Advertisement

ಐಶಾರಾಮಿ ಎಂಜಿ ಹೆಕ್ಟರ್ ಭಾರತದಲ್ಲಿ ರಿಲೀಸ್; ಜೂನ್ ನಿಂದ ಬುಕ್ಕಿಂಗ್ ಆರಂಭ

09:41 AM May 16, 2019 | Nagendra Trasi |

ನವದೆಹಲಿ: ಪ್ರತಿಷ್ಠಿತ ಎಂಜಿ ಮೋಟಾರ್ ಸಂಸ್ಥೆಯ ನೂತನ ಎಂಜಿ ಹೆಕ್ಟರ್ ಎಸ್ ಯುವಿ ಕಾರು ಬುಧವಾರ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಎಂಜಿ ಹೆಕ್ಟರ್ ಎಸ್ ಯುವಿ ಕಾರುಗಳ ಪ್ರಿ ಬುಕ್ಕಿಂಗ್ ಜೂನ್ ನಿಂದ ಆರಂಭವಾಗಲಿದೆ ಎಂದು ಎಂಜಿ ಮೋಟರ್ ತಿಳಿಸಿದೆ.

Advertisement

ಭಾರತದ 50 ನಗರಗಳಲ್ಲಿ ಎಂಜಿ ಮೋಟರ್ 120 ಡೀಲರ್ ಶಿಪ್ಸ್ ನೀಡಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಡೀಲರ್ ಶಿಪ್ ಸಂಖ್ಯೆಯನ್ನು 250ಕ್ಕೆ ಏರಿಸುವುದಾಗಿ ಹೇಳಿದೆ. ಎಂಜಿ ಹೆಕ್ಟರ್ ಕಾರಿನ ಬೆಲೆ ಅಂದಾಜು 16 (20 ಲಕ್ಷ) ಲಕ್ಷ ರೂಪಾಯಿ. ಎಂಜಿ ಹೆಕ್ಟರ್ ಕಾರು ಟಾಟಾ ಹ್ಯಾರಿಯರ್ ಕಾರಿಗಿಂತ ಉದ್ದವಿರುವುದಾಗಿ ಕಂಪನಿ ತಿಳಿಸಿದೆ.

ಎಸ್ ಯುವಿ ಕಾರಿಗೆ ಸಂಬಂಧಿಸಿದ ಚಿತ್ರಗಳನ್ನು ಎಂಜಿ ಕಂಪನಿ ಈಗಾಗಲೇ ಹಂಚಿಕೊಂಡಿದ್ದು, ಹೆಕ್ಟರ್ ಎಸ್ ಯುವಿ ಬಂಪರ್ ನಲ್ಲಿ ಎಲ್ ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಅಲ್ಲದೇ ಡೇ ಟೈಮ್ ರನ್ನಿಂಗ್ ಲೈಟ್ (ಡಿಆರ್ ಎಲ್ ಎಸ್) ಅನ್ನು ಹೊಂದಿದೆ.

ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಸಂಸ್ಥೆ ಕಾರು ತಯಾರಿಕೆಯಲ್ಲಿ ದೊಡ್ಡ ಹೆಸರನ್ನು ಗಳಿಸಿದೆ. ಬಿಎಸ್ 6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ನಲ್ಲಿ ಲಭ್ಯವಾಗಲಿದೆ.

Advertisement

ಪೆಟ್ರೋಲ್ ಆವೃತ್ತಿಯು 160 ಬಿಎಚ್‌ಪಿ, 200 ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170 ಬಿಎಚ್‌ಪಿ, 340 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಇದರಲ್ಲಿ ಹುಂಡೈ ವೆನ್ಯೂ ಮಾದರಿಯ ಫೀಚರ್ಸ್ ಗಳನ್ನು ಹೊಂದಿದೆ.

ಹೆಕ್ಟರ್ ಒಳಭಾಗದಲ್ಲಿ 10.4 ಇಂಚಿನ ಟಚ್ ಸ್ಕ್ರೀನ್, ರನ್ನಿಂಗ್ ಐಎಸ್ ಎಂಎಆರ್ ಟಿ ಸಿಸ್ಟಮ್. ಇದು ಕಾರಿನ ಆ್ಯಂಡ್ರಾಯ್ಡ್ ಆಧಾರಿತ ಓಎಸ್ನ 4ಜಿ ಕನೆಕ್ಟಿವಿಟಿಯೊಂದಿಗೆ ಕಾರ್ಯನಿರ್ವಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next