Advertisement

ಮೆಟ್ರೋ ದರ 30 ರೂ. ನಿಗದಿ

06:36 AM Jan 24, 2019 | Team Udayavani |

ಬೆಂಗಳೂರು: ಫ‌ಲಪುಷ್ಪ ಪ್ರದರ್ಶನದ ಅಂಗವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಪ್ರಯಾಣಿಕರ ಅನುಕೂಲಕ್ಕಾಗಿ ಜ. 25ರಿಂದ 27ರವರೆಗೆ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಪ್ರಯಾಣ ದರ ಕೇವಲ 30 ರೂ. ನಿಗದಿ ಪಡಿಸಿದೆ.

Advertisement

ಈ ಅವಧಿಯಲ್ಲಿ ಪೇಪರ್‌ ಟಿಕೆಟ್‌ಗಳನ್ನು ನಿಗಮವು ಪರಿಚಯಿಸಿದ್ದು, ನಿಗದಿತ ಮೂರೂ ದಿನಗಳಂದು ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ತೆರಳಲು 30 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಈ ಟಿಕೆಟ್‌ ಖರೀದಿಸಿದ ದಿನಕ್ಕೆ ಮಾತ್ರ ಸೀಮಿತವಾಗಿರಲಿದೆ. ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಎಲ್ಲ ಮೆಟ್ರೋ ನಿಲ್ದಾಣಗಳಲ್ಲೂ ಈ ಪೇಪರ್‌ ಟಿಕೆಟ್‌ ಲಭ್ಯ.

ಇತರೆ ಮೆಟ್ರೋ ನಿಲ್ದಾಣಗಳಿಂದ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುವ ವೇಳೆ ಟೋಕನ್‌ ಮತ್ತು ಸ್ಮಾರ್ಟ್‌ಕಾರ್ಡ್‌ಗಳ ದರವು ನಿತ್ಯ ಬಳಿಕೆಯಲ್ಲಿರುವ ಸಾಮಾನ್ಯ ದರವಾಗಿರುತ್ತದೆ. ಪ್ರಯಾಣಿಕರು ಲಾಲ್‌ಬಾಗ್‌ ಮೆಟ್ರೋ ನಿಲ್ದಾಣಕ್ಕೆ ಪ್ರವೇಶಿಸಲು ಪೇಪರ್‌ ಟಿಕೆಟ್‌ನ್ನು ಹಾಜರುಪಡಿಸಬೇಕು. ನಂತರ ಸದರಿ ಪೇಪರ್‌ ಟಿಕೆಟ್‌ಅನ್ನು ತಲುಪುವ ನಿಲ್ದಾಣದಲ್ಲಿ ಹಿಂದಿರಿಗಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next