Advertisement

ಮೆಕ್ಸಿಕೊ: ಪ್ರಬಲ ಭೂಕಂಪಕ್ಕೆ 139ಕ್ಕೂ ಅಧಿಕ ಬಲಿ

08:24 AM Sep 20, 2017 | Team Udayavani |

ಮೆಕ್ಸಿಕೋ: ಮೆಕ್ಸಿಕೊದ ಪ್ಯುಬೆಲಾ ರಾಜ್ಯದ ರಬೊಸೊ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 139 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಭೂಕಂಪನ ಪ್ರಮಾಣ ಸುಮಾರು 7.1 ರಷ್ಟಿದ್ದು, ಭೂಕಂಪನದ ತೀವ್ರತೆಗೆ ನಗರದ ಹಲವೆಡೆ ಕಟ್ಟಡ, ಮನೆಗಳು ಧರಾಶಾಹಿಯಾಗಿವೆ. ಮೆಕ್ಸಿಕೊ ಸೇರಿದಂತೆ ಪುಯೆಬ್ಲಾ ಮತ್ತು ಮೋರ್ಲೋಸ್ ರಾಜ್ಯಗಳಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದೆ ಎಂದು ವರದಿಯಾಗಿದೆ.  

ಸ್ವಯಂ ಸೇವಾ ಸಂಘಟನೆಗಳಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಇನ್ನಷ್ಟು ಸಾವು ನೋವುಗಳು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. 

ಎರಡು ವಾರಗಳ ಹಿಂದೆಯಷ್ಟೆ ಮೆಕ್ಸಿಕೊದಲ್ಲಿ ಸಂಭವಿಸಿದ ಭೂಕಂಪಕ್ಕೆ 90 ಮಂದಿ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next