Advertisement
ಸೂಕ್ಷ್ಮ ಜೀವ ವಿಜ್ಞಾನವು ಮೂಲಭೂತವಾಗಿ ಸೂಕ್ಷ್ಮ ಜೀವಿಗಳ ಅಧ್ಯಯನವಾಗಿದ್ದು ಅವುಗಳ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ತಿಳಿಯುವುದಾಗಿದೆ. ಇದನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ. ಇಂತಹ ಸೂಕ್ಷ್ಮ ಜೀವಿಗಳು ಪರಿಸರದಲ್ಲಿ ತಮ್ಮ ಅಸ್ತಿತ್ವವನ್ನು ಹೇಗೆ ಕಂಡುಕೊಂಡಿವೆ ಹಾಗೂ ತಮ್ಮ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ತಿಳಿಯಲು ಮೈಕ್ರೋಬಯಾಲಜಿ ಅಧ್ಯಯನ ಅನುವು ಮಾಡಿಕೊಡುತ್ತದೆ.
Related Articles
Advertisement
ಸೂಕ್ಷ್ಮ ಜೀವವಿಜ್ಞಾನಿಗಳು, ಸೂಕ್ಷ್ಮಜೀವಿಗಳನ್ನು ಅಧ್ಯಯನ ಮಾಡುತ್ತಾರೆ. ಜೆನ್ನರ್ ಈತ ಸಿಡುಬಿನ ವಿರುದ್ಧ ಲಸಿಕೆಯನ್ನು ಕಂಡುಹಿಡಿದ, ಪ್ಲೇಮಿಂಗ್
ಪೆನ್ಸಿಲಿಯಂ ಆವಿಷ್ಕರಿಸಿದ, ಮಾರ್ಷಲ್ ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು ಮತ್ತು ಹೊಟ್ಟೆಯ ಹುಣ್ಣುಗಳ ನಡುವಿನ ಲಿಂಕ್ ಅನ್ನು ಗುರುತಿಸಿದ. ಹೀಗೆ ಸೂಕ್ಷ್ಮ ಜೀವವಿಜ್ಞಾನವು ಜೀವಶಾಸ್ತ್ರದ ಪ್ರಮುಖ ವಿಭಾಗಗಳಲ್ಲಿ ಒಂದಾಗಿದೆ. ಈ ಸೂಕ್ಷ್ಮ ಜೀವಿಗಳು ಹೇಗೆ ರೋಗಗಳಿಗೆ ಕಾರಣವಾಗುತ್ತವೆ ಎಂಬುದನ್ನು ಗುರುತಿಸಲು, ಅಂತಹ ಕಾಯಿಲೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಮತ್ತು ಕೈಗಾರಿಕಾ ಉದ್ದೇಶಗಳಿಗೆ ಕೆಲವು ಸೂಕ್ಷ್ಮ ಜೀವಿಗಳನ್ನು ಬಳಸಲಾಗುತ್ತಿದೆ. ಇಂತಹ ಸೂಕ್ಷ್ಮ ಜೀವವಿಜ್ಞಾನ
ಬ್ಯಾಕ್ಟೀರಿಯಾಲಾಜಿ – ಬ್ಯಾಕ್ಟೀರಿಯಾಗಳ ಅಧ್ಯಯನ
ಮೈಕಾಲಜಿ – ಶಿಲಿಂದ್ರಗಳ ಅಧ್ಯಯನ
ಪ್ರೋಟೋ- ಝೂಲಜಿ – ಯುಕ್ಯಾರಿಯೋಟಿಕ್ ಜೀವಿಗಳ ಅಧ್ಯಯನ
ಫೈಕಲಾಜಿ – ಪಾಚಿಗಳ ಅಧ್ಯಯನ
ಹೀಗೆ ವಿವಿಧ ಶಾಖೆಗಳನ್ನು ಹೊಂದಿದೆ. ಅನೇಕ ಸೂಕ್ಷ್ಮಾಣು ಜೀವಿಗಳು, ಸಸ್ಯಗಳು ಪ್ರಾಣಿಗಳು ಮತ್ತು ಮಾನವರ ಮೇಲೆ ವ್ಯಾಪಕವಾದ ರೋಗಗಳನ್ನು ಉಂಟು ಮಾಡುತ್ತಿವೆ.
ವೈರಸ್ ಬ್ಯಾಕ್ಟೀರಿಯಾ ಮತ್ತು ಶಿಲೀ೦ದ್ರ ಗಳಿಂದ ಬರುವ ರೋಗಗಳು ಮಾನವ ಜೀವವನ್ನು ಬಲಿ ಪಡೆದಿವೆ. ಸಾಕುಪ್ರಾಣಿಗಳನ್ನು ನಾಶ ಮಾಡಿವೆ. ಬೆಳೆಗಳಿಗೆ ಹಾನಿ ಉಂಟುಮಾಡಿವೆ. ಸೂಕ್ಷ್ಮಜೀವಿಗಳು ಮತ್ತು ಜೀವಸಂಕುಲದ ಸಂಬಂಧವನ್ನು ಕಂಡುಹಿಡಿಯುವ ಮೊದಲು ಅನೇಕ ರೋಗಗಳು ಬರುತ್ತಿದ್ದವು. ಈ ರೋಗಗಳಿಗೆ ಕಾರಣ ತಿಳಿದಿರಲಿಲ್ಲ. ಸೂಕ್ಷ್ಮ ಜೀವವಿಜ್ಞಾನದ ಕ್ಷೇತ್ರದ ಬೆಳವಣಿಗೆಗಳು ಸೂಕ್ಷ್ಮಜೀವಿಗಳ ಜೀವನದ ಒಳನೋಟವನ್ನು ನೀಡಿತ್ತು. ಸೂಕ್ಷ್ಮಜೀವಿಗಳ ರಚನೆ, ಶರೀರಶಾಸ್ತ್ರ, ಬೆಳವಣಿಗೆ, ಚಯಾಪಚಯ ಕ್ರಿಯೆ, ಜೀವನಚಕ್ರ ಮತ್ತು ಜೆನೆಟಿಕ್ಸ್ ಇತ್ಯಾದಿಗಳ ಅಧ್ಯಯನ ಹಲವಾರು ರೋಗಗಳನ್ನು ನಿಯಂತ್ರಿಸಲು ನಮಗೆ ಅನುವುಮಾಡಿಕೊಟ್ಟಿತು.
ಮೈಕ್ರೋಬಯಾಲಜಿ ಸಂಶೋಧನೆಯು ಪ್ರಸ್ತುತ ಜಾಗತಿಕ ಆಕಾಂಕ್ಷೆಗಳು ಮತ್ತು ಸವಾಲುಗಳನ್ನು ಎದುರಿಸಲು ಕೇಂದ್ರವಾಗಿದೆ, ಉದಾಹರಣೆಗೆ ವಾಸಯೋಗ್ಯ ಭೂಮಿಯ ಮೇಲೆ ಆರೋಗ್ಯವಂತ ಜನಸಂಖ್ಯೆಗೆ ಆಹಾರ, ನೀರು ಮತ್ತು ಇಂಧನ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು. ಮೈಕ್ರೋಬಯಾಲಜಿ ಸಂಶೋಧನೆಯು ‘ಭೂಮಿಯ ಮೇಲಿನ ಜೀವನ ಎಷ್ಟು ವೈವಿಧ್ಯಮಯವಾಗಿದೆ?’, ಮತ್ತು ‘ವಿಶ್ವದಲ್ಲಿ ಬೇರೆಡೆ ಜೀವನ ಅಸ್ತಿತ್ವದಲ್ಲಿದೆಯೇ’ ಎಂಬ ದೊಡ್ಡ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡಿದೆ. ಮೈಕ್ರೋಬಯಾಲಜಿ ಆವಿಷ್ಕಾರದಿಂದ ಹಲವಾರು ಕೊಡುಗೆಗಳು ಸೂಕ್ಷ್ಮಜೀವ ವಿಜ್ಞಾನ ಕ್ಷೇತ್ರಕ್ಕೆ ದೊರೆತಿವೆ ಇದರಿಂದಾಗಿ ನಾವು ವಾಸಿಸುವ ಜಗತ್ತು ತೀವ್ರಗತಿಯಲ್ಲಿ ಗಮನಾರ್ಹವಾಗಿ ಬದಲಾಗುತ್ತಿದೆ.