Advertisement

ಅಕ್ಷಯ ತೃತೀಯಕ್ಕೆ ಮಹಾನಗರ ಸಜ್ಜು

12:13 PM Apr 18, 2018 | Team Udayavani |

ಬೆಂಗಳೂರು: ಅಕ್ಷಯ ತೃತೀಯ ಸ್ವಾಗತಕ್ಕೆ ಮಹಾನಗರ ಸಜ್ಜಾಗಿದೆ. ಒಂದೆಡೆ ವಿವಿಧ ರಿಯಾಯಿತಿ ಹಾಗೂ ಕೊಡುಗೆಗಳ ಘೋಷಣೆಯೊಂದಿಗೆ ಚಿನ್ನಾಭರಣ ಮಳಿಗೆಗಳು  ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದ್ದರೆ ಮತ್ತೂಂದೆಡೆ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಶುಭ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಉತ್ಸುಕರಾಗಿದ್ದಾರೆ.

Advertisement

ಹಿಂದೂ ಸಂಪ್ರದಾಯದ ಪ್ರಕಾರ ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ  ಶುಭವೆಂಬ ನಂಬಿಕೆ ಇದೆ. ಅದರಂತೆಯೇ ವರ್ಷವಿಡಿ ಈ ದಿನಕ್ಕಾಗಿ ಕೆಲವರು ಕಾಯ್ದು ಚಿನ್ನ ಅಥವಾ ಬೆಳ್ಳಿಯನ್ನು ಕೊಂಡುಕೊಳ್ಳುವುದು ವಾಡಿಕೆ. ಕೃತಿಕಾ ನಕ್ಷತ್ರದಲ್ಲಿ ಅಕ್ಷಯ ತೃತೀಯ ಬಂದಿರುವುದು ಈ ಬಾರಿಯ ವಿಶೇಷವಾಗಿದೆ.

ಬುಧವಾರ ಬೆಳಗ್ಗೆ 3.52ಕ್ಕೆ ಆರಂಭವಾಗಿ ಗುರುವಾರ ಮಧ್ಯಾಹ್ನ 1.35ಕ್ಕೆ ಮುಕ್ತಾಯಗೊಳ್ಳಲಿದ್ದು, ಈ ಎರಡೂ ದಿನವೂ ಜನ ಚಿನ್ನ ಖರೀದಿ ಮಾಡಲಿದ್ದಾರೆ. ಕಳೆದ ಬಾರಿ ನೋಟು ಅಮಾನ್ಯದ ಬಿಸಿಯಿಂದ ಅಕ್ಷಯ ತೃತೀಯವೂ ಕಳೆಗುಂದಿತ್ತು. ಆದರೆ ಈ ಬಾರಿ ಮಾರುಕಟ್ಟೆ ಚೇತರಿಸಿದೆ ಎಂದು ಚಿನ್ನಾಭರಣ ಅಂಗಡಿಗಳ ಮಾಲೀಕರು ಹೇಳುತ್ತಾರೆ.

ಜಗಮಗಿಸುವ ಮಳಿಗೆಗಳು: ನಗರದ ಕೆಲವು ಆಭರಣ ಮಳಿಗೆಗಳಲ್ಲಿ ಅಕ್ಷಯ ತೃತೀಯ ವಿಶೇಷ ಮಾರಾಟ ಯೋಜನೆ ಆರಂಭಿಸಲಾಗಿದೆ. ಮಲಬಾರ್‌, ಕನಿಷ್ಕಾ, ಭೀಮಾ ಸೇರಿದಂತೆ ಹಲವು ಮಳಿಗೆಗಳಲ್ಲಿ ಚಿನ್ನಾಭರಣ ಖರೀದಿಗೆ ಆಗಮಿಸುವ ಗ್ರಾಹಕರಿಗೆ ತಂಪು ಪಾನೀಯ, ಲಘು ಉಪಹಾರದ ವ್ಯವಸ್ಥೆಯೂ ಮಾಡಲಾಗಿದೆ. 

ಬಡ ಗ್ರಾಹಕರಿಗೂ ಉಂಟು: ನಗರದ ಬಹುತೇಕ ಚಿನ್ನಾಭರಣ ಮಳಿಗೆಗಳಲ್ಲಿ ಬಡ ಗ್ರಾಹಕರಿಗೆ ಆಭರಣ ಖರೀದಿಸಲು ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ 1ಗ್ರಾಂ ನಾಣ್ಯಗಳನ್ನು ತಯಾರಿಸಿ ಮಾರಾಟಕ್ಕೆ ಇಡಲಾಗಿದೆ. ಈ ನಾಣ್ಯಕ್ಕೆ ಯಾವುದೇ ತಯಾರಿಕ ವೆಚ್ಚ ಸೇರಿಸಿದೆ ಮೂಲ ಬೆಲೆಗೆ ನೀಡುವ ಕೊಡುಗೆ ಘೋಷಿಸಲಾಗಿದೆ.

Advertisement

ಕಳೆದ ಬಾರಿಗಿಂತ ಈ ಬಾರಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಹೆಚ್ಚಿನ ವ್ಯಾಪಾರ ನಿರೀಕ್ಷೆಯಲ್ಲಿದ್ದೇವೆ. ಅಮೇರಿಕಾ ಸಿರಿಯಾ ಯುದ್ದ ಪರಿಣಾಮದಿಂದ ಪ್ರತಿ ಗ್ರಾಂಗೆ 200 ರೂ ಹೆಚ್ಚಾಗಿದೆ. ನಮ್ಮಲ್ಲಿ ಖರೀದಿ ಮಾಡುವ ಪ್ರತಿ ಗ್ರಾಹಕರಿಗೂ ಪಂಚಲೋಹದ ಲಕ್ಷಿ ವಿಗ್ರಹ ಉಡುದೊರೆ ನೀಡಲಾಗುವುದು.
-ಶರವಣ. ಶ್ರೀ ಸಾಯಿಗೋಲ್ಡ್‌ ಪ್ಯಾಲೇಸ್‌ ಮಾಲೀಕ.

ಅಕ್ಷಯ ತೃತೀಯ ಅಂಗವಾಗಿ ಈಗಾಗಲೇ ಮುಂಗಡ ಬುಕ್ಕಿಂಗ್‌ ಆಗಿದ್ದು, ಬಹುತೇಕ ಗ್ರಾಹಕರು ಚಿಕ್ಕ ರಿಂಗ್‌, ಓಲೆ ಹಾಗೂ ನಾಣ್ಯಗಳನ್ನು ಕೇಳುತ್ತಿದ್ದಾರೆ. ಸಾಂಪ್ರದಾಯಿಕ ಆಭರಣಗಳತ್ತ ಆಸಕ್ತಿ ತೋರುತ್ತಿದ್ದಾರೆ.
-ಪ್ರಕಾಶ್‌. ಮಾರಾಟ ಪ್ರತಿನಿಧಿ. ಭೀಮಾ ಗೋಲ್ಡ್‌$ 

Advertisement

Udayavani is now on Telegram. Click here to join our channel and stay updated with the latest news.

Next