Advertisement
ತಾವು ಬರೆದ “ಹಿಟ್ ರೀಫ್ರೆಶ್’ ಪುಸ್ತಕದಲ್ಲಿ ಈ ಕುರಿತಾಗಿ ಹೇಳಿದ್ದು, 2017ರ ಮೈಕ್ರೋಸಾಫ್ ಇಗ್ನೆ„ಟ್ ಸಮ್ಮೇಳನದಲ್ಲಿ ಲೋಕಾರ್ಪಣೆ ಮಾಡಿದರು. ಭಾರತ ಡಿಜಿಟಲ್ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿರುವ ಅವರು, ಭಾರತದ ಶತಕೋಟಿ ಜನರಿಗೆ ಆಧಾರ್ ಇಂದು ಅಳತೆ ಮಾಪನ ಎನ್ನುವಂತಾಗಿದೆ. ಉಳಿದ ಪ್ಲಾಟ್‌ಫಾರ್ಮ್ ಗಳಾದ ವಿಂಡೋಸ್, ಆ್ಯಂಡ್ರಾಯ್ಡ ಅಥವಾ ಫೇಸ್‌ಬುಕ್‌ಗಳ ಆವಿಷ್ಕಾರಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖೀಸಿದ್ದಾರೆ. ಅಷ್ಟೇ ಅಲ್ಲ, ಇಂಥ ಆವಿಷ್ಕಾ ರಗಳ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಇಂದು ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್‌ಫೇಸ್ (ಎಪಿಐ) ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದೆ. ಸರಕಾರಿ ಆಡಳಿತ, ಉದ್ಯಮ , ಉದ್ಯಮಶೀಲ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಡಿಜಿಟಲ್ ಸೌಲಭ್ಯಗಳನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕಿದೆ. ಈ ಮೂಲಕ ಭಾರತದಲ್ಲಿನ ನಗದು ರಹಿತ, ಕಾಗದ ರಹಿತ ಹಾಗೂ ವ್ಯಕ್ತಿ ಅನುಪಸ್ಥಿತಿಯಲ್ಲೂ ಸರಾಗವಾಗಿ ಕಾರ್ಯನಿರ್ವಹಿಸುವಂಥ ಸೇವಾ ಕ್ಷೇತ್ರಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.
ಸತ್ಯ ನಾದೆಳ್ಲ, ಮೈಕ್ರೋಸಾಫ್ಟ್ ಸಿಇಒ