ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 5 ಮಿಲಿಯನ್ ಪ್ರಯಾಣಿಕರ ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ದೊರಕಿದೆ.
ಹೈದರಾಬಾದ್ ನಲ್ಲಿ ನಡೆದ ವಿಂಗ್ಸ್ ಏಷ್ಯಾದ ಅತಿದೊಡ್ಡ ನಾಗರಿಕ ವಿಮಾನಯಾನ ಪ್ರದರ್ಶನದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ಅವರು ಪ್ರಶಸ್ತಿ ನೀಡಿದರು.
ನಾಗರಿಕ ವಿಮಾನಯಾನ ಸಚಿವಾಲಯ, ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವತಿಯಿಂದ ಜನವರಿ 18 ರಿಂದ ಹೈದರಾಬಾದ್‌ನಲ್ಲಿ 4 ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
2023 ರ ಕ್ಯಾಲೆಂಡರ್ ವರ್ಷದಲ್ಲಿ 19,27,466 ಪ್ರಯಾಣಿಕರನ್ನು ನಿರ್ವಹಿಸಿದ ವಿಮಾನ ನಿಲ್ದಾಣ, 2022 ರ ಕ್ಯಾಲೆಂಡರ್ ವರ್ಷ 16,88,287 ಪ್ರಯಾಣಿಕರನ್ನು ನಿರ್ವಹಿಸಿರುವುದನ್ನು ಹೋಲಿಸಿದರೆ 14.17% ಬೆಳವಣಿಗೆಯನ್ನು ದಾಖಲಿಸಿದೆ.
2020 ಅಕ್ಟೋಬರ್ 31ರ ವಾಣಿಜ್ಯ ಕಾರ್ಯಾಚರಣೆ ದಿನಾಂಕದಿಂದ 2,03,654 ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ MIA ಡಿಸೆಂಬರ್ 2023 ರಲ್ಲಿ ತನ್ನ ಅತ್ಯಧಿಕ ಪ್ರಯಾಣಿಕರನ್ನು ನಿರ್ವಹಿಸಿದೆ.