Advertisement

ಗಮನ ಸೆಳೆದ ವಿದ್ಯಾರ್ಥಿಗಳ ಸಾಂಪ್ರದಾಯಿಕ ಕುಟೀರ, ಆಹಾರ ಮೇಳ

11:31 PM Jan 07, 2023 | Team Udayavani |

ಉಡುಪಿ: ಎಂಜಿಎಂ ಕಾಲೇಜು ಮೈದಾನದಲ್ಲಿ ಶನಿವಾರ ಎಂಜಿಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಜತೆಗೆ ಆಹಾರ ಉತ್ಸವ, ಕೌಶಲತೆ ಅನಾವರಣಗೊಂಡಿತು.
ಕ್ರೀಡಾಕೂಟದ ಜತೆಗೆ ವಿದ್ಯಾರ್ಥಿಗಳ ಆಹಾರ ಮೇಳ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಸಹಿತ ಇತರ ಆಟೋಟಗಳು ಗಮನ ಸೆಳೆದವು.

Advertisement

1500ಕ್ಕೂ ಅಧಿಕ ವಿದ್ಯಾರ್ಥಿಗಳು ಕೂಟದಲ್ಲಿ ಭಾಗಿಯಾಗಿದ್ದರು. ಬಿ.ಎ, ಬಿ. ಕಾಂ. ಬಿ.ಎಸ್ಸಿ. ಬಿಸಿಎ, ಎಂಎಸ್ಸಿ ವಿಭಾಗದ ವಿದ್ಯಾರ್ಥಿಗಳು ಓಟ, ಲಾಂಗ್‌ಜಂಪ್‌, ಡಿಸ್ಕಸ್‌ ತ್ರೋ, ಹೈಜಂಪ್‌ ಮೊದಲಾದ ಆ್ಯತ್ಲೆಟಿಕ್‌ನಲ್ಲಿ ಭಾಗವಹಿಸಿದರು.

ವಿದ್ಯಾರ್ಥಿ ಗಳಿಗೆ ಶಿಕ್ಷಣ ಮತ್ತು ಕ್ರೀಡೆಯ ಜತೆಗೆ ಮಾರುಕಟ್ಟೆ, ಆಹಾರ ಉತ್ಪನ್ನಗಳ ತಯಾರಿಕೆ, ಡೆಕೊರೇಶನ್‌ ಉದ್ಯಮಗಳ ಕೌಶಲದ ಬಗ್ಗೆ ಪೂರಕ ಜ್ಞಾನ ಮೂಡಿಸುವಂತೆ ಹಳ್ಳಿಮನೆ, ಅಜ್ಜಿಮನೆ ಕುಟೀರಗಳನ್ನು ಹಳ್ಳಿ ಸೊಗಡಿನ ಸಾಂಪ್ರದಾಯಿಕ ಶೈಲಿಯಲ್ಲಿ ರೂಪಿಸಿದ್ದು, ವಿಶೇಷವಾಗಿತ್ತು. ಇದರಲ್ಲಿ ಆಹಾರೋತ್ಪನ್ನಗಳು, ತಂಪು ಪಾನೀಯಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು.

ಸ್ಥಳೀಯ ತಿಂಡಿ, ತಿನಿಸುಗಳು, ಹಣ್ಣಿನ ರಸ, ಚಾಟ್ಸ್‌ ಮಾದರಿಯ ತಿನಿಸುಗಳು ಇಲ್ಲಿನ ವಿಶೇಷವಾಗಿದ್ದವು.

ಕ್ರೀಡಾ ಸಾಧಕ, ಹಳೆ ವಿದ್ಯಾರ್ಥಿ ಅಭಿನ್‌ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಪ್ರೊ| ಲಕ್ಮಿà ನಾರಾಯಣ ಕಾರಂತ್‌ ಅಧ್ಯಕ್ಷತೆ ವಹಿಸಿದ್ದರು.
ಪ. ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ರಮೇಶ್‌ ಕಾರ್ಲ ಉಪಸ್ಥಿತರಿದ್ದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ನಿರೂಪಿಸಿದರು.
ದೈ. ಶಿ. ನಿರ್ದೇಶಕಿ ಜಯಶ್ರೀ ನಾಯಕ್‌ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ವಿನೋಥ್‌ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಪ್ರ. ಕಾರ್ಯದರ್ಶಿ ಅನಘ ವಂದಿಸಿದರು.

Advertisement

ಯುವಕರ ಶಕ್ತಿ ಕುಂದಿಸುವ ಮೊಬೈಲ್‌
ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಕರಾವಳಿ ಕಾವಲು ಪೊಲೀಸ್‌ ಪಡೆ ನಿರೀಕ್ಷಕ ಪ್ರಮೋದ್‌ ಕುಮಾರ್‌ ಪಿ. ಚಾಲನೆ ನೀಡಿ, ಪ್ರಸ್ತುತ ಯುವ ಜನಾಂಗದ ಶಕ್ತಿಯನ್ನು ಮೊಬೈಲ್‌ ಕುಂದಿಸುತ್ತಿದ್ದು, ಕ್ರೀಡೆಯು ದೇಹ ಮತ್ತು ಮನಸ್ಸಿಗೆ ಚೈತನ್ಯ ತುಂಬಿ ಒತ್ತಡ ನಿವಾರಿಸುತ್ತದೆ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆ ಆವಶ್ಯಕ. ಹಾಗೆಯೇ ದೇಹ ಮತ್ತು ಮನಸ್ಸಿನ ಸಮತೋಲನಕ್ಕೆ ಕ್ರೀಡೆ ಅಗತ್ಯ. ಕ್ರೀಡಾ ಸಾಧಕರಿಗೆ ಸರಕಾರಿ ಕೆಲಸಗಳಲ್ಲೂ ಆದ್ಯತೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next