Advertisement

ಮಿಕ್ಕಿ ಆರ್ಥರ್‌ ಲಂಕಾ ಕ್ರಿಕೆಟ್‌ ಕೋಚ್‌

12:36 AM Dec 05, 2019 | Sriram |

ಕೊಲಂಬೊ: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಿಕ್ಕಿ ಆರ್ಥರ್‌ ಶ್ರೀಲಂಕಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಮುಂದಿನ 2 ವರ್ಷಗಳ ಅವಧಿಯ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆ್ಯಶೆ ಡಿ’ ಸಿಲ್ವ ತಿಳಿಸಿದರು.

Advertisement

ಮಿಕ್ಕಿ ಆರ್ಥರ್‌ ಈ ಮೊದಲು ಪಾಕಿಸ್ಥಾನ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಗಳ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಪಾಕಿಸ್ಥಾನ ವಿರುದ್ಧದ ಸರಣಿ ಮೂಲಕವೇ ಅವರು ಶ್ರೀಲಂಕಾ ಕೋಚ್‌ ಹುದ್ದೆಯ ಕಾರ್ಯವನ್ನು ಆರಂಭಿಸಲಿದ್ದಾರೆ.

ಆರ್ಥರ್‌ ಕಳೆದ 8 ವರ್ಷಗಳಲ್ಲಿ ಶ್ರೀಲಂಕಾ ಕ್ರಿಕೆಟ್‌ ಕಂಡ 11ನೇ ಕೋಚ್‌ ಆಗಿದ್ದಾರೆ. ಉಸ್ತುವಾರಿ ಕೋಚ್‌ ರುಮೇಶ್‌ ರತ್ನಾಯಕೆ ಕೂಡ ಈ ಸಂದರ್ಭದಲ್ಲಿ ತಂಡದ ಜತೆ ಇರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next