Advertisement
ಆದರೆ ಮೆಕ್ಸಿಕೊದಲ್ಲಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ದೇಶವನ್ನು ಮಹಾಮಾರಿಯಿಂದ ಸಂರಕ್ಷಿಸಲು ಹಗಲು ರಾತ್ರಿಯನ್ನದೇ ಹೋರಾಡುತ್ತಿರುವ ವೈದ್ಯಕೀಯ ಸಿಬಂದಿಗಳ ರಕ್ಷಣೆಯನ್ನೇ ಮರೆತಿದೆ. ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸುವುಲ್ಲಿ ಅಲಕ್ಷ್ಯ ತೋರಿಸುತ್ತಿದೆ. ಈ ಕುರಿತು ಅಲ್‌ಜಜೀರಾ ವರದಿ ಮಾಡಿದೆ. ಮೆಕ್ಸಿಕೊ ನಗರದಲ್ಲಿ ದಿನಕಳೆದಂತೆ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದು, ನಿರ್ಣಾಯಕ ಹಂತವನ್ನು ತಲುಪಿದೆ ಎಂದು ವೈದ್ಯ ಅಧಿಕಾರಿಗಳು ಕಳೆದ ವಾರವಷ್ಟೇ ಘೋಷಿಸಿದ್ದರು. ಪರಿಸ್ಥಿತಿ ಭೀಕರ ಹಂತಕ್ಕೆ ಸಾಮೀಪ್ಯವಾಗುತ್ತಿರುವ ಈ ಘಟ್ಟದಲ್ಲೇ ನಮಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸುವುಲ್ಲಿ ಸರಕಾರ ಹಿಂದುಮುಂದು ನೋಡುತ್ತಿದ್ದು, ಮಾಸ್ಕ್ಗಳು ಧರಿಸದೇ ಶಂಕಿತರ ಶುಶ್ರೂಷೆ ಮಾಡಬೇಕಿದೆ. ಪರಿಣಾಮ ನಮಗೆ ಯಾವ ಸಂದರ್ಭದಲ್ಲೂ ಸೋಂಕು ತಗುಲಬಹುದಾಗಿದೆ. ಈ ಭೀತಿಯಲ್ಲೇ ಕೆಲಸ ನಿರ್ವಹಿಸಬೇಕಿದ್ದು,ಯಾವುದೇ ಸುರಕ್ಷಾ ಕವಚಗಳಿಲ್ಲದೇ ಹೇಗೆ ಚಿಕಿತ್ಸೆ ನೀಡುವುದು ಎಂದು ಸಿಬಂದಿಯೊಬ್ಬರು ಮಾಧ್ಯಮದ ಎದುರು ಕಷ್ಟವನ್ನು ತೋಡಿಕೊಂಡಿದ್ದಾರೆ.
ದೇಶದ ಹಾಟ್‌ಸ್ಪಾಟ್‌ಗಳೆಂದು ಗುರುತಿಸಿಕೊಂಡಿರುವ ಮೆಕ್ಸಿಕೊ ಸಿಟಿ ಮತ್ತು ಮಾಂಟೆರಿಗಳಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಎಲ್ಲರೂ ದೇಶಾದ್ಯಂತ ಸರಕಾರದ ಈ ನಿರ್ಲಕ್ಷ್ಯ ಕುರಿತು ಧ್ವನಿ ಎತ್ತಿದ್ದಾರೆ. ರಸ್ತೆಗಿಳಿದು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ಕಳೆದ ಕೆಲ ವಾರಗಳಿಂದ ಚಿಕಿತ್ಸಾಲಯಗಳಲ್ಲಿ ಪಿಪಿಇ ಕಿಟ್‌ಗಳ ಕೊರತೆಯಾಗಿದ್ದು, ಪೂರೈಸುವಂತೆ ಸರಕಾರವನ್ನು ಕೋರಲಾಗಿತ್ತು. ಆದರೆ ಪ್ರಯೋಜನವಾಗಿಲ್ಲ. ಸರಕಾರವು ತಿಳಿದೂ ತಿಳಿದೂ ವೈದ್ಯಕೀಯ ಸಿಬಂದಿಯನ್ನು ಅಪಾಯದ ಸುಳಿಗೆ ತಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಕ್ಸಿಕೊದಲ್ಲಿ ಇದುವರೆಗೆ 1,972 ಮಂದಿ ಮೃತಪಟ್ಟಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದೆ. ದೃಢಪಡಿಸಿದ ಪ್ರಕರಣಗಳಲ್ಲಿ ಕನಿಷ್ಠ ಶೇ.15ರಷ್ಟು ಮೆಕ್ಸಿಕನ್ ಸಾಮಾಜಿಕ ಭದ್ರತಾ ಸಂಸ್ಥೆಯ (ಐಎಂಎಸ್‌ಎಸ್) ಉದ್ಯೋಗಿಗಳಾಗಿದ್ದು, ಇದು ದೇಶದ ಅರ್ಧದಷ್ಟು ಜನಸಂಖ್ಯೆಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.