Advertisement

ಎಂಐಸಿ-ಮಣಿಪಾಲ: “ನಮ್ಮ ಅಂಗಡಿ’ಮಾರಾಟ ಮೇಳಕ್ಕೆ ಚಾಲನೆ

12:15 PM Mar 11, 2023 | Team Udayavani |

ಮಣಿಪಾಲ: ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯೂನಿಕೇಶನ್‌ (ಎಂಐಸಿ) ವತಿಯಿಂದ ಕಾನ್ಸರ್ನ್ಡ್ ಫಾರ್‌ ದಿ ವರ್ಕಿಂಗ್‌ ಚಿಲ್ಡ್ರನ್‌ ಮತ್ತು ಕುಂದಾಪುರದ ನಮ್ಮ ಭೂಮಿಯ ಸಹಯೋಗ ದಲ್ಲಿ ಎಂಐಸಿ ಆವರಣದಲ್ಲಿ ಮಾ. 10ರಿಂದ 12ರ ವರೆಗೆ ಹಮ್ಮಿಕೊಂಡಿರುವ ನಮ್ಮ ಅಂಗಡಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶುಕ್ರವಾರ ಮ ಣಿ ಪಾಲ ಮಾಹೆ ವಿ.ವಿ. ಸಹ ಕುಲಪತಿ ಡಾ| ಮಧುವೀರ ರಾಘವನ್‌ ಚಾಲನೆ ನೀಡಿದರು.

Advertisement

ಕರಕುಶಲ ವಸ್ತುಗಳಿಗೆ ಆದ್ಯತೆ ಹೆಚ್ಚಾಗಬೇಕು. ಇದರಲ್ಲಿ ವಿಶೇಷವಾದ ಪ್ರತಿಭೆ ಅಡಗಿರುತ್ತದೆ. ಬೇಡಿಕೆ ಹೆಚ್ಚುವಂತೆ ಮಾಡುವ ಜತೆ ಜತೆಗೆ ಕರಕುಶಲ ಉತ್ಪನ್ನಗಳ ಮಾರಾಟಕ್ಕೂ ಅಗತ್ಯವಾದ ಬೆಂಬಲ ನೀಡಬೇಕು. ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಂಡಿರುವುದರಿಂದ ಶೈಕ್ಷಣಿಕ ಹಾಗೂ ವೃತ್ತಿಪರ ಬದುಕಿಗೂ ನೆರವಾಗಲಿದೆ ಎಂದು ಅವರು ಶುಭ ಹಾರೈಸಿದರು.

ಸಿಡಡ್ಲ್ಯೂಸಿ ಆ್ಯಂಡ್‌ ಮಾರ್ಕೆಂಗ್‌ ಅಡ್ಮಿನಿಸ್ಟ್ರೇಟರ್‌ ಶ್ರೀನಿವಾಸ ಗಾಣಿಗ ಮಾತನಾಡಿ, ನಮ್ಮದು ಎಂಐಸಿ ಜತೆಗಿನ 20 ವರ್ಷಗಳ ಸುದೀರ್ಘ‌ ಪಯಣ. ಹಳ್ಳಿಯ ಕರಕುಶಲ ವಸ್ತುಗಳ ತಯಾರಕರಿಗೆ ಸೂಕ್ತ ವೇದಿಕೆ ಕಲ್ಪಿಸುವ ಜತೆಗೆ ಅವರ ಮಾರುಕಟ್ಟೆ ವ್ಯವಸ್ಥೆಯನ್ನು ವೃದ್ಧಿಸಲು ಎಂಐಸಿ ಸಹಕಾರಿಯಾಗಿದೆ ಎಂದು ಹೇಳಿದರು. ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ಶುಭ ಹಾರೈಸಿದರು.

Advertisement

ವಿಭಾಗದ ಮುಖ್ಯಸ್ಥ ಡಾ| ಪದ್ಮ ಕುಮಾರ್‌, ಸಂಯೋಜಕಿ ಸೌಪರ್ಣಿಕ ಅತ್ತಾವರ, ನಮ್ಮ ಭೂಮಿ ಮತ್ತು ಸಿಡಡ್ಲ್ಯೂಸಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಂಯೋಜಕಿ ಡಾ| ಮಂಜುಳಾ ವೆಂಕಟ ರಾ ಘವನ್‌ ಸ್ವಾಗತಿಸಿ, ಶೃತಿ ಸುಬ್ರಹ್ಮಣ್ಯ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ಕಾವ್ಯಾ ವಿ. ವಂದಿಸಿ, ಅದಿತಿ ಶ್ರೀವಾಸ್ತವ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next