Advertisement

ಉಪನಗರದಿಂದ ಮೆಟ್ರೋಗೆ ಸಂಪರ್ಕ

11:43 AM Oct 05, 2021 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಅನ್ನು ನಗರದಿಂದ ಉಪನಗರಗಳಿಗೆ ಕೊಂಡೊಯ್ಯುವ ಬದಲಿಗೆ ಉಪನಗರಗಳಿಂದಲೇ ಜನರನ್ನು ನೇರವಾಗಿ ಮೆಟ್ರೋ ನಿಲ್ದಾಣಗಳಿಗೆ ಕರೆತಂದು ಬಿಡುವಂತಾದರೆ ಹೇಗೆ?

Advertisement

ಹತ್ತಾರು ಸಾವಿರ ಕೋಟಿ ರೂ. ಸುರಿದು ಹತ್ತಾರು ವರ್ಷಗಟ್ಟಲೆ ಸಮಯ ಹಿಡಿಯುವ ಮೆಟ್ರೋ ಯೋಜನೆಯ ಎದುರು ನೋಡುವ ಬದಲು ಅತ್ಯಲ್ಪ ಅವಧಿಯಲ್ಲಿ ರಾಮನಗರ, ಮಾಗಡಿ, ಕೆ.ಆರ್‌.ಪುರದಿಂದ ಹೊಸಕೋಟೆ (ಭವಿಷ್ಯದಲ್ಲಿ), ರೇಷ್ಮೆ ಸಂಸ್ಥೆಯಿಂದ ಕನಕಪುರಕ್ಕೆ ಮೆಟ್ರೋ ಸಂಪರ್ಕ ಬಸ್‌ ಸೇವೆಗಳ ಮಾದರಿಯಲ್ಲಿ “ವಚ್ಯುìವಲ್‌ ಕನೆಕ್ಟಿವಿಟಿ’ ನೀಡಲು ಸಾಧ್ಯವಿದೆ.

ಇದನ್ನೂ ಓದಿ;- ಪ್ರಿಯಾಂಕಾ ಗಾಂಧಿ ಅವರ ಹಕ್ಕನ್ನು ಕಸಿದದ್ದು ಇಡೀ ಭಾರತೀಯ ಸಂಸ್ಕೃತಿಗೆ ಮಾಡಿದ ಅಪಮಾನ: ಡಿಕೆಶಿ

ಇದರಿಂದ ಕೆಎಸ್‌ಆರ್‌ಟಿಸಿ ಅಥವಾ ಬಿಎಂಟಿಸಿಗೂ ಲಾಭವಾಗುತ್ತದೆ. ಜತೆಗೆ ಮೆಟ್ರೋಗೆ ಜನರನ್ನೂ ಕರೆತಂದಂತೆ ಆಗುತ್ತದೆ. ಇಂತಹದ್ದೊಂದು ಸುಲಭ ಮತ್ತು ಸರಳವಾಗಿ ಅನುಷ್ಠಾನಗೊಳಿಸಬಹುದಾದ ಯೋಚನೆಯೊಂದನ್ನು ತಜ್ಞರು ಮುಂದಿಟ್ಟಿದ್ದಾರೆ. ಇದರಿಂದ ಸಾವಿರಾರು ಕೋಟಿ ರೂ. ಸುರಿಯುವ ಅಗತ್ಯ ಇರುವುದಿಲ್ಲ.ಯೋಜನೆ ಯಿಂದ ಜನರ ಮೇಲೆ ಆರ್ಥಿಕ ಹೊರೆಯೂ ಆಗುವು ದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಚಿಂತನೆ ನಡೆಸಬೇಕಿದೆ ಎಂದು ತಜ್ಞರು ಹೇಳುತ್ತಾರೆ.

ಲೆಕ್ಕಾಚಾರ ಹೀಗಿದೆ: ಒಂದು ಕಿ.ಮೀ. ಮೆಟ್ರೋ ನಿರ್ಮಾಣಕ್ಕೆ 200 ಕೋಟಿ ರೂ. ಖರ್ಚಾಗುತ್ತದೆ. 50 ಕಿ.ಮೀ. ಅಂದಾಜು12ರಿಂದ 15 ಸಾವಿರ ಕೋಟಿ ರೂ. ವ್ಯಯಿಸಬೇಕು. ಇದಕ್ಕೆ ಸಾಕಷ್ಟು ಸಮಯವೂ ಹಿಡಿಯುತ್ತದೆ. ಭೂಸ್ವಾಧೀನ ಸೇರಿದಂತೆ ಹಲವು ಪ್ರಕ್ರಿಯೆಗಳನ್ನೂ ಕೈಗೊಳ್ಳಬೇಕು. ಆದರೆ, ಕೆಎಸ್‌ಆರ್‌ಟಿಸಿ ಅಥವಾಬಿಎಂಟಿಸಿಯೊಂದಿಗೆ ಕೈಜೋಡಿಸಿ, ಬಸ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟ್‌ಂ (ಬಿಆರ್‌ಟಿಎಸ್‌) ಮಾದರಿಯಲ್ಲಿ ಇದೇ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳನ್ನು ಪರಿಚಯಿಸಬಹುದು.

Advertisement

ಬಸ್‌ಗಳನ್ನು ಒಪ್ಪಂದದ ಮೇರೆಗೆ ಪಡೆದು ಅಥವಾ ಆದಾಯ ಹಂಚಿಕೆ ಆಧಾರದಲ್ಲಿ ಕಾರ್ಯಾಚರಣೆ ಮಾಡಿದರೆ, ಸಮೂಹಸಾರಿಗೆಗೆ ಉತ್ತೇಜನ ನೀಡುವುದರ ಜತೆಗೆ ಆರ್ಥಿಕವಾಗಿಯೂ ಸಾಧುವೂ ಆಗುತ್ತದೆ ಎಂದುಬಿಎಂಆರ್‌ಸಿಎಲ್‌ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಪ್ರಸ್ತುತ ಒಂದು ಬಸ್‌ಗೆ ದಿನದ ಬಾಡಿಗೆ 10-12ಸಾವಿರ ರೂ. ಇದೆ. 50 ಕಿ.ಮೀ. ದೂರದಲ್ಲಿರುವ ರಾಮನಗರಕ್ಕೆ ನಿತ್ಯ ಬಸ್ಸೊಂದು ಕನಿಷ್ಠ 6 ಟ್ರಿಪ್‌ಗ್ಳನ್ನುಪೂರೈಸುತ್ತದೆ. ಕೆಂಗೇರಿಯಿಂದ ಈ ಅಂತರ ಕಡಿಮೆ ಆಗುವುದರ ಜತೆಗೆ ಸಂಚಾರದಟ್ಟಣೆ ಕಿರಿಕಿರಿ ಇರುವುದಿಲ್ಲ ಹಾಗೂ ಹತ್ತುಪಥದ ರಸ್ತೆಯೂ ಆ ಮಾರ್ಗದಲ್ಲಿ ಬರುತ್ತಿದೆ. ಹಾಗಾಗಿ, ಹೆಚ್ಚು ಟ್ರಿಪ್‌ಗ್ಳು ಪೂರೈಸಲೂ ಸಾಧ್ಯವಿದೆ. 6 ಟ್ರಿಪ್‌ಗ್ಳ ಲೆಕ್ಕಾಚಾರ

ಹಾಕಿದರೂ ಹತ್ತು ಬಸ್‌ಗಳನ್ನು ನಿಯೋಜಿಸಿ, ಒಂದು ಬಸ್‌ನಲ್ಲಿ ಸರಾಸರಿ 50 ಜನರಂತೆ ಅನಾಯಾಸವಾಗಿ 3ರಿಂದ 4 ಸಾವಿರ ಜನರನ್ನು ಕರೆತರಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಾರೆ. ಈಗಾಗಲೇ ಉದ್ದೇಶಿತ ಮಾರ್ಗಗಳಲ್ಲಿ ಬಸ್‌ಗಳಿರಬಹುದು. ಆದರೆ, ವಿಶೇಷವಾಗಿ ಮೆಟ್ರೋ ಸಂಪರ್ಕ ಸೇವೆಗಳಿಗಾಗಿಯೇ ಮೀಸಲಾಗಿಲ್ಲ. ಬಸ್‌ ಮತ್ತು ಮೆಟ್ರೋ ಕಾರ್ಯಾಚರಣೆ ನಡುವೆ ಒಂದಕ್ಕೊಂದು ಹೊಂದಾಣಿಕೆ ಇಲ್ಲ. ಅಷ್ಟೇ ಅಲ್ಲ, ಪ್ರಯಾಣಿಕರು ಬಸ್‌ಗಳಿಗಾಗಿ ಕಾಯಬೇಕಾಗುತ್ತದೆ.

ಬೇರೆ ಕಡೆಯಿಂದ ಬರುವ ಬಸ್‌ಗಳು ಮೊದಲೇ ಭರ್ತಿ ಆಗಿರುತ್ತವೆ. ಈ ಎಲ್ಲ ಕಾರಣಗಳಿಂದ ಜನ ಹಿಂದೇಟು ಹಾಕುತ್ತಾರೆ.

ಮೆಟ್ರೋ ಪ್ರಯಾಣಿಕರಿಗೆ ರಿಯಾಯ್ತಿ ದರ

ಬಿಎಂಆರ್‌ಸಿಎಲ್‌ ಮನಸ್ಸು ಮಾಡಿದರೆ, ಉದ್ದೇಶಿತ ಮಾರ್ಗಗಳಲ್ಲಿ ಬಸ್‌ಗಳಲ್ಲಿ ಪ್ರಯಾಣಿಸುವ “ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ರಿಯಾಯ್ತಿ ದರವನ್ನೂ ನಿಗದಿಪಡಿಸಬಹುದು. ಹೇಗೆಂದರೆ, ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಹೊಂದಿರುವವರಿಗೆ ರಿಯಾಯ್ತಿ ದರ. ಉಳಿದವರಿಗೆ ಮಾಮೂಲು ಪ್ರಯಾಣ ದರ ನಿಗದಿಪಡಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾÃ

“ಸರ್ಕಾರದಿಂದ ಹಣ ಭರಿಸಲಿ’

ದೂರದ ಊರುಗಳ ನಡುವೆ ಸಂಪರ್ಕ ಸೇವೆಗಳಲ್ಲಿ ಸಣ್ಣ ತಾಂತ್ರಿಕ ಸಮಸ್ಯೆಯೂ ಇದೆ. ಉದಾಹರಣೆಗೆ ಬೆಳಗ್ಗೆ ರಾಮನಗರದಿಂದ ಬೆಂಗಳೂರಿಗೆ ಬರುವ ಜನ ಹೆಚ್ಚಿರುತ್ತಾರೆ. ಅದೇ ರೀತಿ, ಸಂಜೆ ನಗರದಿಂದ ಹೊರಗೆ ಹೋಗುವವರು ಹೆಚ್ಚು. ಇಂತಹ ಸಂದರ್ಭದಲ್ಲಿ ಒಂದು ಮಾರ್ಗದಲ್ಲಿ ಪ್ರಯಾಣಿಕರ ಕೊರತೆ ಎದುರಿಸಬೇಕಾಗುತ್ತದೆ. ಇದಕ್ಕಾಗಿ ದರದಲ್ಲಿ ಹೊಂದಾಣಿಕೆ ಮಾಡಬಹುದುಅಥವಾ ಸರ್ಕಾರದಿಂದ ಆ ಕೊರತೆಯಾಗುವ ಹಣವನ್ನು ಭರಿಸುವಂತಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next