Advertisement

ಮೋದಿಯಿಂದ ಮೆಟ್ರೋ ಮಾರ್ಗ ಉದ್ಘಾಟನೆ?  

02:22 PM Mar 02, 2023 | Team Udayavani |

ಬೆಂಗಳೂರು: ಪೂರ್ವ ಬೆಂಗಳೂರಿನಲ್ಲಿ ವಾಸಿಸುವ ಹಾಗೂ ಐಟಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೊಂದು ಖುಷಿ ಸುದ್ದಿ. ಬಹುನಿರೀಕ್ಷಿತ “ನಮ್ಮ ಮೆಟ್ರೋ’ 2ನೇ ಹಂತದ ವಿಸ್ತರಿತ ಮಾರ್ಗದಲ್ಲಿ ಬರುವ ಕೆ.ಆರ್‌. ಪುರಂ- ವೈಟ್‌ಫೀಲ್ಡ್‌ ನಡುವೆ ವಾಣಿಜ್ಯ ಸಂಚಾರ ಸೇವೆಗೆ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಇದರ ಲೋಕಾರ್ಪಣೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗುವ ಸಾಧ್ಯತೆ ಇದೆ.

Advertisement

ಒಂದೆಡೆ ಸಿಆರ್‌ಎಸ್‌ ಅನುಮತಿ ನೀಡಿದ್ದು, ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಮೆಟ್ರೋ ರೈಲು ಅನ್ನು ಯಾವಾಗಲಾದರೂ ಸೇವೆಗೆ ಅಣಿಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಿದ್ಧವಾಗಿದೆ. ಮತ್ತೂಂದೆಡೆ ಮಾರ್ಚ್‌ 11ಕ್ಕೆ ಪ್ರಧಾನಿ ಬೆಂಗಳೂರು- ಮೈಸೂರು ಎಕ್ಸ್‌ ಪ್ರಸ್‌ ಹೆದ್ದಾರಿ ಲೋಕಾರ್ಪಣೆಗೆ ಆಗಮಿಸುತ್ತಿದ್ದಾರೆ. ಹಾಗಾಗಿ, ಪ್ರಧಾನಮಂತ್ರಿ ಅವರಿಂದಲೇ ಸೇವೆಗೆ ಹಸಿರು ನಿಶಾನೆ ತೋರಿಸಲು ಆಡಳಿತ ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ.

“ಫೆ. 28 (ಮಂಗಳವಾರ)ರಂದು ಉದ್ದೇಶಿತ ಮಾರ್ಗಕ್ಕೆ ಸಿಆರ್‌ಎಸ್‌ ಪ್ರಮಾಣಪತ್ರ ದೊರಕಿದೆ. ನಿಲ್ದಾಣಗಳು ಸೇರಿದಂತೆ ಮಾರ್ಗದ ಬಹುತೇಕ ಕಾರ್ಯ ಗಳೂ ಪೂರ್ಣಗೊಂಡಿವೆ. ಕೆಲವು ಸಣ್ಣಪುಟ್ಟ ಸಲಹೆಗಳನ್ನು ನೀಡಿದ್ದು, ಅವುಗಳ ಅಳವಡಿಕೆಗೆ 10 ದಿನಗಳು ಬೇಕಾಗುತ್ತದೆ. ಹೆಚ್ಚು ಕಾರ್ಮಿಕರನ್ನು ನಿಯೋಜಿಸಿ ಮತ್ತಷ್ಟು ತ್ವರಿತವಾಗಿ ಮಾಡಿಮು ಗಿಸಲಿಕ್ಕೂ ಅವಕಾಶ ಇದೆ. ಒಟ್ಟಾರೆ ಮಾರ್ಚ್‌ 15ರ ಆಸುಪಾಸಿನಲ್ಲಿ ಲೋಕಾರ್ಪಣೆಗೆ ನಾವು ಸಿದ್ಧ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೆ.ಆರ್‌. ಪುರಂ- ವೈಟ್‌ ಫೀಲ್ಡ್‌ ನಡುವೆ ವಾಣಿಜ್ಯ ಸಂಚಾರಕ್ಕೆ ಸಿಆರ್‌ಎಸ್‌ ಅನುಮತಿ ದೊರಕಿದೆ. ಮಾರ್ಚ್‌ 15ರ ವೇಳೆಗೆ ಉದ್ದೇಶಿತ ಈ ಮಾರ್ಗವನ್ನು ಲೋಕಾರ್ಪಣೆ ಮಾಡಲು ನಾವು ಸಿದ್ಧ. ಈ ಸಂಬಂಧದ ಸಿದ್ಧತೆಗಳು ನಡೆದಿವೆ. –ಅಂಜುಂ ಪರ್ವೇಜ್‌, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್‌.

Advertisement

Udayavani is now on Telegram. Click here to join our channel and stay updated with the latest news.

Next