Advertisement

London ಹ್ಯಾರಿಪಾಟರ್‌ ನಟ ಮೈಕೆಲ್‌ ಗ್ಯಾಂಬೊನ್‌ ನಿಧನ

10:11 PM Sep 28, 2023 | Team Udayavani |

ಲಂಡನ್‌: ಹಾಲಿವುಡ್‌ನ‌ ಖ್ಯಾತ ಹಿರಿಯ ನಟ ಮೈಕೆಲ್‌ ಗ್ಯಾಂಬೊನ್‌ ಗುರುವಾರ ನಿಧನರಾಗಿದ್ದಾರೆ.

Advertisement

82 ವರ್ಷದ ಗ್ಯಾಂಬೊನ್‌, ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಗುರುವಾರ ಲಂಡನ್‌ನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರು ಪತ್ನಿ ಅನ್ನಿ, ಪುತ್ರ ಫ‌ರ್ಗುಸ್‌ ಅವರನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೈಕೆಲ್‌ ಗ್ಯಾಂಬೊನ್‌ ಅವರು “ಹ್ಯಾರಿ ಪಾಟರ್‌’ ಸರಣಿಯ ಸಿನಿಮಾಗಳಿಂದ ಖ್ಯಾತರಾಗಿದ್ದರು.

ಆ ಸಿನಿಮಾಗಳಲ್ಲಿ “ಪ್ರೊ. ಡಂಬಲ್‌ಡೋರ್‌’ ಪಾತ್ರದಿಂದ ಅವರು ಮನೆ ಮಾತಾಗಿದ್ದರು. ಸುಮಾರು ಐದು ದಶಕಗಳು ಹಾಲಿವುಡ್‌ ಸಿನಿ ಕ್ಷೇತ್ರದಲ್ಲಿ ಅವರು ಕೆಲಸ ಮಾಡಿದ್ದರು. ಗ್ಯಾಂಬೊನ್‌ ನಿಧನಕ್ಕೆ ಹಾಲಿವುಡ್‌ನ‌ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next