದರು.