Advertisement

ಎಂಜಿ ರೋಡ್‌ ದೇಶದ ನಂ.1 ಶಾಪಿಂಗ್‌ ಸ್ಟ್ರೀಟ್‌!

11:34 AM May 11, 2023 | Team Udayavani |

ಬೆಂಗಳೂರು: ಕಣ್ಣಿಗೆ ಬೇಕಾದ ವಸ್ತುಗಳೆಲ್ಲಾ ಒಂದೇ ಕಡೆ ಸಿಗುವಂತಿರಬೇಕು, ಜನರು ಗಿಜಿಗುಡುತ್ತಿದ್ದರೂ ರಸ್ತೆ ಮಾತ್ರ ಸುರಕ್ಷಿತವಾಗಿರಬೇಕು. ಆಹಾರದಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಎಲ್ಲವೂ ಗುಡ್‌ ಕ್ವಾಲಿಟಿಯದ್ದಾಗಿರಬೇಕು. ಇದು ಶಾಪಿಂಗ್‌ ಪ್ರಿಯರ ಸಾಮಾನ್ಯ ಬೇಡಿಕೆಗಳು. ಗ್ರಾಹಕರಿಗೆ ಇಂಥದ್ದೇ ಅನುಭವ ನೀಡುತ್ತಿರುವ ದೇಶದ ನಂಬರ್‌1 ಶಾಪಿಂಗ್‌ ಸ್ಟ್ರೀಟ್‌ ಯಾವುದು ಗೊತ್ತಾ? ನಮ್ಮ ಬೆಂಗಳೂರಿನ ಎಂಜಿ ರೋಡ್‌!

Advertisement

ಹೌದು, ಈ ಮಾತು ನಮ್ಮದಲ್ಲ, ದೇಶದ 30 ಅತ್ಯುತ್ತಮ ಶಾಪಿಂಗ್‌ ಸ್ಟ್ರೀಟ್‌ಗಳನ್ನು ಪಟ್ಟಿ ಮಾಡಿರುವ ರಿಯಲ್‌ಎಸ್ಟೇಟ್‌ ಕನ್ಸಲ್ಟೆಂಟ್‌ ನೈಟ್‌ ಫ್ರಾಂಕ್‌ ಇಂಡಿಯಾ ಸಂಸ್ಥೆಯ ವರದಿ. “ಥಿಂಕ್‌ ಇಂಡಿಯಾ: ಥಿಂಕ್‌ ರಿಟೇಲ್‌ 2023- ಹೈ ಸ್ಟ್ರೀಟ್‌ ರಿಯಲ್‌ ಎಸ್ಟೇಟ್‌ ಔಟ್‌ಲುಕ್‌’ ಎನ್ನುವ ಶೀರ್ಷಿಕೆಯೊಂದಿಗೆ, ಭಾರತದ 8 ಪ್ರಮುಖ ಮಾರುಕಟ್ಟೆಗಳಲ್ಲಿನ ಪ್ರಖ್ಯಾತ 30 ಶಾಪಿಂಗ್‌ ಸ್ಟ್ರೀಟ್‌ಗಳನ್ನು ಈ ಸಂಸ್ಥೆ ಪಟ್ಟಿ ಮಾಡಿದೆ. ಗ್ರಾಹಕರ ಶಾಪಿಂಗ್‌ ಅನುಭವಗಳನ್ನು ಆಧರಿಸಿ ಈ ಸಮೀಕ್ಷೆ ಮಾಡಲಾಗಿದೆ. ಆ ಪ್ರಕಾರ, ಮೊದಲ ಸ್ಥಾನದಲ್ಲಿ ಎಂಜಿ ರೋಡ್‌ ಇದ್ದರೆ, 2ನೇ ಸ್ಥಾನದಲ್ಲಿ ಹೈದರಾಬಾದ್‌ನ ಸೋಮಾಜಿಗುಡ ರಸ್ತೆ, 3ನೇ ಸ್ಥಾನದಲ್ಲಿ ಮುಂಬೈನ ಲಿಂಕಿಂಗ್‌ ರೋಡ್‌ ಹಾಗೂ 4ನೇ ಸ್ಥಾನದಲ್ಲಿ ದೆಹಲಿಯ ಸೌತ್‌ ಎಕ್ಸ್‌ಟೆನ್ಷನ್‌ ರಸ್ತೆ ಸ್ಥಾನ ಪಡೆದುಕೊಂಡಿವೆ.

ಅಗ್ರ ಹತ್ತರಲ್ಲಿ ಬೆಂಗಳೂರಿನ 4 ನಗರ: ಮೊದಲ ಸ್ಥಾನವನ್ನು ಬೆಂಗಳೂರಿನ ಎಂಜಿ ರೋಡ್‌ ಬಾಚಿಕೊಂಡಿರುವುದು ಮಾತ್ರವಲ್ಲದೇ, ಅಗ್ರ 10ರ ಪೈಕಿ ಬೆಂಗಳೂರಿನ ಇನ್ನೂ 3 ಶಾಪಿಂಗ್‌ ಸ್ಟ್ರೀಟ್‌ಗಳಾದ ಕಮರ್ಷಿಯಲ್‌ ಸ್ಟ್ರೀಟ್‌, ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ಗಳು ಕೂಡ ಸ್ಥಾನ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next