Advertisement
ಕಂಪೆನಿಗಳಲ್ಲಿ ವಾರ್ಷಿಕವಾಗಿ ಸಿಗುವ ಬೋನಸ್ ಹಾಗೂ ಇನ್ನಿತರೇ ಸೌಲಭ್ಯಗಳು ಈ ವರ್ಷ ಹೇಳಹೆಸರಿಲ್ಲದಂತಾಗಿದೆ. ಆದರೇ, ತಂತ್ರಜ್ಞಾನ ಕಂಪೆನಿಗಳ ದೈತ್ಯ ಎಂದೇ ಕರೆಸಿಕೊಳ್ಳುವ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಈ ಕೋವಿಡ್ ನ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಬೋನಸ್ ನೀಡಿದೆ.
Related Articles
Advertisement
ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಉದ್ಯೋಗಿಗಳ ಮತ್ತು ಕಂಪನಿಯ ಮೌಲ್ಯಯುತ ಸಂಬಂಧವನ್ನು ಇರಿಸಿಕೊಳ್ಳುವ ಉದ್ದೇಶದಿಂದ ಈ ಬೋನಸ್ ನೀಡಲಾಗುತ್ತಿದೆ.
ಈ ಬೋನಸ್ ನೀಡುವುದರಿಂದ ಕಂಪನಿಗೆ ಸುಮಾರು 200 ಮಿಲಿಯನ್ ಡಾಲರ್ ಆರ್ಥಿಕ ವೆಚ್ಚ ಹೆಚ್ಚಾಗಲಿದೆ, ಆದರೆ ಉದ್ಯೋಗಿ ಮತ್ತು ಕಂಪನಿ ನಡುವಿನ ನಂಬಿಕೆ ಉಳಿಸಿಕೊಳ್ಳಲು, ಸಂಸ್ಥೆಗಾಗಿ ಶ್ರಮ ಪಡುತ್ತಿರುವು ಉದ್ಯೋಗಿಗಳಿಗೆ ಇದು ಅಗತ್ಯ ಎಂದು ಸಂಸ್ಥೆ ತಿಳಿಸಿರುವುದಾಗಿ ವರದಿಯಲ್ಲಿ ವಿವರಿಸಲಾಗಿದೆ.
ಇನ್ನು, ಈ ವರ್ಷದ ಮೊದಲ ತ್ರೈ ಮಾಸಿಕದ ಕೊನೆಯಾಗುವ ಸಂದರ್ಭದಲ್ಲಿ ಮೈಕ್ರೋಸಾಫ್ಟ್ 125 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಈ ಬೋನಸ್ ಕುರಿತು ಇತ್ತೀಚೆಗೆ ಪ್ರಕಟಿಸಿದ ಮೈಕ್ರೋಸಾಫ್ಟ್ ಸಿಪಿಒ, ಜುಲೈ ಮತ್ತು ಆಗಸ್ಟ್ ಒಳಗೆ ಕಂಪನಿಯ ಪ್ರಪಂಚದ ಎಲ್ಲ ಮೂಲೆಯಲ್ಲಿರುವ ಉದ್ಯೋಗಿಗಳಿಗೆ ಈ ಬೋನಸ್ ಕೈ ಸೇರಲಿದೆ ಎಂದು ಹೇಳಿದೆ.
31 ಮಾರ್ಚ್ 2021 ರ ಮೊದಲೇ ಕಾರ್ಪೊರೇಟ್ ಉಪಾಧ್ಯಕ್ಷನ ಕೆಳ ಹುದ್ದೆಗಳಿಗೆ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಎಲ್ಲಾ ನೌಕರರಿಗೆ ಈ ಬೋನಸ್ ದೊರಕಲಿದೆ.
ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಸುಮಾರು 155,508 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಆಯಾಯ ಉದ್ಯೋಗಿಗಳ ಹುದ್ದೆಯ ಮಾನದಂಡವನ್ನು ಆಧಾರಿಸಿ ಈ ವಿಶೇಷ ಭತ್ಯೆ ಲಭಿಸಲಿದೆ.
ಇದನ್ನೂ ಓದಿ : ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ‘ಸೈದ್ಧಾಂತಿಕ ಬದಲಾವಣೆ’ ಅಗತ್ಯವಿದೆ: ಕೋಚ್ ರಮೇಶ್ ಪೊವಾರ್