Advertisement

ಎಂಜಿಎಂ ಕಾಲೇಜು ಮೈದಾನ; ಡಿ.29, 30ರಂದು”ಉಡುಪಿ ಆಟೋ ಎಕ್ಸ್‌ಪೋ-2023′

10:14 AM Dec 29, 2023 | Team Udayavani |

ಉಡುಪಿ: ಜಿಲ್ಲಾ ಆಟೋ ಮೊಬೈಲ್‌ ಡೀಲರ್ ಅಸೋಸಿಯೇಶನ್‌, ಉಡುಪಿ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಆಶ್ರಯದಲ್ಲಿ ಮಣಿಪಾಲ ಆಟೋ ಕ್ಲಬ್‌ ಸಹಕಾರದಲ್ಲಿ ಡಿ. 29 ಮತ್ತು 30ರಂದು ಬೆಳಗ್ಗೆ 8.30ರಿಂದ ರಾತ್ರಿ 8ರ ತನಕ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ “ಉಡುಪಿ ಆಟೋ ಎಕ್ಸ್‌ಪೋ-2023′ ನಡೆಯಲಿದೆ.

Advertisement

ಡಿ. 29ರ ಬೆಳಗ್ಗೆ 10ಕ್ಕೆ ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಎಕ್ಸ್‌ ಪೋಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ
ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌, ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ವಿ. ಸುನಿಲ್‌ ಕುಮಾರ್‌, ಎ. ಕಿರಣ್‌ ಕುಮಾರ್‌ ಕೊಡ್ಗಿ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ, ಟಾಟಾ ಮೋಟಾರ್ಸ್ ನ ಕಸ್ಟಮರ್‌ ಕೇರ್‌ ಸೌತ್‌ ರೀಜನಲ್‌‌ ಮ್ಯಾನೇಜರ್‌ ವೆಂಕಟೇಶ್‌ ತುರುಮಲ್ಲ, ಉಡುಪಿ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್‌, ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್‌, ದ.ಕ. ಆಟೋ ಮೊಬೈಲ್‌ ಆ್ಯಂಡ್‌ ಟಯರ್‌ ಡೀಲರ್ ಸಂಘದ ಅಧ್ಯಕ್ಷ ಕಸ್ತೂರಿ ಪ್ರಭಾಕರ ಪೈ, ಮಣಿಪಾಲ ಆಟೋ ಕ್ಲಬ್‌ನ ಸ್ಥಾಪಕಾಧ್ಯಕ್ಷ ಡಾ| ನಿಶಾಂತ್‌ ಬಿ. ಭಟ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಡಿ. 30ರ ಸಂಜೆ 4ರಿಂದ ನಡೆಯಲಿರುವ ಸಮಾರೋಪದಲ್ಲಿ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಭಾಗವಹಿಸುವರು. ಮುಖ್ಯ
ಅತಿಥಿಯಾಗಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಗುರುರಾಜ್‌ ಗಂಟಿಹೊಳೆ, ನಿಟ್ಟೆ ಗ್ರೂಪ್‌ ಆಫ್ ಎಜುಕೇಶನ್‌ ಸಹಕುಲಾಧಿಪತಿ ವಿಶಾಲ್‌ ಹೆಗ್ಡೆ, ಉಡುಪಿ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್‌, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ಮಾಜಿ ಶಾಸಕ ಕೆ. ರಘುಪತಿ ಭಟ್‌, ಕಾಂಚನ್‌ ಹ್ಯೂಂಡೈನ ಪ್ರಸಾದರಾಜ್‌ ಕಾಂಚನ್‌, ಡೆಂಟಾ ಕೇರ್‌ನ ಡಾ| ವಿಜಯೇಂದ್ರ ವಸಂತ್‌, ಮಣಿಪಾಲ ಆಟೋ ಕ್ಲಬ್‌ನ ಅಧ್ಯಕ್ಷ ಡಾ| ಅಫ‌Õಲ್‌ ಪಿ.ಎಂ., ನಗರಸಭೆ ಸದಸ್ಯೆ ಗೀತಾ ಶೇಟ್‌ ಉಪಸ್ಥಿತರಿರಲಿದ್ದಾರೆ.

ಎರಡೂ ದಿನಗಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆಟೋಮೊಬೈಲ್‌ ಡೀಲರ್ ಅಸೋಸಿಯೇಶನ್‌ ಕಾರ್ಯದರ್ಶಿ ಕಾಶಿನಾಥ್‌ ನಾಯಕ್‌ ವಹಿಸುವರು.

ವಿಶೇಷ ಉಪನ್ಯಾಸ
ಡಿ. 29ರ ಮಧ್ಯಾಹ್ನ 12ಕ್ಕೆ “ಭಾರತದಲ್ಲಿ ಆಟೋಮೋಬೈಲ್‌’ ವಿಷಯದ ಕುರಿತು ಮಣಿಪಾಲ ಆಟೋ ಕ್ಲಬ್‌ ಕಾರ್ಯಕಾರಿ
ಸದಸ್ಯ ಅತುಲ್‌ ಪ್ರಭು ಉಪನ್ಯಾಸ ನೀಡುವರು. ಮಧ್ಯಾಹ್ನ 2ರಿಂದ 3ರ ತನಕ ಉಡುಪಿಯ ಆರ್‌ಟಿಒ ಸಿಬಂದಿ “ರಸ್ತೆ ಸುರಕ್ಷೆ’ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಂಜೆ 5ರಿಂದ 7ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Advertisement

ನೋಡಲು ಬನ್ನಿ ಬಹುಮಾನ
ಗೆಲ್ಲಿರಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಒಂದು ಕೂಪನ್‌ ನೀಡಲಾಗುವುದು. ಕೂಪನ್‌ನ ಲಕ್ಕಿ ಡ್ರಾ ಫ‌ಲಿತಾಂಶ ಮತ್ತು ಬಹುಮಾನ ವಿತರಣೆ ಸಮಾರೋಪದಲ್ಲಿ ನಡೆಯಲಿದೆ. ವಿಜೇತರಿಗೆ ಪ್ರಥಮ 5 ಗ್ರಾಂ, ದ್ವಿತೀಯ 3 ಗ್ರಾಂ, ತೃತೀಯ 1 ಗ್ರಾಂ ಚಿನ್ನ ನೀಡಲಾಗುವುದು.

ವಾಹನ ಪ್ರದರ್ಶನ
ಎಕ್ಸ್‌ಪೋದಲ್ಲಿ ವಿವಿಧ ಕಂಪೆನಿಗಳ ದ್ವಿಚಕ್ರ, ತ್ರಿಚಕ್ರ, ಕಾರು, ಜೀಪು, ಟೆಂಪೋ, ಬಸ್‌, ಲಾರಿ, ಎಲ್ಲ ಮಾದರಿಯ ಎಲೆಕ್ಟ್ರಿಕ್‌
ಮತ್ತು ಸಿಎನ್‌ಜಿ ವಾಹನಗಳ ಪ್ರದರ್ಶನ ನಡೆಯಲಿದೆ. ಬ್ಯಾಂಕ್‌ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಂಸ್ಥೆಗಳ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next