Advertisement
ಎರಡು ಪ್ರಮುಖ ಮಾರ್ಗಗಳ ಟೆಂಡರ್ ರದ್ದು ಮತ್ತಿತರ ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ಗಡುವನ್ನು 2024ಕ್ಕೆ ವಿಸ್ತರಣೆ ಮಾಡಿದೆ. ಇದರಿಂದ ಒಟ್ಟಾರೆ 128 ಕಿ.ಮೀ. ಮೆಟ್ರೋ ಜಾಲ ಪೂರ್ಣಗೊಳ್ಳಲು ನಗರದ ಪ್ರಯಾಣಿಕರು ಇನ್ನೂ ಕನಿಷ್ಠ ಐದರಿಂದ ಆರು ವರ್ಷ ಕಾಯಬೇಕಾಗಿದೆ. – ಇದನ್ನು ಸ್ವತಃ ಬಿಎಂಆರ್‌ಸಿಯು ರಾಜ್ಯದ ಆರ್ಥಿಕ ಸಮೀಕ್ಷೆ 2018-19ರಲ್ಲಿ ಸ್ಪಷ್ಟಪಡಿಸಿದೆ.
Related Articles
Advertisement
ಗೊಟ್ಟಿಗೆರೆ- ಡೈರಿ ವೃತ್ತ (7.250 ಕಿ.ಮೀ.)ದ ನಡುವೆ 2021ರ ಅಂತ್ಯದೊಳಗೆ ಮೆಟ್ರೋ ವಾಣಿಜ್ಯ ಸಂಚಾರ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ. ಅಂತಿಮವಾಗಿ ಎರಡನೇ ಹಂತದ ಅತಿದೊಡ್ಡ ಸುರಂಗ ಮಾರ್ಗ ಡೈರಿ ವೃತ್ತದಿಂದ ನಾಗವಾರ (14 ಕಿ.ಮೀ.)ಕ್ಕೆ ಕೈಹಾಕಲು ನಿಗಮ ಉದ್ದೇಶಿಸಿದೆ. ಇವೆಲ್ಲವೂ 2024ರ ಜೂನ್‌ನಲ್ಲಿ ಸಂಪೂರ್ಣವಾಗಿ ಸೇವೆಗೆ ಸಿದ್ಧಗೊಳ್ಳಲಿವೆ.
131 ಹೆಕ್ಟೇರ್; 3,011 ಆಸ್ತಿ: ಈ ವಿಳಂಬ ಧೋರಣೆಯು ಯೋಜನಾ ವೆಚ್ಚ ಹೆಚ್ಚಳ ರೂಪದಲ್ಲಿ ಪರಿಣಮಿಸಲಿದೆ. 2012ರಲ್ಲಿ ಮಾಡಿದ ಯೋಜನಾ ವೆಚ್ಚ 26,405 ಕೋಟಿ ರೂ. ಈಗಾಗಲೇ ಅಧಿಕಾರಿಗಳೇ ಹೇಳಿದಂತೆ ಇದು 32 ಸಾವಿರ ಕೋಟಿ ರೂ.ಗೆ ತಲುಪಲಿದೆ. ಈಗ ಮತ್ತೆ ಒಂದು ವರ್ಷ ವಿಸ್ತರಣೆ ಆಗಲಿರುವುದರಿಂದ ವೆಚ್ಚ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.
ಎರಡನೇ ಹಂತದ ಯೋಜನೆಗೆ ಒಟ್ಟಾರೆ 131 ಹೆಕ್ಟೇರ್ ಭೂಮಿ ಹಾಗೂ 3,011 ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಗೇ ಹೆಚ್ಚು ಸಮಯ ಹಿಡಿಯಿತು ಎನ್ನಲಾಗಿದೆ. ಈ ಮಧ್ಯೆ ಮತ್ತೂಂದೆಡೆ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಸೆಂಟ್ರಲ್ ಸಿಲ್ಕ್ಬೋರ್ಡ್-ಕೆ.ಆರ್. ಪುರ (17 ಕಿ.ಮೀ.) ಹಾಗೂ ಕೆ.ಆರ್. ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (29.062 ಕಿ.ಮೀ.)ದ ಮಾರ್ಗವನ್ನು 2023ಕ್ಕೆ ಪೂರ್ಣಗೊಳಿಸುವ ಕಾರ್ಯವೂ ನಡೆದಿರುತ್ತದೆ.
2018-19ನೇ ಸಾಲಿನಲ್ಲಿ 105.5 ಕಿ.ಮೀ. ಉದ್ದದ ಮೆಟ್ರೋ ಯೋಜನೆಯ ಪೂರ್ವ ಕಾರ್ಯಸಾಧ್ಯತೆ ಕುರಿತು ಅಧ್ಯಯನವನ್ನು ಕೈಗೆತ್ತಿಕೊಳ್ಳಲು ನಿಗಮ ಉದ್ದೇಶಿಸಿದೆ. ಇನ್ನು ವಿಮಾನ ನಿಲ್ದಾಣಕ್ಕೆ ಹೆಬ್ಟಾಳದ ಮೂಲಕ ಹಾದುಹೋಗಲಿರುವ ಮಾರ್ಗದ ಪರಿಷ್ಕರಣೆ, ಜೋಡಣೆ, ಅಂದಾಜು ವೆಚ್ಚ ಹಾಗೂ ಪರಿಷ್ಕೃತ ಹಣಕಾಸು ಯೋಜನೆಗಳ ಅನುಮೋದನೆ ಕಾರ್ಯ ಪ್ರಗತಿಯಲ್ಲಿದೆ.
ಎರಡನೇ ಹಂತದ ಮೆಟ್ರೋ ಮಾರ್ಗದ ವಿವರಎಲ್ಲಿಂದ-ಎಲ್ಲಿಗೆ ಉದ್ದ (ಕಿ.ಮೀ.ಗಳಲ್ಲಿ) ಅಂದಾಜು ವೆಚ್ಚ (ಕೋಟಿ ರೂ.ಗಳಲ್ಲಿ)
-ಬೈಯಪ್ಪನಹಳ್ಳಿ-ಐಟಿಪಿಎಲ್-ವೈಟ್‌ಫೀಲ್ಡ್ 15.50 4,845
-ಮೈಸೂರು ರಸ್ತೆ-ಕೆಂಗೇರಿ 6.46 1,867.95
-ನಾಗಸಂದ್ರ-ಬಿಐಇಸಿ 3.77 1,168.22
-ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್ 6.29 1,765.88
-ಆರ್.ವಿ. ರಸ್ತೆ-ಬೊಮ್ಮಸಂದ್ರ 18.82 5,774.09
-ಗೊಟ್ಟಿಗೆರೆ-ನಾಗವಾರ 21.25 11,014
-ಒಟ್ಟಾರೆ 72.095 26,405.14