Advertisement

ಮೆಟ್ರೋ ಸೇವೆ ಪುನರಾರಂಭ

01:21 AM Aug 05, 2019 | Team Udayavani |

ಬೆಂಗಳೂರು: ನಿರ್ವಹಣೆ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ನೇರಳೆ ಮಾರ್ಗದಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆ ಪುನರಾರಂಭಗೊಂಡಿದ್ದು, ಭಾನುವಾರ ಮಧ್ಯಾಹ್ನದಿಂದ ಎಂದಿನಂತೆ ವಾಣಿಜ್ಯ ಸಂಚಾರ ಶುರುವಾಯಿತು.

Advertisement

ಬೈಯಪ್ಪನಹಳ್ಳಿ-ಎಂ.ಜಿ. ರಸ್ತೆ ನಡುವೆ ಮೆಟ್ರೋ ಸಂಚಾರ ಬೆಳಗ್ಗೆ 11.25ರಿಂದಲೇ ಪುನರಾರಂಭಗೊಂಡಿದ್ದು, ಇಡೀ ದಿನ ಎಂದಿನಂತೆ “ನಮ್ಮ ಮೆಟ್ರೋ’, ಸೇವೆ ಸಲ್ಲಿಸಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಸ್ಪಷ್ಟಪಡಿಸಿದೆ.

ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಆಗಸ್ಟ್‌ 3ರ ರಾತ್ರಿ 9.30ರಿಂದ ಮತ್ತು 4ರಂದು ಬೆಳಗ್ಗೆ 11.30ರವರೆಗೆ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ನಿಲ್ದಾಣದಿಂದ ಎಂ.ಜಿ. ರಸ್ತೆವರೆಗೆ ಮೆಟ್ರೋ ಸೇವೆ ಲಭ್ಯ ಇರಲಿಲ್ಲ. ತ್ವರಿತ ಗತಿಯಲ್ಲಿ ತಜ್ಞರು ನಿರ್ವಹಣಾ ಕಾರ್ಯ ಪೂರ್ಣಗೊಳಿಸಿದ್ದು, 11.25ರಿಂದಲೇ ಸೇವೆಗೆ ಮುಕ್ತಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next