Advertisement
ಮೈಸೂರು ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ನಡೆಸಲಾಗು ತ್ತಿದೆ. ಅದಕ್ಕಾಗಿ ಇಟ್ಟಮಡು ಜಂಕ್ಷನ್‌ನಿಂದ ಕಾಮಾಕ್ಯ ಜಂಕ್ಷನ್‌ವರೆಗೆ ಹಾಗೂ ಕನಕಪುರ ರಸ್ತೆಯ ಸಾರಕ್ಕಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಮಾರ್ಗವೂ ನಿರ್ಮಾಣವಾಗಲಿದೆ. ಹೀಗಾಗಿ ಮೇಲ್ಸೇತುವೆಗಳು ನಿರ್ಮಾಣವಾಗಬೇಕಿದ್ದ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಹಾಗೂ ಮೆಟ್ರೋ ಮಾರ್ಗವನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಒಪ್ಪಿಗೆ ಸೂಚಿಸಿದೆ.
Related Articles
Advertisement
ಅದೇ ಮಾದರಿಯಲ್ಲಿ 3ನೇ ಹಂತದ ಮೆಟ್ರೋ ಮಾರ್ಗ ನಿರ್ಮಿಸುವಾಗ ಸಾರಕ್ಕಿ ಜಂಕ್ಷನ್‌ನಿಂದ ಕನಕಪುರ ರಸ್ತೆ ಹಾಗೂ ಇಟ್ಟಮಡು ಜಂಕ್ಷನ್‌ನಿಂದ ಕಾಮಾಕ್ಯ ಜಂಕ್ಷನ್‌ವರೆಗೆ ಮೇಲ್ಸೇತುವೆ ಮತ್ತು ಮೆಟ್ರೋ ಮಾರ್ಗವನ್ನು ಜತೆಜತೆಯಾಗಿ ನಿರ್ಮಿಸಲಿದೆ. ಹೀಗಾಗಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ನಿಗದಿ ಮಾಡಲಾಗಿದ್ದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.
3 ಯೋಜನೆಗಳಿಗೆ ಬಳಕೆ: ಸಿಗ್ನಲ್ ಮುಕ್ತ ಕಾರಿ ಡಾರ್‌ನಲ್ಲಿ ನಿರ್ಮಿಸಬೇಕಿದ್ದ ಎರಡು ಮೇಲ್ಸೇತು ವೆಗಳಿಗೆ ನಿಗದಿಯಾಗಿದ್ದ ಹಣವನ್ನು ಬಿಬಿಎಂಪಿ ಬೇರೆ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅದರಂತೆ ಬಿಬಿಎಂಪಿ ನಿರ್ಮಿಸಲು ಉದ್ದೇಶಿಸಿರುವ ಮೇಖ್ರಿ ವೃತ್ತದಿಂದ ಸದಾಶಿನಗರ ಪೊಲೀಸ್ ಠಾಣೆವರೆಗೆ ಹಾಗೂ ಕಾವೇರಿ ಜಂಕ್ಷನ್ ನಿಂದ ಸದಾಶಿವನಗರ ಬಾಷ್ಯಂ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣ ಹಾಗೂ ಮೇಖ್ರಿ ವೃತ್ತದಿಂದ ವಿಡ್ಸರ್ ಮ್ಯಾನರ್ ಮೇಲ್ಸೇತುವೆವರೆ ಗಿನ ಪ್ಯಾಲೇಸ್ ರಸ್ತೆ ಅಗಲೀಕರಣ ಕಾಮಗಾರಿ ಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಕುರಿತಂತೆ ಶೀಘ್ರದಲ್ಲಿ ರಾಜ್ಯ ಸರ್ಕಾರದ ಅನುಮತಿಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗುತ್ತದೆ.
ಸದ್ಯ ಈ ಯೋಜನೆಗಳ ಯೋಜನಾ ವೆಚ್ಚ ಇನ್ನೂ ನಿಗದಿಯಾಗಿಲ್ಲ. ಈ ಕುರಿತು ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ, ಯೋಜನಾ ವೆಚ್ಚ ನಿಗದಿ ಮಾಡಲಾಗುತ್ತದೆ. ಆನಂತರ ಯೋಜನಾ ವೆಚ್ಚಕ್ಕೆ ಸದ್ಯ ಬಿಬಿಎಂಪಿ ಬಳಿ ಉಳಿದಿರುವ 170.50 ಕೋಟಿ ರೂ. ಹಣವನ್ನು ಬಳಸಲಾಗುತ್ತದೆ ಹಾಗೂ ಹೆಚ್ಚುವರಿ ಅನುದಾನದ ಅಗತ್ಯವಿರದ್ದರೆ ರಾಜ್ಯ ಸರ್ಕಾರದಿಂದ ಪಡೆಯಲಾಗುತ್ತದೆ.
ಸಾರಕ್ಕಿ ಜಂಕ್ಷನ್‌ನಿಂದ ಕನಕಪುರ ರಸ್ತೆ ಹಾಗೂ ಇಟ್ಟಮಡು ಜಂಕ್ಷನ್‌ನಿಂದ ಕಾಮಾಕ್ಯ ಜಂಕ್ಷನ್‌ವರೆಗೆ ಮೇಲ್ಸೇತುವೆಯನ್ನು ಬಿಎಂಆರ್‌ಸಿಎಲ್‌ನಿಂದಲೇ ನಿರ್ಮಿಸಲಾಗುತ್ತಿದೆ. ಹೀಗಾಗಿ ಆ ಯೋಜನೆಗೆ ನಿಗದಿ ಮಾಡಿರುವ 170.50 ಕೋಟಿ ರೂ. ಮೊತ್ತವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಮೇಖ್ರಿ ವೃತ್ತ ಸುತ್ತ ನಿರ್ಮಿಸಲಿರುವ ಎರಡು ಮೇಲ್ಸೇ ತುವೆ ಹಾಗು ರಸ್ತೆ ಅಗಲೀಕರಣ ಕಾಮಗಾರಿಗೆ ಬಳಸಿಕೊಳ್ಳಲಾಗುವುದು. – ರವೀಂದ್ರ, ಬಿಬಿಎಂಪಿ ವಿಶೇಷ ಆಯುಕ್ತ
– ಗಿರೀಶ್ ಗರಗ