Advertisement
ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಮಾಡಿ55 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ಬಿಜೆಪಿ ಎಲ್ಲಲೆಕ್ಕಾಚಾರಗಳನ್ನು ಹುಸಿ ಮಾಡಿ ಅಧಿಕಾರದ ಗದ್ದುಗೆಹಿಡಿದಿದೆ. ಇದರೊಂದಿಗೆ ಸದಾ ಗಡಿ ಮತ್ತು ಭಾಷಾವಿವಾದದ ಮೂಲಕ ಸುದ್ದಿಯಾಗುತ್ತಿದ್ದ ಬೆಳಗಾವಿಮಹಾನಗರ ಪಾಲಿಕೆಯಲ್ಲಿ ಇನ್ನು ಮುಂದೆ ಹೊಸಮನ್ವಂತರದ ಗಾಳಿ ಬೀಸಲಿದೆ. ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ.
Related Articles
Advertisement
ಇನ್ನೊಂದು ಕಡೆ ಮಹಾರಾಷ್ಟ್ರ ಏಕೀಕರಣಸಮಿತಿ ತಾನೇ ಮಾಡಿಕೊಂಡ ಎಡವಟ್ಟಿನಿಂದ ಬಿಜೆಪಿಗೆಮತ್ತಷ್ಟು ಅನುಕೂಲ ಮಾಡಿಕೊಟ್ಟಿದ್ದು ಸುಳ್ಳಲ್ಲ.ಈ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆದೃಷ್ಟಿಯಿಂದ ಬಿಜೆಪಿಗೆ ದೊಡ್ಡ ಶಕ್ತಿ ನೀಡಿದೆ. ಎಲ್ಲವನ್ನೂ ಬಹಳಹಗುರವಾಗಿ ತೆಗೆದುಕೊಳ್ಳುವ ಕಾಂಗ್ರೆಸ್‌ಗೆ ಇದು ಎಚ್ಚರಿಕೆಯಗಂಟೆ.
ಎಲ್ಲಕ್ಕಿಂತ ಮುಖ್ಯವಾಗಿ ಯಾವಾಗಲೂ ಭಾಷೆ ಮತ್ತು ಗಡಿವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಮಹಾರಾಷ್ಟ್ರಏಕೀಕರಣ ಸಮಿತಿ ಮತ್ತು ಶಿವಸೇನೆಗೆ ಇದರಿಂದ ಮುಂದೆ ಭವಿಷ್ಯ ಇಲ್ಲಎಂಬ ಖಡಕ್ ಸಂದೇಶವೂ ರವಾನೆಯಾಗಿದೆ.ಇದೆಲ್ಲಕ್ಕಿಂತ ಮುಖ್ಯವಾಗಿ ಬೆಳಗಾವಿಯ ಪ್ರತಿ ವಿಷಯದಲ್ಲೂ ಮೂಗುತೂರಿಸುವ ಮಹಾರಾಷ್ಟ್ರದ ನಾಯಕರಿಗೆ ಬೆಳಗಾವಿಯ ಮತದಾರರುವಿಶೇಷವಾಗಿ ಮರಾಠಿ ಭಾಷಿಕ ಮತದಾರರು ತಾವು ಯಾವತ್ತೂಕರ್ನಾಟಕ ಹಾಗೂ ಅಭಿವೃದ್ಧಿ ಪರ ಎಂಬ ಎಚ್ಚರಿಕೆ ಕಳಿಸಿದ್ದಾರೆ.
ಪರಿಣಾಮ ಬೀರದ ಉಚಾಟನೆ ಶಿಕ್ಷೆ
ಟಿಕೆಟ್ ಹಂಚಿಕೆ ವಿಷಯದಲ್ಲೇ ಬಿಜೆಪಿಯಲ್ಲಿ ದೊಡ್ಡ ಮಟ್ಟದಅಸಮಾಧಾನ ಕಾಣಿಸಿಕೊಂಡಿತ್ತು. ಪಕ್ಷದ ನಾಯಕರು ಅದನ್ನು ಹೇಗೋಸರಿ ಮಾಡಿದ್ದರು ಎನ್ನುವಷ್ಟರಲ್ಲಿ ಲಿಂಗಾಯತ ಅಭ್ಯರ್ಥಿಗಳ ಉಚ್ಚಾಟನೆಶಿಕ್ಷೆ ಮತ್ತೆ ಅಸಮಾಧಾನ ಹೆಚ್ಚುವಂತೆ ಮಾಡಿತ್ತು. ಆಗ ಸಮಾಜದನಾಯಕರೇ ಬಿಜೆಪಿ ಕ್ರಮದ ವಿರುದ್ಧ ಹರಿಹಾಯ್ದಿದ್ದರು. ಟಿಕೆಟ್‌ವಿಷಯದಲ್ಲಿ ಲಿಂಗಾಯತ ಸಮಾಜವನ್ನು ಕಡೆಗಣಿಸಲಾಗಿದೆ ಎಂಬುದುಹಿರಿಯ ನಾಯಕರಾದ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿಕಿವಿಗೂ ತಲುಪಿತ್ತು. ಆದರೆ ಈ ಯಾವ ಅಂಶಗಳೂ ಮತದಾರರ ಮೇಲೆಪರಿಣಾಮ ಬೀರಲಿಲ್ಲ.
ಲಿಂಗಾಯತ ಅಭ್ಯರ್ಥಿಗಳ ಮೇಲೆ ಉಚ್ಚಾಟನೆ ಶಿಕ್ಷೆ ವಿಧಿಸಿದ ನಂತರ ಸಮಾಜದ ಕೆಲ ಮುಖಂಡರು ಬಿಜೆಪಿ ಬಿಟ್ಟುಬೇರೆ ಯಾರಿಗಾದರೂ ಮತ ಹಾಕಿ ಎಂಬ ಸಂದೇಶ ರವಾನಿಸಿದ್ದರು.ಆದರೆ ಯಾವ ಆರೋಪಕ್ಕೂ ಪ್ರತಿಕ್ರಿಯೆ ನೀಡದ ಸ್ಥಳೀಯ ಶಾಸಕರುಚುನಾವಣೆಯಲ್ಲಿ ಇದು ಚರ್ಚೆಗೆ ಬರದಂತೆ ನೋಡಿಕೊಂಡರಲ್ಲದೆ ಕೇವಲ ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಜನರ ಮುಂದೆ ಹೋದರು.ಮತದಾನದ ಪ್ರಮಾಣ ಕಡಿಮೆಯಾದಾಗ ಆತಂಕ ಶುರುವಾಗಿತ್ತು.
ಬಂಡಾಯ ಅಭ್ಯರ್ಥಿಗಳು ನಮಗೆ ಮುಳುವಾಗುವರೇ ಎಂಬ ಭೀತಿ ಶುರುವಾಗಿತ್ತು. ಆದರೆ ನಾಯಕರು ತಮ್ಮ ರಾಜಕೀಯ ತಂತ್ರಗಾರಿಕೆ ಮೇಲೆನಂಬಿಕೆ ಇಟ್ಟುಕೊಂಡಿದ್ದರು. ಪಕ್ಷದ ಪ್ರಮುಖ ನಾಯಕರು, ಬೆಂಗಳೂರಿನಶಾಸಕರು ಹಾಗೂ ಅಲ್ಲಿನ ಪಾಲಿಕೆ ಸದಸ್ಯರು, ಮಹಾರಾಷ್ಟ್ರದ ಬಿಜೆಪಿಕಾರ್ಯಕರ್ತರು ಪೈಪೋಟಿ ಮೇಲೆ ಪ್ರಚಾರ ಮಾಡಿದ್ದು ವ್ಯರ್ಥವಾಗಲಿಲ್ಲ.
ಕೇಶವ ಆದಿ