ಮುಂಬಯಿ: ಎಂಜಿ (ಮಾರಿಸ್ ಗ್ಯಾರೇಜ್) ಮೋಟಾರ್ಸ್ ಕಂಪೆನಿ ಗುರುವಾರ ಭಾರತದ ಮೊಟ್ಟ ಮೊದಲ ಇಂಟರ್ನೆಟ್ ಕಾರು ಹೆಕ್ಟರ್ ಅನ್ನು ಅನಾವರಣ ಮಾಡಿದೆ.
ಇದು 50ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್ ಹೊಂದಿದ್ದು. ಭಾರತದ ಮೊದಲ 48ವಿ ಹೈಬ್ರಿಡ್ ಎಸ್‌ಯುವಿಯ ರೂಪದಲ್ಲಿ ಎಂಜಿ ಹೆಕ್ಟರ್ 19 ವಿಶೇಷ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಎಂಜಿ ಹೆಕ್ಟರ್ ಎಸ್‌ಯುವಿ ಕಾರಿನ ಪ್ರಿ ಆರ್ಡರ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ ಎಂದು ಕಂಪೆನಿ ತಿಳಿಸಿದೆ.
ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿ ಯಾಗಿರುವ ಎಂಜಿ ಹೆಕ್ಟರ್ ಕಾರು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಸುಸಜ್ಜಿತವಾಗಿದೆ. ನೂತನ ಕಾರು 5 ಬಣ್ಣಗಳಲ್ಲಿ ಲಭ್ಯವಿದೆ. 10 ನ್ಪೋಕ್ ಆಲೋಯ್ ವೀಲ್, ದೊಡ್ಡದಾದ ಔಟ್‌ಸೈಡ್ ರೇರ್ ವಿವ್ ಮಿರರ್, ಪವರ್ ಅಡ್ಜಸ್ಟೇಬಲ್ ಸೀಟ್, ಕ್ರೂÂಸ್ ಕಂಟ್ರೋಲ…, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.
ಎಂಜಿ ಹೆಕ್ಟರ್ ಕಾರು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 1.5 ಲೀಟರ್ ಟಬೋì ಪೆಟ್ರೋಲ್ ಹಾಗೂ 2.0 ಲೀಟರ್ ಎಫ್‌ಸಿಎ ಡೀಸೆಲ್ ಎಂಜಿನ್ ಕಾರು ಲಭ್ಯವಿದೆ. ನೂತನ ಕಾರಿನ ಬೆಲೆ 15 ಲಕ್ಷ ರೂ.ಗಳಿಂದ ಆರಂಭಗೊಳ್ಳಲಿದ್ದು, ಗರಿಷ್ಠ ಬೆಲೆ 20 ಲಕ್ಷ ರೂ. ಆಗಿದೆ.
ಭಾರತದ ಮೊದಲ ಇಂಟರ್ನೆಟ್ ಕಾರು ಎಂಜಿ ಹೆಕ್ಟರ್ ಅನ್ನು ಉನ್ನತ ಮಟ್ಟದ ಲೋಕಲೈಸೇಶನ್‌ನೊಂದಿಗೆ ತಯಾರಿಸಲಾಗಿದೆ. ಒಳಗಿನಿಂದ ಹೊರಗಿನ ತನಕ ಇದು ವೈಶಿಷ್ಟ್ಯಗಳೊಂದಿಗೆ ಕೂಡಿದೆ. ಇದು ಭಾರತದಲ್ಲಿ ಎಂಜಿಯ ಮೊದಲ ಕೊಡುಗೆ ಆಗಿದೆ. ಭಾರತದ ಗ್ರಾಹಕರಿಗೆ ಉತ್ತಮ ಕಾರು ಒದಗಿಸುವ ನಮ್ಮ ಬದ್ಧತೆಗಳನ್ನು ಈ ಹೆಕ್ಟರ್ ತೋರಿಸುತ್ತದೆ. ಈ ಕಾರನ್ನು ದೇಶದ ಜನರು ಪ್ರೀತಿಸಲಿದ್ದಾರೆ ಮತ್ತು ಅವರು ಇದನ್ನು ಮೆಚ್ಚಲಿದ್ದಾರೆ ಎಂದು ಎಂಜಿ ಮೋಟಾರ್ಸ್ ಇಂಡಿಯಾದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಾಜೀವ್ ಚಾಬಾ ಹೇಳಿದ್ದಾರೆ.