ನಿಮ್ಮಲ್ಲಿ ಹಲವರಿಗೆ ಮೈಕ್ರೋಮ್ಯಾಕ್ಸ್ ಎಂಬ ಹೆಸರು ಗೊತ್ತು.2014ಕ್ಕಿಂತ ಹಿಂದೆ ಭಾರತದ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡಿದ್ದಕಂಪೆನಿ ಇದು. ಭಾರತೀಯ ಉದ್ಯಮಿಯ ಒಡೆತನವಿದ್ದ ಈ ಕಂಪೆನಿ, ಆಗ ಚೀನಾದಲ್ಲಿ ಅನ್‌ಬ್ರಾಂಡೆಡ್ ಕಂಪೆನಿಗಳು ತಯಾರಿಸಿದ ಮೊಬೈಲ್ ಗೆ ತನ್ನ ಹೆಸರು ಹಾಕಿಕೊಂಡು ಮಾರಾಟ ಮಾಡುತ್ತಿತ್ತು. ಚೀನಾದ ಬ್ರಾಂಡೆಡ್ ಕಂಪೆನಿಗಳೇ ಭಾರತದಲ್ಲಿ ಮೊಬೈಲ್ ಫೋನ್ ತಯಾರಿಸಿ ಮಾರಾಟ ಮಾಡಲು ಶುರು ಮಾಡಿದ ಮೇಲೆ, ಆ ಪೈಪೋಟಿ ಎದುರಿಸಲಾಗದೇ ಹಿಂದೆ ಸರಿದಿತ್ತು.
ಆತ್ಮನಿರ್ಭರ ಭಾರತ್ ಎಂಬ ಪರಿಕಲ್ಪನೆ ಬಂದ ನಂತರ ಮತ್ತೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದೆ. ಭಾರತೀಯ ಉದ್ಯಮಿಯ ಒಡೆತನದ ಜೊತೆಗೆ ಭಾರತದಲ್ಲೇ ಮೊಬೈಲ್ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿರುವುದಾಗಿ ಕಂಪನಿ ತಿಳಿಸಿದೆ.
ಹೊಸ ಮೊಬೈಲ್ ಸರಣಿಯನ್ನು “ಇನ್’ ಎಂಬ ಬ್ರಾಂಡ್ ಅಡಿಯಲ್ಲಿ ಹೊರತರುತ್ತಿದೆ. ಕಳೆದ ವಾರವಷ್ಟೇ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳ ಹೆಸರು ಇನ್1 ಬಿ ಹಾಗೂ ಇನ್ ನೋಟ್1. ಇನ್ 1 ಬಿ: ಇದು ಆರಂಭಿಕ ವಲಯದ ಸ್ಮಾರ್ಟ್‌ಫೋನ್.6.5 ಇಂಚಿನ ಮಿನಿ ಡ್ರಾಪ್ ಎಚಿx ಪ್ಲಸ್ (1600720) ಐಪಿಎಸ್ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಹೀಲಿಯೋ ಜಿ35 ಎಂಟುಕೋರ್‌ಗಳ ಪೊ›ಸೆಸರ್ ಹೊಂದಿದೆ.
ಎರಡೂ ಮಾದರಿಗಳು ಪ್ಯೂರ್ ಆಂಡ್ರಾಯ್ಡ್ ಫೋನ್ ಆಗಿದ್ದು, ಕಂಪನಿಯಿಂದ ಬೇರಾವುದೇ ಸ್ವಂತ ಯೂಸರ್ ಇಂಟರ್‌ಫೇಸ್ ಹಾಕಿಲ್ಲ. ಅಂಡ್ರಾಯ್ಡ್ 10 ಗೋ ಎಡಿಷನ್ ಹೊಂದಿದೆ.
13 +2ಮೆ.ಪಿ. ಹಿಂಬದಿ ಕ್ಯಾಮೆರಾ ಹಾಗೂ 8 ಮೆ.ಪಿ. ಮುಂಬದಿ ಕ್ಯಾಮೆರಾ ಇದೆ.5000 ಎಂಎ ಎಚ್ ಬ್ಯಾಟರಿ,10 ವ್ಯಾಟ್‌ನ ವೇಗದ ಚಾರ್ಜರ್, ಟೈಪ್ ಸಿ ಪೋರ್ಟ್, ಹಿಂಬದಿ ಬೆರಳಚ್ಚು ಸ್ಕಾನರ್ ಹೊಂದಿದೆ. ಇದು2ಜಿಬಿ ರ್ಯಾಮ್ ಮತ್ತು32 ಜಿಬಿ ಆಂತರಿಕ ಸಂಗ್ರಹ (ದರ:7000 ರೂ.),4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ (ದರ:8000 ರೂ.) ಎರಡು ಆವೃತ್ತಿಯಲ್ಲಿ ಲಭ್ಯವಿದೆ. ನೀಲಿ, ನೇರಳೆ, ಹಸಿರು ಬಣ್ಣದಲ್ಲಿ ದೊರಕುತ್ತದೆ.
ಇನ್ ನೋಟ್ 1: ಇದು ಮಧ್ಯಮ ವಲಯದ ಸ್ಮಾರ್ಟ್‌ಫೋನ್. ಮೀಡಿಯಾ ಟೆಕ್ ಹೀಲಿಯೋ ಎಂಟುಕೋರ್‌ಗಳ ಜಿ 85 ಪ್ರೊಸೆಸರ್ ಹೊಂದಿದೆ. ಫೋನಿನ ಪರದೆ 6.67 ಇಂಚಿದೆ. ಫುಲ್ ಎಚ್‌ಡಿ ಪ್ಲಸ್ (10802400) ಐಪಿಎಸ್ ಡಿಸ್‌ಪ್ಲೇ ಇದೆ. ಹಿಂಬದಿ ನಾಲ್ಕು ಕ್ಯಾಮೆರಾ ಲೆನ್ಸ್ ಇವೆ. (48 ಮೆ.ಪಿ. + 5ಮೆ.ಪಿ. + 2 ಮೆ.ಪಿ. + 2 ಮೆ.ಪಿ), ಸೆಲ್ಫಿಗಾಗಿ 16 ಮೆ.ಪಿ. ಕ್ಯಾಮೆರಾ ಇದ್ದು5000 ಎಂಎಎಚ್ ಬ್ಯಾಟರಿ ಇದೆ. ಇದಕ್ಕೆ18 ವ್ಯಾಟ್ ವೇಗದ ಚಾರ್ಜರ್ (ಯುಎಸ್‌ಬಿ ಟೈಪ್ ಸಿ ಪೋರ್ಟ್) ನೀಡಲಾಗಿದೆ. ಇದು ಸಹ ಎರಡು ಆವೃತ್ತಿಗಳಲ್ಲಿ ಲಭ್ಯ.
4ಜಿಬಿ ರ್ಯಾಮ್ 64 ಜಿಬಿ ಆಂತರಿಕ ಸಂಗ್ರಹ (ದರ:11 ಸಾವಿರ ರೂ.)4 ಜಿಬಿ ರ್ಯಾಮ್ ಮತ್ತು128 ಜಿಬಿ ಆಂತರಿಕ ಸಂಗ್ರಹ (ದರ:12,500 ರೂ.) ಬಿಳಿ ಮತ್ತು ಹಸಿರು ಬಣ್ಣದಲ್ಲಿ ಲಭ್ಯ. ಎರಡೂ ಮೊಬೈಲ್‌ಗಳು ನವೆಂಬರ್ 24ರಿಂದ ಮೈಕ್ರೋಮ್ಯಾಕ್ಸ್ ಆನ್ ಲೈನ್ ಸ್ಟೋರ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ದೊರಕಲಿವೆ.
*ಕೆ.ಎಸ್. ಬನಶಂಕರ ಆರಾಧ್ಯ