ಪಣಜಿ: ಗೋವಾದ ಕಡಲ ತೀರದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯುವ ಅಗತ್ಯವಿದೆ. ಕಡಲ ತೀರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಕಲಂಗುಟ್ ಅಸುರಕ್ಷಿತ ಎಂಬಂತಾಗುತ್ತದೆ ಎಂದು ಕಲಂಗುಟ್ ಕ್ಷೇತ್ರದ ಶಾಸಕ ಮೈಕಲ್ ಲೋಬೊ ನುಡಿದರು.
ರಾಜ್ಯ ಪ್ರವಾಸೋದ್ಯಮ ವಿಷಯಗಳ ಕುರಿತು ಚರ್ಚಿಸಲು ಸ್ಥಳೀಯ ಪಂಚಾಯತ ಸದಸ್ಯರೊಂದಿಗೆ ಶಾಸಕ ಮೈಕಲ್ ಲೋಬೊ ರವರು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರನ್ನು ಭೇಟಿ ಮಾಡಿ ಚರ್ಚಿಸಿದರು.
ಚರ್ಚೆಯ ನಂತರ ಶಾಸಕ ಮೈಕಲ್ ಲೋಬೊ ಸುದ್ಧಿಗಾರರೊಂದಿಗೆ ಮಾತನಾಡಿ- ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಅನುಸರಿಸಬೇಕು.
ಕಲಂಗುಟ್ ಪ್ರದೇಶದಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ಕೂಡಲೇ ಕಾರ್ಯಾಚರಣೆ ನಡೆಸಲು ಕ್ವಿಕ್ ರಿಸ್ಪೊನ್ಸ ಟೀಮ್ ಸ್ಥಾಪಿಸಲು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ. ಇಷ್ಟೇ ಅಲ್ಲದೆಯೇ ಪ್ರತ್ಯೇಕ ಅಗ್ನಿಶಾಮಕ ದಳ ಸ್ಥಾಪನೆಗೂ ಮನವಿ ಮಾಡಲಾಗಿದೆ. ಪ್ರವಾಸಿಗರನ್ನು ವಂಚಿಸುವ ಕೆಲ ಜಾಲಗಳಿಂದ ಗೋವಾ ಪ್ರವಾಸೋದ್ಯಮದ ಹೆಸರು ಹಾಳಾಗುತ್ತಿದೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮೈಕಲ್ ಲೋಬೊ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಲಖಿಂಪುರ ಖೇರಿ ಪ್ರಕರಣ: ಆಶಿಶ್ ಮಿಶ್ರಾ ಸೇರಿ ಇತರ 13 ಮಂದಿ ವಿರುದ್ಧ ಆರೋಪ ದಾಖಲಿಸಿದ ನ್ಯಾಯಾಲಯ