Advertisement
ಮೆಟ್ರೋ ರೈಲ್ವೇ ಜನರಲ್ ಮ್ಯಾನೇಜರ್ ಪಿ. ಉದಯ್ ಕುಮಾರ್ ರೆಡ್ಡಿ, ಹಿರಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಮಾತ್ರ ಇದ್ದ ಮೆಟ್ರೋ ರೇಕು ಕೋಲ್ಕತಾದ ಮಹಾ ಕರಣ್ ಮೆಟ್ರೋ ನಿಲ್ದಾಣದಿಂದ ಹೊರಟು ಹೂಗ್ಲಿ ನದಿಯಡಿ ಟನಲ್ ಮೂಲಕ ಸಾಗಿ ಹೌರಾ ಮೆಟ್ರೋ ನಿಲ್ದಾಣ ತಲುಪಿತು.“ಕೋಲ್ಕತಾ ಮತ್ತು ಸುತ್ತಮುತ್ತಲಿನ ನಾಗರಿಕರಿಗೆ ಅತ್ಯಾಧುನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ,’ ಎಂದು ಇದೇ ವೇಳೆ ಉದಯ್ ಕುಮಾರ್ ರೆಡ್ಡಿ ಹೇಳಿದರು.