Advertisement

ಜುಲೈಗೆ ಕೆಂಗೇರಿವರೆಗೆ ಮೆಟ್ರೋ ರೈಲು

12:50 PM May 26, 2021 | Team Udayavani |

ಬೆಂಗಳೂರು: ಮೈಸೂರು ರಸ್ತೆಯ ನಾಯಂಡಹಳ್ಳಿ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ ಮೆಟ್ರೋ ಸೇವೆ ಜುಲೈ ವೇಳೆಗೆಮುಕ್ತವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.ಅಧಿಕಾರಿಗಳ ಜತೆಮೆಟ್ರೋ ರೈಲಿನಲ್ಲೇ ಸಂಚರಿಸಿದಅವರು, ನಮ್ಮ ಮೆಟ್ರೋ ರೈಲು ಹಂತ-2ರ ರೀಚ್‌-2ವಿಸ್ತರಿಸಿದ ಮಾರ್ಗ (ಮೈಸೂರು ರಸ್ತೆಯನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ) ನೂತನ ಸಂಚಾರಮಾರ್ಗದ ಪರಿವೀಕ್ಷಣೆ ನಡೆಸಿದರು.

Advertisement

ನಂತರ ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು,ನಮ್ಮ ಮೆಟ್ರೋ ಯೋಜನೆಯ ಹಂತ-2 ರಡಿನಾಯಂಡಹಳ್ಳಿಯಿಂದ ಕೆಂಗೇರಿ ವರೆಗಿನ ರೀಚ್‌-2ರವಿಸ್ತರಣಾ ಮಾರ್ಗದ ಕಾಮಗಾರಿ ಬಹುತೇಕಪೂರ್ಣಗೊಂಡಿದ್ದು, ಜುಲೈನಲ್ಲಿ ಪ್ರಯಾಣಿಕರಿಗೆಮುಕ್ತವಾಗಲಿದೆ. ಒಟ್ಟು 7.53 ಕಿ.ಮೀ. ಉದ್ದದ ಈವಿಸ್ತರಣೆ ಕಾಮಗಾರಿಗೆ 1,560 ಕೋಟಿ ರೂ. ವೆಚ್ಚತಗುಲಿದ್ದು, ಭೂ-ಸ್ವಾಧೀನಕ್ಕೆ 360 ಕೋಟಿ ರೂ.ವೆಚ್ಚವಾಗಿದೆ.

ಅದರಿಂದಾಗಿ ಪೂರ್ವ-ಪಶ್ಚಿಮಕಾರಿಡಾರ್‌ ಮಾರ್ಗದ ಉದ್ದ 18.1 ಕಿ.ಮೀ. ಗೆಹೆಚ್ಚಳವಾಗಿದೆ. ಅದರಲ್ಲಿ ನಾಯಂಡಹಳ್ಳಿ,ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ,ಕೆಂಗೇರಿ ಬಸ್‌-ಟರ್ಮಿನಲ್‌ ಹಾಗೂ ಕೆಂಗೇರಿ -ಒಟ್ಟು6 ನಿಲ್ದಾಣಗಳಿವೆ. ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ನಿಲ್ದಾಣಗಳಲ್ಲಿ ಪಾರ್ಕಿಂಗ್‌ಸೌಲಭ್ಯಕಲ್ಪಿಸಲಾಗಿದೆ ಎಂದು ಹೇಳಿದರು.ಕೆಂಗೇರಿ ಬಸ್‌-ಟರ್ಮಿನಲ್‌ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್‌ ಸೌಲಭ್ಯ ಲ್ಪಿಸಲಾಗಿದೆ.

ಕೆಂಗೇರಿಬಸ್‌-ಟರ್ಮಿನಲ್‌ ನಿಲ್ದಾಣಹೊರತು ಪಡಿಸಿ ಉಳಿದಎಲ್ಲ ನಿಲ್ದಾಣಗಳನ್ನು ರಸ್ತೆ ದಾಟಲು ಪಾದಚಾರಿಗಳು ಬಳಸಬಹುದಾಗಿದೆ. ಬೈಯಪ್ಪನಹಳ್ಳಿಯಿಂದಕೆಂಗೇರಿಗೆ ಪ್ರಯಾಣಿಸಲು 56 ರೂ. ದರನಿಗದಿಪಡಿಸಲಾಗಿದೆ. ಮೆಟ್ರೋ ಜಾಲದ ಅತಿ ಉದ್ದದಮಾರ್ಗ, ಕೆಂಗೇರಿಯಿಂದ ಸಿಲ್ಕ್  ಇನ್ಸಿ rಟ್ಯೂಟ್‌ ವರೆಗೆ60 ರೂ. ದರ ನಿಗದಿಪಡಿಸಲಾಗಿದೆ. ಈ ವಿಸ್ತರಣೆಯಕಾರ್ಯಾಚರಣೆಯಿಂದ ಪ್ರತಿ ದಿನ ಸರಾಸರಿ 75,000ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಈಮಾರ್ಗದಲ್ಲಿ ಒನ್‌-ನೇಷನ್‌-ಒನ್‌-ಕಾರ್ಡ್‌ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿಆಟೊಮ್ಯಾಟಿಕ್‌ ಫೇರ್‌ ಕಲೆಕ್ಷನ್‌ ವ್ಯವಸ್ಥೆಅಳವಡಿಸಲಾಗಿದೆ. ರೈಲಿನ ಪರೀಕ್ಷಾರ್ಥ ಓಡಾಟವೂ ಪೂರ್ಣವಾಗಿದೆ ಎಂದರು.ಪ್ರತಿ ನಿಲ್ದಾಣದ ಛಾವಣಿಯಲ್ಲಿ 250 ಕಿಲೋವ್ಯಾಟ್‌ ಸೌರವಿದ್ಯುತ್‌ ಪ್ಯಾನೆಲ್‌ ಅಳವಡಿಸಲುಅವಕಾಶ ಕಲ್ಪಿಸಲಾಗಿದೆ.

Advertisement

ಕೆಂಗೇರಿಯಿಂದ ಚಲ್ಲಘಟ್ಟವರೆಗಿನ ವಿಸ್ತರಣೆ ಕಾಮಗಾರಿಯೂ ಪ್ರಗತಿಯಲ್ಲಿದ್ದು,ಮಾರ್ಚ್‌ 2022ರ ಅಂತ್ಯದಲ್ಲಿ ಈ ಕಾಮಗಾರಿಪೂರ್ಣಗೊಳ್ಳುವ ನಿರೀಕ್ಷೆಯಿದೆ.ಬೆಂಗಳೂರು ನಗರದಸಂಚಾರ ವ್ಯವಸ್ಥೆ ಸುಗಮಗೊಳ್ಳಲು ಹಾಗೂ ಒಂದುಭಾಗದಿಂದ ಇನ್ನೊಂದು ಭಾಗಕ್ಕೆ ಸುಲಭವಾಗಿಸಂಚರಿಸಲು ನಮ್ಮ ಮೆಟ್ರೋ ರೈಲುವರದಾನವಾಗಲಿದೆ. ಈ ಯೋಜನೆ ನಿಗದಿತಕಾಲಮಿತಿಯೊಳಗೆ ಪೂರ್ಣಗೊಳಿಸಲು ನಮ್ಮಸರ್ಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದುವಿವರಿಸಿದರು.ಪರಿಶೀಲನೆ ವೇಳೆ ನಮ್ಮ ಮೆಟ್ರೋ ವ್ಯವಸ್ಥಾಪಕನಿರ್ದೇಶಕ ರಾಕೇಶ್‌ ಸಿಂಗ್‌ ಹಾಗೂ ಇತರೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next