Advertisement

ಸನಾತನ ಧರ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ

03:07 PM Apr 04, 2019 | Vishnu Das |

ಡೊಂಬಿವಲಿ: ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ವಿಶೇಷ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಮಾ. 23 ರಂದು ಸಂಜೆ 6ರಿಂದ ಡೊಂಬಿವಲಿ ಪೂರ್ವದಲ್ಲಿರುವ ವಿನಾಯಕ ಸಭಾಗೃಹದಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಇಸ್ಕಾನ್‌ ಸಂಸ್ಥೆಯ ಅಕ್ಷಯ ಪಾತ್ರೆ ಫೌಂಡೇಷನ್‌ ಇದರ ಸೇವಾಕರ್ತ ಧೀರ ಗೋವಿಂದ ದಾಸ್‌ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಭಗವದ್ಗೀತೆ ತಾತ್ವಿಕ ಮತ್ತು ವೈಜ್ಞಾನಿಕ ದರ್ಶನ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ, ಪ್ರತಿಯೊಬ್ಬರೂ ರಾಮಕೃಷ್ಣ ನಾಮಸ್ಮರಣೆ ಮಾಡುವುದರಿಂದ ಅಂತರಂಗದ ಚೇತನ ಹೆಚ್ಚಾಗು

ವುದರಿಂದ ಲೌಖೀಕದೆಡೆಗೆ ಗಮನ ಕಡಿಮೆಯಾಗುತ್ತದೆ. ಸದಾ ಸಂತಸದ ಬದುಕನ್ನು ಇದರಿಂದ ನಡೆಸಬಹುದು. ಭಗವಂತನ ನಾಮ ಸ್ಮರಣೆಯನ್ನು ಪ್ರಯಾಣದ ಸಮಯದಲ್ಲೂ ಅಥವಾ ಬಿಡುವಿದ್ದ ಸಮಯದಲ್ಲಿ ಮಾಡುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಮನೆಯಲ್ಲಿ ಹಿರಿಯರು ಕಿರಿಯರಿಗೆ ಭಗವಂತನ ನಾಮಸ್ಮರಣೆ, ಆರಾಧನೆಯ ಉಪಯುಕ್ತತೆಯನ್ನು ತಿಳಿಯಪಡಿಸಿದಾಗ ಎಳೆಯ ಮನಸ್ಸಿನಲ್ಲಿ ಸಂಸ್ಕೃತಿ, ಸಂಸ್ಕಾರಗಳು ಬೆಳೆಯುತ್ತವೆ. ಸನಾತನ ಧರ್ಮದ ಸಂಸ್ಕೃತಿಯನ್ನು ಪಾಲಿಸಿ

ಕೊಂಡಾಗ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳು ಉಳಿಯಲು ಸಾಧ್ಯವಿದೆ. ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿಯು ಇಂತಹ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತವಾಗುತ್ತದೆ. ಭಗವದ್ಗೀತೆಯ ಬಗ್ಗೆ ಮಕ್ಕಳಲ್ಲಿ ಅಭಿರುಚಿಯನ್ನು ಮೂಡಿಸುವ ಉದ್ದೇಶದಿಂದ ಇಸ್ಕಾನ್‌ ಸಂಸ್ಥೆಯು ಹಲವಾರು ಯೋಜನೆ ಗಳನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಸಂಘ-ಸಂಸ್ಥೆ
ಗಳು ಪಡೆದುಕೊಳ್ಳಬೇಕು ಎಂದು ನುಡಿದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ಇದರ ಅಧ್ಯಕ್ಷ ಎಸ್‌. ಆರ್‌. ಕುಬೇರ ಅವರು ಮಾತನಾಡಿ, ಆರೋಗ್ಯಪೂರ್ಣ ಸಮಾಜವನ್ನು ಕಟ್ಟಬೇಕಾದರೆ ನಮ್ಮ ಸಂಸ್ಕೃತಿಯ ಬಗ್ಗೆ ಕಾಳಜಿ ಅಗತ್ಯವಾಗಿದೆ. ಇಂದಿನ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿದ್ದು, ಇಂತಹ ಕಾರ್ಯಕ್ರಮಗಳಿಂದ ಆಧ್ಯಾತ್ಮಿಕ ಚಿಂತನೆ ಬೆಳೆಯುವುದರಲ್ಲಿ ಸಂಶಯವಿಲ್ಲ. ಸಂಘದ ನಾಡು-ನುಡಿಯನ್ನು ಬಿಂಬಿ ಸುವ ಎಲ್ಲ ಕಾರ್ಯಕ್ರಮಗಳಲ್ಲಿ ತುಳು – ಕನ್ನಡಿಗರು ಪಾಲ್ಗೊಂಡು ಸಹಕರಿಸಬೇಕು ಎಂದು ನುಡಿದರು.

Advertisement

ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್‌. ವಿ. ಆಲಗೂರ ಅವರು ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು. ಶೀತಲ್‌ ಹುಯಿಲಗೋಳ ಇವರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಡಾ| ವಿ. ಆರ್‌. ದೇಶಪಾಂಡೆ ಇವರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮಾತನಾಡಿ, ಸಂಸ್ಥೆಯು ವರ್ಷಪೂರ್ತಿ ನಡೆಸುತ್ತಿರುವ ನಾಡು-ನುಡಿಯನ್ನು ಬಿಂಬಿಸುವ ಹಾಗೂ ಸಮಾಜಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಇಸ್ಕಾನ್‌ ಸಂಸ್ಥೆಯ ಅಕ್ಷಯ ಪಾತ್ರೆ ಫೌಂಡೇಷನ್‌ ಇದರ ಸೇವಾಕರ್ತ ಧೀರ ಗೋವಿಂದ ದಾಸ್‌ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಾಸಂತಿ ದೇಶಪಾಂಡೆ ಇವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಧರ ಹುಯಿಲಗೋಳ ಇವರು ಅತಿಥಿಗಳನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಸೋಮನಾಥ ಮಸಳಿ, ಎಸ್‌. ಎನ್‌. ಸೋಮ, ಪ್ರೊ| ಅಜಿತ್‌ ಉಮ್ರಾಣಿ, ಜಿ. ಬಿ. ಮಠದಲೆ, ವಿ. ಎನ್‌. ಕುಲಕರ್ಣಿ, ಡಿ. ಆರ್‌. ದೇಶಪಾಂಡೆ, ವಿ. ಎಲ್‌. ದೇಶಪಾಂಡೆ, ವಿದ್ಯಾವತಿ ಆಲ್ಲೂರ, ವಿ. ಬಿ. ಕುಲಕರ್ಣಿ ಹಾಗೂ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಸ್ಥಳೀಯ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next