Advertisement

ವಿಧ ವಿಧಾನ: ಇಲ್ಲಿ ಪಕ್ಷಾಂತರವೇ ಸಂಪ್ರದಾಯ!

12:32 AM Mar 25, 2023 | Team Udayavani |

ದಾವಣಗೆರೆ ಜಿಲ್ಲೆಯ ಜಗಳೂರು ಪಕ್ಷಾಂತರಕ್ಕೆ ಪ್ರಸಿದ್ಧಿ. ಇದು ಈಗಲ್ಲ, ಹಿಂದಿನಿಂದಲೂ ಈ ಪಕ್ಷಾಂತರ ವರಸೆ ನಡೆದುಕೊಂಡೇ ಬರುತ್ತಿದೆ. 1972ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಜಿ.ಎಚ್‌.ಅಶ್ವತ್ಥ ರೆಡ್ಡಿ, 1978 ರಲ್ಲಿ ಜೆಎನ್‌ಪಿ ಸೇರಿ ಅಲ್ಲಿಂದ ಆಯ್ಕೆಯಾಗಿದ್ದರು. 1983, 1985 ಮತ್ತು 1989ರಲ್ಲಿ ಮತ್ತೆ ಕಾಂಗ್ರೆಸ್‌ ಸೇರಿ ಶಾಸಕರಾಗಿದ್ದರು. 1999ರಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದ ಎಸ್‌. ವಿ. ರಾಮಚಂದ್ರ ಆಯ್ಕೆಯಾಗಿ ಬಿಜೆಪಿಯ ಎಚ್‌.ಪಿ.ರಾಜೇಶ್‌ ಸೋಲಿಸಿದ್ದರು. 2011ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ರಾಮಚಂದ್ರ, ಸ್ವತಂತ್ರ್ಯ ಅಭ್ಯರ್ಥಿ ರಾಜೇಶ್‌ ಅವರನ್ನು ಸೋಲಿಸಿದ್ದರು. 2013ರಲ್ಲಿ ಕಾಂಗ್ರೆಸ್‌ ಸೇರಿದ್ದ ರಾಜೇಶ್‌ ಬಿಜೆಪಿಯಲ್ಲಿದ್ದ ಎಸ್‌.ವಿ. ರಾಮಚಂದ್ರ ಅವರನ್ನು ಸೋಲಿಸಿದರು. 2018ರಲ್ಲಿ ಮತ್ತೆ ರಾಮಚಂದ್ರ ಅವರು ರಾಜೇಶ್‌ ಅವರನ್ನು ಸೋಲಿಸಿ ಆಯ್ಕೆಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next