ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವೊಂದು ಏರ್ ಟ್ರಾಫಿಕ್ ಕಂಟ್ರೋಲ್‌ನ (ಎಟಿಸಿ)ಪರಿವೀಕ್ಷಣೆಯಿಂದ ಏಕಾಏಕಿ ನಾಪತ್ತೆಯಾಗಿ ಸುಮಾರು 14 ನಿಮಿಷಗಳ ಕಾಲ ಎಲ್ಲರನ್ನೂ ಕಂಗಾಲಾಗಿಸಿರುವ ಘಟನೆ ಶನಿವಾರ ನಡೆದಿದೆ.
ಸೋಮವಾರದಿಂದ ಜೊಹಾನ್ಸ್‌ಬರ್ಗ್‌ನಲ್ಲಿ ಆರಂಭಗೊಳ್ಳಲಿರುವ ಬ್ರಿಕ್ಸ್ ಶೃಂಗ ಹಾಗೂ ಐಬಿಎಸ್‌ಎ ಸಭೆಯಲ್ಲಿ ಭಾಗವಹಿಸಲು ಸುಷ್ಮಾ ಅವರು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಯಾಣ ಬೆಳೆಸಿದ್ದಾಗ ಈ ಘಟನೆ ಸಂಭವಿಸಿದೆ.
ಏನಾಗಿತ್ತು?: ಸಾಮಾನ್ಯವಾಗಿ, ಸುಷ್ಮಾ ಅವರು ಪ್ರಯಾಣಿಸುವ “ಎಂಬ್ರಾಯೆ ರ್-135′ ವಿಮಾನ ಕಡಿಮೆ ಇಂಧನ ಸಾಮರ್ಥ್ಯ ಹೊಂದಿರುವುದರಿಂದ, ಈ ವಿಮಾನ, ಮಾರ್ಗ ಮಧ್ಯೆ ತಿರುವನಂತಪುರ, ಮಾರಿಷಸ್‌ನಲ್ಲಿ ಇಳಿದು ಇಂಧನ ತುಂಬಿಸಿಕೊಂಡು ಪ್ರಯಾಣ ಮುಂದುವರಿಸಬೇಕಿತ್ತು. ಈ ಹಿನ್ನೆಲೆಯಲ್ಲಿ, ಮಧ್ಯಾಹ್ನ ತಿರುವನಂತಪುರಕ್ಕೆ ಬಂದ ವಿಮಾನ, 2.08ರ ಹೊತ್ತಿಗೆ ಅಲ್ಲಿಂದ ಮಾರಿ ಷಸ್ ಕಡೆಗೆ ಪ್ರಯಾಣ ಬೆಳೆಸಿತು. ಭಾರತೀಯ ವಾಯುಗಡಿ ದಾಟಿದ ನಂತರ, ಆ ವಿಮಾನ ಮಾಲ್ಡೀವ್ಸ್‌ನ ವಾಯುಗಡಿಯೊಳಗೆ ಪ್ರವೇಶ ಪಡೆಯಿತು. ಮಾಲ್ಡೀವ್ಸ್ ಗಡಿ ದಾಟಿದ ನಂತರ ಅದು ಮಾರಿಷಸ್ ವಾಯು ಗಡಿ ಪ್ರವೇಶ ಮಾಡಿತು.
ಸಮಸ್ಯೆಯಾಗಿದ್ದೇ ಇಲ್ಲಿ: ಮಾರಿಷಸ್ ವಾಯುಗಡಿ ಪ್ರವೇಶಿ ಸಿದ ಕೆಲವೇ ಸೆಕೆಂಡ್‌ಗಳಲ್ಲಿ ಈ ವಿಮಾನ ಮಾಯವಾಯಿತು. ಇದರಿಂದ ಮಾರಿಷಸ್ ಎಟಿಸಿ ಅಧಿಕಾರಿಗಳು ಆತಂಕ ಗೊಂಡರು. ಆದರೂ, ನಿಯಮಗಳಂತೆ, 30 ನಿಮಿಷ ಗಳವರೆಗೆ ಕಾದು ನೋಡುವ ನಿರ್ಧಾರಕ್ಕೆ ಬಂದರು. ಅವರ ದೃಷ್ಟಿ ಎದುರಿಗಿದ್ದ ಬೃಹತ್ ಇಲೆಕ್ಟ್ರಾನಿಕ್ ಪರದೆಯ ಮೇಲೆ ನೆಟ್ಟಿತ್ತು. ಸಂಜೆ, 4:58ರ ಹೊತ್ತಿಗೆ ವಿಮಾನ ಮತ್ತೆ ಸಾಂಕೇತಿಕವಾಗಿ ಎಟಿಸಿಯ ಇ-ಪರದೆಯ ಮೇಲೆ ಗೋಚ ರಿಸಿದಾಗ ಎಲ್ಲರೂ ನಿಟ್ಟುಸಿರು ಬಿಟ್ಟರು.
ಏತ ನ್ಮಧ್ಯೆ, ಸುಷ್ಮಾ ಸ್ವರಾಜ್, ಸುರಕ್ಷಿತವಾಗಿ ಜೊಹಾನ್ಸ್ ಬರ್ಗ್‌ಗೆ ಬಂದಿಳಿದಿದ್ದಾರೆಂದು ಎಎನ್‌ಐ ವರದಿ ಮಾಡಿದೆ.