ವಾಷಿಂಗ್ಟನ್: ಪ್ರತಿಷ್ಠಿತ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಸತ್ಯ ನಾದೆಲ್ಲಾ ಅವರ ಪುತ್ರ ಝೈನ್ ನಾದೆಲ್ಲಾ (26ವರ್ಷ) ಸೋಮವಾರ (ಫೆ.28) ನಿಧನರಾಗಿರುವುದಾಗಿ ಮೈಕ್ರೋಸಾಫ್ಟ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವಾಣಿಜ್ಯ ಬಳಕೆಯ ಸಿಲಿಂಡರ್ ದರ 105 ರೂಪಾಯಿ ಏರಿಕೆ; ನಗರ ಪ್ರದೇಶದಲ್ಲಿ LPG ಬೆಲೆ ವಿವರ…
ಸೋಮವಾರ ಬೆಳಗ್ಗೆ ಝೈನ್ ನಾದೆಲ್ಲಾ ಅವರು ವಿಧಿವಶರಾಗಿರುವುದಾಗಿ ಸಾಫ್ಟ್ ವೇರ್ ತಯಾರಿಕಾ ಕಂಪನಿ ಮೈಕ್ರೋಸಾಫ್ಟ್ ತನ್ನ ಕಾರ್ಯನಿರ್ವಾಹಕ ಸಿಬಂದಿಗಳಿಗೆ ಇ-ಮೇಲ್ ಮೂಲಕ ವಿಷಯ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ನೂತನ ಸಿಇಒ ಆಗಿ ನೇಮಕಗೊಂಡಿದ್ದರು. ನಾದೆಲ್ಲಾ ಅವರು ಮೈಕ್ರೋಸಾಫ್ಟ್ ಪ್ರವೇಶಿಸಿದ ನಂತರ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸರ್ಚ್ ಮಾರುಕಟ್ಟೆಯಲ್ಲಿ ಮತ್ತೆ ವಹಿವಾಟು ಚೇತರಿಸಿಕೊಂಡಿತ್ತು.
ಮೂಲತಃ ಆಂಧ್ರದವರಾದ ಸತ್ಯ ನಾದೆಲ್ಲಾ, ಕರ್ನಾಟಕದಲ್ಲಿರುವ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಮುಗಿಸಿದ್ದರು. ಹಾಗೆಯೇ ಎಂಎಸ್ ಅನ್ನು ಸ್ಟಾನ್‌ಫೋರ್ಡ್ ಮತ್ತು ಎಂಬಿಎ ಅನ್ನು ವಾರ್ಟನ್‌ನಲ್ಲಿ ಮುಗಿಸಿದ್ದಾರೆ. 2014ರಲ್ಲಿ ಮೈಕ್ರೋಸಾಫ್ಟ್ ನ ಸ್ಟೀವ್ ಬಾಲ್ಮರ್ ಅವರಿಂದ ಸಿಇಒ ಹುದ್ದೆ ಸ್ವೀಕರಿಸಿದ ಇವರು, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.