ಚೆನ್ನೈ; ಸಂಪೂರ್ಣವಾಗಿ ಭಾರತದಲ್ಲಿ ನಡೆಯಲಿರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮ್ ಲೀಗ್ (ಐಪಿಎಲ್) ನಲ್ಲಿಯೂ ಮಹೇಂದ್ರ ಸಿಂಗ್ ಧೋನಿ ಅವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸುವುದು ಬಹುತೇಕ ಖಚಿತವಾಗಿದೆ. ಆದರೆ 41 ವರ್ಷದ ಧೋನಿ ನಂತರ ಐಪಿಎಲ್ ನಲ್ಲಿ ಮುಂದುವರಿಯುವುದು ಅನುಮಾನ. ಹೀಗಾಗಿ ಮುಂದಿನ ನಾಯಕನ ಹುಡುಕಾಟದಲ್ಲಿದೆ ಸಿಎಸ್ ಕೆ ಫ್ರಾಂಚೈಸಿ.
ಕಳೆದ ಸೀಸನ್ ನಲ್ಲೇ ಸಿಎಸ್ ಕೆ ನಾಯಕನ ಬದಲಾವಣೆ ಮಾಡಿತ್ತು. ರವೀಂದ್ರ ಜಡೇಜಾ ಅವರು ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಆರಂಭಿಕ ಕೆಲವು ಪಂದ್ಯಗಳಲ್ಲಿನ ಸೋಲಿನ ಬಳಿಕ ಅವರು ಹುದ್ದೆ ತೊರೆದಿದ್ದರು.
ಇದೀಗ ಧೋನಿ ಉತ್ತರಾಧಿಕಾರಿಯನ್ನು ಸಿಎಸ್ ಕೆ ಹುಡುಕುತ್ತಿದೆ. ಕಳೆದ ಕೆಲವು ಋತುಗಳಲ್ಲಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಆ ಆಟಗಾರರ ಗುಂಪಿನಿಂದ ಯಾರನ್ನಾದರೂ ಕಂಡುಹಿಡಿಯಬೇಕಾಗಿದೆ.
ಅಂತಹ ಒಂದು ಹೆಸರು ಯುವ ಆಟಗಾರ ಋತುರಾಜ್ ಗಾಯಕ್ವಾಡ್. ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಮುರಿಯುವ ಜತೆಗೆ ತಮ್ಮ ದೇಶೀಯ ತಂಡವಾದ ಮಹಾರಾಷ್ಟ್ರವನ್ನು ವಿಜಯ್ ಹಜಾರೆ ಟ್ರೋಫಿ 2022 ರ ಫೈನಲ್ ಗೆ ಮುನ್ನಡೆಸಿದ್ದರು. ಉತ್ತಮ ಬ್ಯಾಟರ್ ಆಗಿರುವ ಗಾಯಕ್ವಾಡ್ ಶಾಂತ ಸ್ವಭಾವದವರು. ಭಾರತೀಯ ಕ್ರಿಕೆಟ್ ನ ಮುಂದಿನ ದೊಡ್ಡ ಆಸ್ತಿ ಎಂದೇ ಬಿಂಬಿಸಲಾಗಿರುವ ಗಾಯಕ್ವಾಡ್ ಅವರು ಮುಂದಿನ ಸಿಎಸ್ ಕೆ ನಾಯಕ ಆಗಬಹುದು ಎಂದು ಮಾಜಿ ಸಿಎಸ್ ಕೆ ಬ್ಯಾಟರ್ ಮತ್ತು ಪ್ರಸ್ತುತ ಸೂಪರ್ ಕಿಂಗ್ಸ್ ಕೋಚ್ ಮೈಕೆಲ್ ಹಸ್ಸಿ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ:ಮೊದಲು ಬೆಳಗಾವಿ-ಬೆಂಗಳೂರಿನಲ್ಲಿ ಮಹಾರಾಷ್ಟ್ರ ಭವನ ನಿರ್ಮಾಣಕ್ಕೆ ಜಾಗ ಕೊಡಿ: ಸಿಎಂಗೆ ರಾವತ್ ತಿರುಗೇಟು
“ಸಿಎಸ್ ಕೆ ಭವಿಷ್ಯದ ಯೋಜನೆಗಳೇನು ಎಂದು ನನಗೆ ಖಚಿತವಾಗಗಿ ತಿಳಿದಿಲ್ಲ, ಆದರೆ ಧೋನಿಯಂತೆ ಗಾಯಕ್ವಾಡ್ ತುಂಬಾ ಶಾಂತ ಸ್ವಭಾವದವರು. ಒತ್ತಡ ನಿಭಾಯಿಸುವ ಸಂದರ್ಭ ಬಂದಾಗ ಅವರು ತುಂಬಾ ಶಾಂತವಾಗಿರುತ್ತಾರೆ. ಆಟವನ್ನು ತುಂಬಾ ಚೆನ್ನಾಗಿ ಗಮನಿಸುತ್ತಾರೆ. ಸ್ವಭಾವ, ಪಾತ್ರ ಮತ್ತು ವ್ಯಕ್ತಿತ್ವದಿಂದಾಗಿ ಜನರು ಅವನತ್ತ ಆಕರ್ಷಿತರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಋತುರಾಜ್ ಕೆಲವು ಅತ್ಯುತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ” ಎಂದು ಹಸ್ಸಿ ಹೇಳಿದರು.