* ಓವೆನ್ ಒಳಗಡೆ ಆಹಾರಪದಾರ್ಥಗಳನ್ನು ಇಡುವುದರಿಂದ ಅಲ್ಪಸ್ವಲ್ಪ ಆಹಾರ ಪದಾರ್ಥ ಸೋರಿಕೆಯಾಗುವುದು ಸಹಜ. ಪ್ರತೀಬಾರಿ ಯಾವುದೇ ಪದಾರ್ಥವನ್ನು ಬಿಸಿ ಮಾಡುವಾಗ, ಹಿಂದೆ ಅಳಿದುಳಿದ ಪದಾರ್ಥವೂ ಪದೇ ಪದೆ ಬಿಸಿಯಾಗುತ್ತಲೇ ಇರುತ್ತದೆ. ಕಾಲಕ್ರಮೇಣ ಅದುವೇ ದುರ್ನಾತಕ್ಕೆ ಕಾರಣವಾಗುತ್ತದೆ. ಅಲ್ಲದೆ, ಅದು ಓವೆನ್‌ನ ಕಾರ್ಯಕ್ಷಮತೆಯನ್ನು ಕುಗ್ಗಿ ಸುತ್ತದೆ. ಹೀಗಾಗಿ, ಆಗಿಂದಾಗ್ಗೆ ಒಳಭಾಗ ವನ್ನು ಶುಚಿಗೊಳಿಸುತ್ತಿರಬೇಕು.
* ಒಳಭಾಗದಲ್ಲಿ ಆಹಾರಪದಾರ್ಥ ಉಳಿದುಬಿಡುವಂತೆಯೇ, ಹೊರಭಾಗದಲ್ಲೂ ಎಣ್ಣೆ ಮುಂತಾದ ಗಟ್ಟಿ ಕಲೆ ಉಳಿದುಕೊಳ್ಳುತ್ತದೆ. ಅದರಲ್ಲೂ ಹೊರಭಾಗದಲ್ಲಿರುವ ಬಟನ್‌ಗಳ ಮೇಲೆ ಕಲೆಗಳು ಕೂರುವ ಸಾಧ್ಯತೆ ಹೆಚ್ಚು. ಹಾಗಾಗಿ, ಅದನ್ನು ಕೂಡಾ ಆಗಾಗ ಸ್ವತ್ಛಗೊಳಿಸುತ್ತಿರಬೇಕು.
* ಓವೆನ್ ಬಳಸಿ ಆಹಾರ ಪದಾರ್ಥ ಬಿಸಿ ಮಾಡಲು ಎಲ್ಲಾ ಪಾತ್ರೆಗಳು ಸರಿಹೊಂದುವುದಿಲ್ಲ. ಮೈಕ್ರೊ ವೇವ್ ಓವೆನ್ ಗ್ರೇಡ್ ಕಂಟೇನರ್/ ಪಾತ್ರೆಗಳನ್ನೇ ಬಳಸಬೇಕು. ಆಹಾರ ಪದಾರ್ಥ ಒಳಗೊಂಡ ಕಂಟೇನರ್ ಇಡುವಾಗ ಮುಚ್ಚಿಡುವುದರಿಂದ, ಆಹಾರ ಪದಾರ್ಥ ಸೋರಿಕೆಯಾಗುವುದು ತಪ್ಪುತ್ತದೆ. ಆದರೆ, ಆ ಮುಚ್ಚಳ ಮೈಕ್ರೊವೇವ್ ಓವೆನ್ ಗ್ರೇಡ್ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
* ಲೋಹದ ಪಾತ್ರೆಯನ್ನು ಯಾವ ಕಾರಣಕ್ಕೂ ಓವೆನ್ ಒಳಗೆ ಇಡಬಾರದು. ಏಕೆಂದರೆ ಮೈಕ್ರೊವೇವ್ ತರಂಗಗಳು ಲೋಹದ ಪಾತ್ರೆಗ ತಾಕಿ ಪ್ರತಿಫಲಿತಗೊಳ್ಳುತ್ತವೆ. ಇದರಿಂದ ಪಾತ್ರೆ ಶಾಖಕ್ಕೆ ಒಳಗೊಳ್ಳುತ್ತದೆ. ಇದು ಒಳಗಿನ ಬಿಡಿಭಾಗಗಳಿಗೆ ಹಾನಿಯುಂಟು ಮಾಡಬಹುದು.
* ಓವೆನ್ ನ ಬಾಗಿಲನ್ನು ಸರಿಯಾಗಿ ಮುಚ್ಚಬೇಕು. ಬಾಗಿಲು ಕೆಟ್ಟು ಹೋಗಿದ್ದರೆ ಇಲ್ಲವೇ ಸೀಲ್ ಬಿಟ್ಟುಕೊಂಡಿದ್ದರೆ, ಓವೆನ್ ಅನ್ನು ಬಳಸಲು ಹೋಗಬಾರದು.