Advertisement

ಪೋರ್ನೋಗ್ರಫಿ ಸ್ಟಾರ್ ಮಿಯಾ ಕಲೀಫ ಮತೀಯ ವೈಷಮ್ಯದಲ್ಲಿ ಬೆಂದಿದ್ದೇಕೆ..?

02:45 PM Aug 15, 2021 | ಶ್ರೀರಾಜ್ ವಕ್ವಾಡಿ |
ಅಮೆರಿಕಾದಲ್ಲೂ ಮುಸ್ಮೀಮರ ಮೇಲೆ ಮತೀಯ ವೈಷಮ್ಯ ತಾರಕಕ್ಕೇರಿತ್ತು. ಮಿಯಾ ಕಲೀಫ ಅವರ ಕುಟುಂಬ ಇದೇ ಸಂದರ್ಭದಲ್ಲಿ ಅಮೆರಿಕಾಕ್ಕೆ ಬಂದಿದ್ದಷ್ಟೇ, ಅಮೆರಿಕಾದಲ್ಲಿ ಮುಸ್ಮೀಂ ರ ಮೇಲೆ ದೊಡ್ಡ ವೈಷಮ್ಯದ ವಾತಾವರಣ ಸೃಷ್ಟಿಯಾಗಿದ್ದ ಕಾರಣದಿಂದಾಗಿ ಮಿಯಾ ಕಲೀಫ ಕುಟುಂಬ ಕೂಡ ಈ ಘರ್ಷಣೆ, ವೈಷಮ್ಯದ ಬಿಸಿಗೆ ಬೇಯಬೇಕಾಯ್ತು ಎನ್ನುವುದು ಸತ್ಯ.ಮಾಡೆಲಿಂಗ್ ಕ್ಷೇತ್ರದಲ್ಲಿ  ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಮಹತ್ತರ ಕನಸಿನೊಂದಿಗೆ ಕಾಲಿಟ್ಟಿದ್ದು, ಅಮೆರಿಕಾ ಮೂಲದ ಅಂತಾರಾಷ್ಟ್ರೀಯ ಪೋರ್ನೋಗ್ರಫಿ ಪ್ರೊಡಕ್ಷನ್ ಸಂಸ್ಥೆ ಬ್ಯಾಂಗ್ ಬ್ರೋಸ್ ಸಂಸ್ಥೆಗೆ.ಕಲೀಫಾ ಮೊದಲು ನಟಿಸಿದ ಮೊದಲ ಪೋರ್ನೋಗ್ರಫಿ ಶೋಗಳಲ್ಲಿ ಮುಸ್ಲೀಂ ಸಾಂಪ್ರದಾಯಿಕ ಧಿರಿಸನ್ನು ಧರಿಸಿ ನಟಿಸುವಂತೆ ಆ ಪ್ರೊಡಕ್ಷನ್ ಸಂಸ್ಥೆ ಕಲೀಫಳನ್ನು ಒತ್ತಾಯಿಸುತ್ತದೆ. ಆದರೇ, ಅದೇ ದೊಡ್ಡ ವಿವಾದದ ಮೂಟೆಯನ್ನು ಕಲೀಫಳ ತಲೆ ಮೇಲೆ ತಂದಿಡುತ್ತದೆ ಎಂಬ ಸಣ್ಣ ಆಲೋಚನೆಯೂ ಇಲ್ಲದ ಮುಗ್ದೆಯಾಗಿದ್ದಳು ಕಲೀಫ ಎಂದರೇ ತಪ್ಪಿಲ್ಲ‌.
Now pay only for what you want!
This is Premium Content
Click to unlock
Pay with

ಮಿಯಾ ಕಲೀಫ ಪೋರ್ನೋಗ್ರಫಿ ನಟಿ ಎಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ಆದರೇ, ಆಕೆಯ ಅದರ ಆಚೆಗಿನ ಬದುಕಿನ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ.

Advertisement

ಗೂಗಲ್, ವಿಕಿಪೀಡಿಯ ಎಲ್ಲಿಯೂ ಇಲ್ಲದ ಮಿಯಾ ಕಲೀಫ ಎಂಬ ಪೋರ್ನೋಗ್ರಫಿ ನಟಿಯ ಬದುಕಿನ ಹಿಂದಿನ ಕಥೆಯನ್ನು ತೆರೆದಿಡುವ ಪ್ರಯತ್ನ ಈ ಲೇಖನದಲ್ಲಿದೆ.

ಜಗತ್ತಿನಾದ್ಯಂತ 2016 ಹಾಗೂ 2018 ರಲ್ಲಿ ಪೋರ್ನ್ ಕ್ಷೇತ್ರದಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಹೆಸರು ಮಿಯಾ ಕಲೀಫ.

ಪೋರ್ನೋಗ್ರಫಿಯಲ್ಲಿ ದೊಡ್ಡ ಮಟ್ಟದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಹೆಸೆರೆಂದರೇ ಮಿಯಾ ಕಲೀಫ ಎಂದೇ ಹೇಳಬಹುದು. ಸಾಮಾಜಿಕ ಜಾಲತಾಣಗಳ ದೈತ್ಯ ವೇದಿಕೆಗಳನ್ನೆಸಿಕೊಂಡ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವೀಟರ್ ಎಲ್ಲಾ ಕಡೆ ಪೇಮ್, ನೇಮ್ ಎಲ್ಲದರ ಜೊತೆಗೆ ಮಿಯಾ ಕಲೀಫ ಹೆಸರಿನ ಜೊತೆಗೆ ದೊಡ್ಡ ವಿವಾದವೂ ಸುತ್ತಿಕೊಂಡಿತ್ತು.

ಮಿಯಾ ಕಲೀಫ ಪೋರ್ನೋಗ್ರಫಿ ಕ್ಷೇತ್ರದಲ್ಲಿ ಎಲ್ಲರಂತೆ ಅಲ್ಲ. ತನ್ನನ್ನು ತಾನು ಸಾಮಾಜಿಕವಾಗಿ ತೊಡಗಿಸಿಕೊಂಡವಳು, ಸಾಧ್ಯವಾದಷ್ಟು ತಪ್ಪುಗಳನ್ನು ಪ್ರಶ್ನಿಸಿದವಳು. ಅವಳ ಹೆಸರಿನ ಮೇಲೆ ಅವಳ ವ್ಯಕ್ತಿತ್ವವನ್ನು ಬೇರೆಯಾಗಿ ರೂಪಿಸಿದ ಸಿದ್ಧಾಂತ, ಸಾಮಾಜಿಕ ವ್ಯವಸ್ಥೆಯನ್ನು ಬಿಟ್ಟು ಯೋಚಿಸಿದರೇ, ಮಿಯಾ ಕಲೀಫ ನಡೆದು ಬಂದ ದಾರಿ ಅಷ್ಟು ಸುಲಭದ್ದಲ್ಲ.

Advertisement

ಜಾತಿ, ಧರ್ಮ, ವರ್ಣಗಳ ಬರ್ಕುಡಿ ಹೊಡೆದಾಟ, ಕಚ್ಚಾಟಗಳು, ಸಿದ್ಧಾಂತಗಳ ವಾಗ್ಯುದ್ಧಗಳು  ಆರಂಭವಾಗಿದ್ದು ಇಂದು ನಿನ್ನೆಯಲ್ಲ. ಅದಕ್ಕೆ ಸಾವಿರಾರು ವರ್ಷಗಳ ದೊಡ್ಡ ಇತಿಹಾಸವೇ ಇದೆ ಎಂದು ಹೇಳಬಹುದು.

ಮಿಯಾ ಕಲೀಫಳ ಬದುಕಿನ ಆರಂಭಕ್ಕೆ ಒಂದು ಒಳ್ಳೆಯ ಬಾಗಿಲೇ ಇರಲಿಲ್ಲ. ಜನಾಂಗೀಯ ದ್ವೇಷಕ್ಕೆ, ವರ್ಣ ಬೇಧಕ್ಕೆ ಸಿಲುಕಿ ತನ್ನ ಬದುಕಿನಲ್ಲಿ ಅಸಹನೀಯ ಸ್ಥಿತಿ ಕಂಡ ಹೆಣ್ಣವಳು. ತನಗಿಷ್ಟವಲ್ಲದ ಪೋರ್ನೋಗ್ರಫಿ ಕ್ಷೇತ್ರಕ್ಕೆ ತನಗೆ ಅರಿವಿಲ್ಲದೇ ಅದರ ಕಷ್ಟದ ಸಂಕೋಲೆಯಲ್ಲಿ ಸಿಲುಕಿ ಬೆಂದವಳು. ಆಕೆ ಕಂಡಿದ್ದು ಹೋರಾಟದ ಬದುಕು ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಸಾಮಾಜಿಕ ವಂಚನೆಗೆ ಸಿಲುಕಿದ ಕಲೀಫ, ಮೂಲತಃ ಪಶ್ಚಿಮ ಏಷ್ಯಾದ ಲೆಬನಾನಿನವಳು. ಬಿಳಿಯರ ದೇಶವೆಂದೇ ಕರೆಯಲ್ಪಡುವ ತನ್ನ ಕುಟುಂಬಕ್ಕೆ ಅಮೆರಿಕಕ್ಕೆ ಕಾಲಿಟ್ಟು ತನ್ನ ಬದುಕನ್ನು ಹೊಸ ದಾರಿಯಲ್ಲಿ ಕಂಡುಕೊಳ್ಳಬೇಕು ಎಂದುಕೊಂಡ ಕಲೀಫ ಕಂಡಿದ್ದು ಬರೀ ಶೋಚನೀಯ ಸ್ಥಿತಿ.

ಅಮೆರಿಕಾದಲ್ಲಿ ತನ್ನ ಬಾಲ್ಯದಿಂದಲೇ, ಅಂದರೆ ಶಾಲಾದಿನಗಳಿಂದಲೇ ವರ್ಣ ಬೇಧಕ್ಕೆ ಸಿಲುಕಿ ಬದಿಗೆ ತಳ್ಳಲ್ಪಟ್ಟವಳು. ಅಲ್ಲಿನ ಸಾಮಾಜಿಕ ಅಸಮಾನತೆ, ತಾರತಮ್ಯ ಎಲ್ಲವನ್ನೂ ಕಂಡು ಬದುಕಿದ ಕಲೀಫ, ವಯೋಸಹಜವಾಗಿ ಅಮೆರಿಕಾದ ಹುಡುಗನೋರ್ವನೊಂದಿಗೆ ಪ್ರೀತಿಗೆ ಬೀಳುತ್ತಾಳೆ. ಆದರೇ, ಆ ಪ್ರೀತಿಯೂ ಕಲೀಫಳಿಗೆ ಹಿತ ನೀಡಲಿಲ್ಲ. ಆತನಿಂದಲೂ ಮೋಸ ಹೋಗಿ ಕಲೀಫ ಸೋರಗಿದವಳು.

ದೇಹ ಸೌಂದರ್ಯವನ್ನು ಹೊಗಳಿದ ಒಬ್ಬನಿಂದ ಮಾಡೆಲ್ ಕ್ಷೇತ್ರಕ್ಕೆಂದು ಕಾಲಿಟ್ಟ ಕಲೀಫ, ಕಂಡಿದ್ದು ಪೋರ್ನೋಗ್ರಫಿ ಎಂಬ ಕರಾಳ ಕ್ಷೇತ್ರವನ್ನು. ಮಾಡೆಲ್ ಆಗಬೇಕೆಂಬ ಬಹುದೊಡ್ಡ ಕನಸ್ಸನ್ನು ಹೊತ್ತು, ಮಾಡೆಲ್ ಕ್ಷೇತ್ರಕ್ಕೆ ಕಾಲಿಟ್ಟು ಭ್ರಮನಿರಸನಕ್ಕೊಳಗಾದ ಕಲೀಫಳ ಬದುಕು ಕರುಣಾಜನಕ.

ಗೊತ್ತಿಲ್ಲದ, ಇಷ್ಟವಿಲ್ಲದ ಪೋರ್ನೋಗ್ರಫಿ  ಕ್ಷೇತ್ರಕ್ಕೆ ತನಗೆ ಅರಿವಿಲ್ಲದೇ ಕಾಲಿಟ್ಟ ಕಲೀಫ, ತನ್ನ ದೇಶದವರಿಂದಲೇ ದೇಶದ್ರೋಹಿ ಎಂಬ ಹಣೆ ಪಟ್ಟಿಯನ್ನು ಹಚ್ಚಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗುತ್ತದೆ.

2014 ರಲ್ಲಿ ಪೋರ್ನೋಗ್ರಫಿ ಕ್ಷೇತ್ರಕ್ಕೆ ಕಾಲಿಟ್ಟ ಕಲೀಫ, ನಟಿಸಿದ್ದು ಕೇವಲ ಹನ್ನೆರಡು ಪೋರ್ನ್ ವೀಡಿಯೋ ಗಳಲ್ಲಿ ಮಾತ್ರ. ಕಲೀಫ ಈಗ ಮಾಜಿ ನೀಲಿ ಚಿತ್ರದ ನಟಿ. ಕಲೀಫ ಇಂದಿಗೆ ಪೋರ್ನೋಗ್ರಫಿ ಕ್ಷೇತ್ರದಿಂದ ಕಾಲ್ಕಿತ್ತು ಏಳು ವರ್ಷಗಳಾದರೂ ಇಂದಿಗೂ ಪೋರ್ನ್ ಕ್ಷೇತ್ರದಲ್ಲಿ ಮಿಯಾ ಕಲೀಫ ಹೆಸರು ಟಾಪ್ ಲೆವೆಲ್ ನಲ್ಲೇ ಇದೆ.

ಕೇವಲ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಮಾತ್ರವಷ್ಟೇ ಪೋರ್ನೋಗ್ರಫಿ ಕ್ಷೇತ್ರದಲ್ಲಿ ಇದ್ದ ಕಲೀಫ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಹೆಸರು.

ಲೆಬನಾನ್ ನ ಮೂಲದವಳಾದ ಕಲೀಫ. ನಡೆದ ದೊಡ್ಡ ಮತೀಯ ಘರ್ಷಣೆ ನಡೆಯುತ್ತದೆ. ಮುಸಲ್ಮಾನರ ದೇಶದಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತ ಧರ್ಮದವರೊಂದಿಗೆ ಮತೀಯ ಸಂಘರ್ಷ ನಡೆಯುತ್ತದೆ. ಕಲೀಫ ಮೂಲತಃ  ಮುಸ್ಲಿಂ ಧರ್ಮಕ್ಕೆ ಸೇರಿದವಳಾದರೂ, ನಂತರದ ದಿನಗಳಲ್ಲಿ ಆಕೆಯ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತದೆ.

2000 ದ ಸಂದರ್ಭದಲ್ಲಿ ಅಮೆರಿಕಾಕ್ಕೆ ತನ್ನ ಕುಟುಂಬಕ್ಕೆ ಬಂದ ಕಲೀಫ, ಇಲ್ಲಿ ಕಂಡಿದ್ದು ಕೂಡ ಕಷ್ಟದ ದಿನಗಳನ್ನೇ. ಅಲ್ಲಿನ ಟ್ವಿನ್ ಟವರ್ ಗಳು ದ್ವಂಸವಾದ ಸಂದರ್ಭವದು. ವಸಾಮ ಬಿನ್ ಲಾಡೆನ್ ಉಗ್ರರ ಪಡೆಯ ದಾಳಿಗೆ ಬಲಿಯಾದ ನಂತರ ಅಮೆರಿಕಾದಲ್ಲೂ ಘರ್ಷಣೆಗಳು, ಸಾಮಾಜಿಕ ದಂಗೆಗಳು, ರಾಜಕೀಯ ಕೋಲಾಹಲ ಸೃಷ್ಟಿಯಾಗಿದ್ದು ದೊಡ್ಡ ಇತಿಹಾಸ.

ಅಮೆರಿಕಾದಲ್ಲೂ ಮುಸ್ಮೀಮರ ಮೇಲೆ ಮತೀಯ ವೈಷಮ್ಯ ತಾರಕಕ್ಕೇರಿತ್ತು. ಮಿಯಾ ಕಲೀಫ ಅವರ ಕುಟುಂಬ ಇದೇ ಸಂದರ್ಭದಲ್ಲಿ ಅಮೆರಿಕಾಕ್ಕೆ ಬಂದಿದ್ದಷ್ಟೇ, ಅಮೆರಿಕಾದಲ್ಲಿ ಮುಸ್ಮೀಂ ರ ಮೇಲೆ ದೊಡ್ಡ ವೈಷಮ್ಯದ ವಾತಾವರಣ ಸೃಷ್ಟಿಯಾಗಿದ್ದ ಕಾರಣದಿಂದಾಗಿ ಮಿಯಾ ಕಲೀಫ ಕುಟುಂಬ ಕೂಡ ಈ ಘರ್ಷಣೆ, ವೈಷಮ್ಯದ ಬಿಸಿಗೆ ಬೇಯಬೇಕಾಯ್ತು ಎನ್ನುವುದು ಸತ್ಯ.

ಮಿಯಾ ಕಲೀಫ ಮುಸ್ಮೀಂ ಟು ಕ್ರಿಶ್ಚಿಯನ್ ಗೆ ಕನ್ವರ್ಟ್ ಆದವಳು ಎಂಬ ವಿಷಯವೇ ಅಮೆರಿಕಾದಲ್ಲಿ ಆಕೆ ಪ್ರತ್ಯೇಕತೆಯ ವಾತಾವರಣಕ್ಕೆ ಒಳಗಾಗಬೇಕಾಗುತ್ತದೆ.

ಮಿಯಾ ಕಂದು ಮೈ ಬಣ್ಣದ ಚೆಲುವೆ. ಕಂದು ಬಣ್ಣದ ಮೈ ಇರುವವರಿಗೆ ಸಾಮಾಜಿಕ ವಂಚನೆ, ತಾತ್ಸಾರ ಎಲ್ಲವೂ ಅಮೆರಿಕಾದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಮಿಯಾ ಅನುಭವಿಸಬೇಕಾಗಿ ಬರುತ್ತದೆ. ಕರಿಯರೆಲ್ಲಾ ಉಗ್ರವಾದಿಗಳು ಎಂಬ ಧೋರಣೆ ಅಮೆರಿಕಾದಲ್ಲಿ ಸೃಷ್ಟಿಯಾಯಿತು. ಜನಾಂಗೀಯ ದ್ವೇಷ, ವರ್ಣ ಬೇಧದ ಧೋರಣೆ ಮಿಯಾ ಕುಟುಂಬದ ಮೇಲೂ ದೊಡ್ಟ ಪರಿಣಾಮ ಬೀರುತ್ತದೆ.

ಕಂದು ವರ್ಣದವಳು ಎಂಬ ಕಾರಣಕ್ಕೆ ಸಾಮಾಜಿಕವಾಗಿ ವಂಚನೆಗೆ ಒಳಗಾಗಿದ್ದ ಮಿಯಾ ಸ್ವಲ್ಪ ಅರಳಿದ್ದು ಹೈಸ್ಕೂಲಿನ ಸಂದರಗಭದಲ್ಲಿ. ಅಮೆರಿಕಾದ ಮೂಲದ ಹುಡುಗನೋರ್ವ ಮಿಯಾಳ ದೇಹ ಸೌಂದರ್ಯಕ್ಕೆ ಮಾರು ಹೋಗಿ ಮಿಯಾಳಿಗೆ ಪ್ರಪೋಸ್ ಮಾಡುತ್ತಾನೆ. ಮಿಯಾ ಕೂಡ ಆತನನ್ನು ಮನಸಾರೆ ಇಷ್ಟ ಪಡುತ್ತಾಳೆ. ಪ್ರೇಮಾಂಕುರವಾಗುತ್ತದೆ.

ಕಾಲೇಜು ಮುಗಿಸಿದ ನಂತರ ಮನೆಯವರ ತೀವ್ರ ವಿರೋಧದ ನಡುವೆಯೂ ಮಿಯಾ ಆ ಹುಡುಗನೊಂದಿಗೆ ಮದುವೆಯಾಗುತ್ತಾಳೆ.

ಸಣ್ಣ ವಯಸ್ಸಿನಲ್ಲಿ ಅಷ್ಟೇನೂ ಆಕರ್ಷಕಳಾಗಿಲ್ಲದ ಮಿಯಾ, ಕಾಲೇಜಿನ ದಿನಗಳಲ್ಲಿ ಆಕರ್ಷಕ  ದೇಹ ಸೌಂದರ್ಯವನ್ನು ಪಡೆದು, ಯಾರಿಂದ ವರ್ಣ ಬೇಧಕ್ಕೊಳಗಾಗಿದ್ದಳೋ, ಅವರೇ ತಿರುಗಿ ನೋಡುವ ಹಾಗೆ ಮಾಡುತ್ತಾಳೆ.

ಇತಿಹಾಸ ವಿಷಯದಲ್ಲಿ ಪದವಿ ಓದುತ್ತಿರುವಾಗ ಯಾರನ್ನು ಇಷ್ಟ ಪಟ್ಟಿದ್ದಳೋ ಆತನಿಂದಲೇ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಒಂಟಿ ಬದುಕನ್ನು ಎದುರಿಸಬೇಕಾಗಿ ಬಂದರೂ, ಮಿಯಾ ಮೊದಲಿಗಿಂತ ದುಪ್ಪಟ್ಟು ಗಟ್ಟಿಯಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಒಗ್ಗಿಕೊಳ್ಳುವ ಧೈರ್ಯ ಹೊಂದಿದ್ದಳು. ಪದವಿ ಮುಗಿಸುತ್ತಾಳೆ.

ಒಂದೊಮ್ಮೆ ರಸ್ತೆಯೊಂದರಲ್ಲಿ ಈಕೆಯನ್ನು ಕಂಡ ಶ್ರೀಮಂತ ಪ್ರೊಡ್ಯುಸರ್ ಒಬ್ಬ ಮಾಡೆಲಿಂಗ್ ಕ್ಷೇತ್ರಕ್ಕೆ ಬರುವಂತೆ ಪ್ರೇರೇಪಿಸುತ್ತಾರೆ. ಯಾವದೇ ಅರಿವಿಲ್ಲದೇ ಮಾಡೆಲಿಂಗ್ ಕ್ಷೇತ್ರಕ್ಕೆಂದು ಕಾಲಿಟ್ಟಾಗ ಅದು ಮಾಡೆಲಿಂಗ್ ಕ್ಷೇತ್ರವಾಗಿರಲಿಲ್ಲ. ಅದು ಪೋರ್ನೋಗ್ರಫಿ ಕ್ಷೇತ್ರವಾಗಿತ್ತು ಎನ್ನುವುದು ಆಕೆ ಅಲ್ಲಿ ಬಂಧಿಯಾದ ಮೇಲೆ ತಿಳಿಯಿತು.

ಪ್ರೀತಿಯ ಕಾರಣದಿಂದ ತನ್ಮ ಕುಟುಂಬದಿಂದ ದೂರವಾಗಿದ್ದ ಮಿಯಾ, ಪೋರ್ನೋಗ್ರಫಿ ಕ್ಷೇತ್ರಕ್ಕೆ ಕಾಲಿಡುವಾಗ ಒಬ್ಬಂಟಿ. ತನಗೆ ತಾನು ಮಾಡುತ್ತಿರುವುದು ಸರಿಯೇ, ತಪ್ಪೇ ಎನ್ನುವುದರ ಬಗ್ಗೆ ಅರಿವೇ ಇಲ್ಲದ ಪರಿಸ್ಥಿತಿಯಲ್ಲಿ ಕಲೀಫ ಇದ್ದಿದ್ದಳು.

ಮಾಡೆಲಿಂಗ್ ಕ್ಷೇತ್ರದಲ್ಲಿ  ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಮಹತ್ತರ ಕನಸಿನೊಂದಿಗೆ ಕಾಲಿಟ್ಟಿದ್ದು, ಅಮೆರಿಕಾ ಮೂಲದ ಅಂತಾರಾಷ್ಟ್ರೀಯ ಪೋರ್ನೋಗ್ರಫಿ ಪ್ರೊಡಕ್ಷನ್ ಸಂಸ್ಥೆ ಬ್ಯಾಂಗ್ ಬ್ರೋಸ್ ಸಂಸ್ಥೆಗೆ.

ಕಲೀಫಾ ಮೊದಲು ನಟಿಸಿದ ಮೊದಲ ಪೋರ್ನೋಗ್ರಫಿ ಶೋಗಳಲ್ಲಿ ಮುಸ್ಲೀಂ ಸಾಂಪ್ರದಾಯಿಕ ಧಿರಿಸನ್ನು ಧರಿಸಿ ನಟಿಸುವಂತೆ ಆ ಪ್ರೊಡಕ್ಷನ್ ಸಂಸ್ಥೆ ಕಲೀಫಳನ್ನು ಒತ್ತಾಯಿಸುತ್ತದೆ. ಆದರೇ, ಅದೇ ದೊಡ್ಡ ವಿವಾದದ ಮೂಟೆಯನ್ನು ಕಲೀಫಳ ತಲೆ ಮೇಲೆ ತಂದಿಡುತ್ತದೆ ಎಂಬ ಸಣ್ಣ ಆಲೋಚನೆಯೂ ಇಲ್ಲದ ಮುಗ್ದೆಯಾಗಿದ್ದಳು ಕಲೀಫ ಎಂದರೇ ತಪ್ಪಿಲ್ಲ‌.

ಆ ದೃಶ್ಯ ಬಹಿರಂಗವಾದಾಗ ಮುಸ್ಲಿಂ ದೇಶಗಳಲ್ಲಿ ಮಿಯಾ ಕಲೀಫಳ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತದೆ. ಪ್ರೊಡಕ್ಷನ್ ಸಂಸ್ಥೆಯಲ್ಲಿ ಈ ಸಾಂಪ್ರದಾಯಿಕ ಧಿರಿಸು ಧರಿಸುವುದರಿಂದ ಏನಾದರೂ ಸಮಸ್ಯೆಯಾಗುತ್ತದೆಯೇ ಎಂದು ಸ್ವತಃ ಕಲೀಫ ಕೇಳುತ್ತಾಳೆ, ಆದರೇ, ಆ ಪ್ರೊಡಕ್ಷನ್ ಸಂಸ್ಥೆ ಈಕೆಗೆ ಏನೂ ಸಮಸ್ಯೆಯಾಗುವುದಿಲ್ಲ ಎಂದು ಒತ್ತಾಯಿಸಿ ನಟನೆ ಮಾಡಿಸುತ್ತದೆ.

ಮುಸ್ಲಿಂ ಧರ್ಮದ ಸಾಂಪ್ರದಾಯಿಕ ಧಿರಿಸು ಆಕೆಗೆ ಇಷ್ಟೊಂದು ವಿವಾದ ತಂದೊಡ್ಡುತ್ತದೆ ಎಂದು ಆಕೆಗೆ ಗೊತ್ತೇ ಇರುವುದಿಲ್ಲವೆಂದು ಇತ್ತೀಚೆಗೆ ಬಿಬಿಸಿ ಚಾನೆಲ್ ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತಾಡುವಾಗ, “ಹಣದ ಹಿಂದೆ ನಡೆಯುವ ಈ ಆಧುನಿಕ ಜಗತ್ತು ಯಾರನ್ನು ಯಾವ ರೀತಿಯಲ್ಲಿ ಬಲಿ ತೆಗೆದುಕೊಳ್ಳುತ್ತದೆ ಎನ್ನುವುದು ತಿಳಿಯುವುದಿಲ್ಲ” ಎಂಬ ಮಾತೇ ದೊಡ್ಡ ಸಾಕ್ಷಿ.

ಪೋರ್ನೋಗ್ರಫಿ ಕ್ಷೇತ್ರದಲ್ಲಿ ಕೇವಲ 12 ವೀಡಿಯೋ ಗಳಲ್ಲಿ ನಟಿಸಿದ ಕಲಿಫ ದುಡಿದಿದ್ದು ಕೇವಲ 12,000 ಡಾಲರ್. ಆದರೇ, 2016 ರಿಂದ ಈವರೆಗೆ ಪೋರ್ನ್ ಸೈಟ್ ಗಳಲ್ಲಿ ಅತಿ ಹೆಚ್ಚು ಸರ್ಚ್ ಗೆ ಒಳಗಾಗಿರುವ ನಟಿ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಟಿಕ್​ ಟಾಕ್ ​ನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಹಾಕುವ ಪೋಸ್ಟ್​​​ಗಳನ್ನು ನೋಡೋಕೆ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ. ಈಗ ಪಾಕಿಸ್ತಾನ ಅವರಿಗೆ ಟಿಕ್ ಟಾಕ್​​ ಖಾತೆಯನ್ನು ಬ್ಯಾನ್​ ಮಾಡುವ ಮೂಲಕ ಶಾಕ್​ ನೀಡಿದೆ. ಹಾಗಂತ ಮಿಯಾ ಕೈಕಟ್ಟಿ ಕೂತಿಲ್ಲ. ಅವರು ಖಡಕ್​ ಆಗಿಯೇ ಇದಕ್ಕೆ ಉತ್ತರಿಸಿದ್ದಾರೆ.

ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ ಪೋಸ್ಟ್ ​ಗಳನ್ನು ಮಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಈ ಮೊದಲು ಅವರ ಟಿಕ್​ ಟಾಕ್​ ಖಾತೆಯನ್ನು ಬ್ಯಾನ್​ ಮಾಡಿತ್ತು. ಏಪ್ರಿಲ್​ ತಿಂಗಳಲ್ಲಿ ಈ ನಿಷೇಧವನ್ನು ಹಿಂಪಡೆಯಲಾಗಿತ್ತು. ಆದರೆ, ಮಿಯಾ ಮೊದಲಿನ ರೀತಿಯಲ್ಲೇ ಪೋಸ್ಟ್​ಗಳನ್ನು ಮಾಡಲು ಆರಂಭಿಸಿದ್ದಾರೆ. ಹೀಗಾಗಿ, ಮತ್ತೆ ಅವರ ಟಿಕ್​ ಟಾಕ್​ ಖಾತೆ ಬ್ಯಾನ್​ ಆಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮಿಯಾ, ಟಿಕ್​ಟಾಕ್​ ಖಾತೆ ಬ್ಯಾನ್​ ಮಾಡಿದ ಪಾಕಿಸ್ತಾನಕ್ಕೆ ನನ್ನ ಶೌಟೌಟ್​. ಫ್ಯಾಸಿಸಂನಿಂದ ದೂರ ಉಳಿಯ ಬಯಸುವ ಪಾಕಿಸ್ತಾನಿ ಫ್ಯಾನ್ಸ್​ಗಾಗಿ ನಾನು ನನ್ನ ಟಿಕ್​ಟಾಕ್​ ವಿಡಿಯೋಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ. ಮಿಯಾ ಟಿಕ್​ಟಾಕ್​ನಲ್ಲಿ 2.2 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ.

ನೀಲಿ ಚಿತ್ರಗಳಲ್ಲಿ ನಟನೆ ನಿಲ್ಲಿಸಿದ್ದ ಮಿಯಾ ಇತ್ತೀಚೆಗೆ ಹೋರಾಟಗಳಲ್ಲಿ ಸಕ್ರಿಯವಾಗಿದ್ದಾರೆ. ಮಿಯಾ ಖಲೀಫಾ ಫೆಬ್ರವರಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಭಾರತದ ರೈತರು ನಡೆಸುತ್ತಿದ್ದ ಪ್ರತಿಭಟನೆ ಬೆಂಬಲಿಸಿ ಸುದ್ದಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.