Advertisement
ಏಪ್ರಿಲ್ 13, 21, 25, 29 ಹಾಗೂ ಮೇ 1 ಮತ್ತು 17ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ದಿನಗಳಂದು ತಡ ರಾತ್ರಿ 12.30ರವರೆಗೂ ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ಸೇವೆ ಇರಲಿದೆ. ಕೊನೆ ವಾಣಿಜ್ಯ ರೈಲು ಸಂಚಾರವು ಕಬ್ಬನ್ ಉದ್ಯಾನ ಮೆಟ್ರೋ ರೈಲು ನಿಲ್ದಾಣದಿಂದ ಮೈಸೂರು ರಸ್ತೆಗೆ ತೆರಳಲಿದೆ. ಪಂದ್ಯಾವಳಿ ಮುಗಿದ ನಂತರ ಕಬ್ಬನ್ ಉದ್ಯಾನ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳಿಂದ “ರಿಟರ್ನ್ ಜರ್ನಿ ಪೇಪರ್ ಟಿಕೆಟ್’ ಪರಿಚಯಿಸಲಾಗಿದೆ.
ಹಾಗೂ ಚಿಲ್ಲರೆ ಕೊರತೆ ನೀಗಿಸುವುದಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸ್ಪಷ್ಟಪಡಿಸಿದೆ. ಇನ್ನು ಏಪ್ರಿಲ್ 15ರಂದು ಸಂಜೆ 4ಗಂಟೆಗೆ ಪಂದ್ಯಾವಳಿ ಪ್ರಾರಂಭಗೊಳ್ಳಲಿದೆ. ಆದಾಗ್ಯೂ ಪ್ರಯಾಣಿಕರು ಪಂದ್ಯ ಮುಗಿದ ನಂತರ ರಿಟರ್ನ್ ಜರ್ನಿಗಾಗಿ ಎಂ.ಜಿ. ರಸ್ತೆ ಮತ್ತು ಕಬ್ಬನ್ ಉದ್ಯಾನ ನಿಲ್ದಾಣಗಳಿಂದ 50 ರೂ. “ಪೇಪರ್ ಟಿಕೆಟ್’ ಖರೀದಿಸಬಹುದು. ಟೋಕನ್ ಸೌಲಭ್ಯವೂ ಇರಲಿದೆ.
ಇವರಿಗೆ ಪೇಪರ್ ಟಿಕೆಟ್ ಬೇಕಾಗಿಲ್ಲ ಸ್ಮಾರ್ಟ್ ಕಾಡ್ ಹೊಂದಿರುವವರಿಗೆ ಈ ಪೇಪರ್ ಟಿಕೆಟ್ ಅವಶ್ಯಕತೆ ಇರುವುದಿಲ್ಲ. ಎಂದಿನಂತೆ ರಿಯಾಯ್ತಿ ದರದಲ್ಲಿ ವಿಸ್ತರಿಸಿದ ಅವಧಿಯಲ್ಲೂ ಬಳಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಸ್ಪಷ್ಟಪಡಿಸಿದ್ದಾರೆ.