Advertisement
ಕರ್ನಾಟಕದಲ್ಲಿ ರಾಜಕೀಯ ಪಕ್ಷವೊಂದು ಬದುಕಿದ್ದರೆ ಅದು ಬಿಜೆಪಿ ಮಾತ್ರ. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಕುರ್ಚಿಗಾಗಿ ಹೊಡೆದಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಬಿಟ್ಟು ಪಕ್ಷ ಸಂಘಟನೆ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಅವರಿಬ್ಬರಿಗೂ ಹೇಳಿದಾಕ್ಷಣವೇ ಪಾರ್ಟಿ ಬಿಟ್ಟು ಓಡುತ್ತಿರುತ್ತಾರೆ. ಯಾವ ಪಕ್ಷಕ್ಕೆ ಹೋಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿದ್ದಾರೆ ಎಂದು ಮಣಿಪಾಲದಲ್ಲಿ ಮಂಗಳವಾರ “ಉದಯವಾಣಿ”ಯೊಂದಿಗೆ ನಡೆಸಿದ ಚಿಟ್‌ಚಾಟ್‌ನಲ್ಲಿ ಈಶ್ವರಪ್ಪ ಹೇಳಿದರು.
ಇದ್ದ ವಿಚಾರವನ್ನು ಅಥವಾ ಜನ ಸಾಮಾನ್ಯರು ಏನು ಮಾತನಾಡಿಕೊಳ್ಳುತ್ತಿದ್ದಾರೋ ಅದನ್ನು ನೇರವಾಗಿ ಹೇಳುತ್ತೇನೆ. ನೇರ ನುಡಿಯೇ ವಿವಾದವಾಗಿ ಕಾಣುತ್ತದೆ. ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ನಂಬಿದ ಸಿದ್ಧಾಂತವನ್ನು ಬಿಟ್ಟು ಬದುಕುವ, ಮಾತನಾಡುವ ಪ್ರಶ್ನೆಯೇ ಇಲ್ಲ. ಚುನಾವಣೆಗಾಗಿ ರಾಜಕಾರಣ ಮಾಡುತ್ತಿಲ್ಲ. ಸಮಾಜವನ್ನು ಜಾಗೃತಗೊಳಿಸಿ ರಾಷ್ಟ್ರನಿಷ್ಠೆ ತರಲು ರಾಜಕಾರಣ ಮಾಡುತ್ತಿದ್ದೇವೆ. ನಾನು ಮುಸ್ಲಿಂ ವಿರೋಧಿಯಲ್ಲ. ನನ್ನ ಹೇಳಿಕೆಯನ್ನು ರಾಷ್ಟ್ರವಾದಿ ಮುಸ್ಲಿಮರು ಒಪ್ಪುತ್ತಾರೆ. ಪಿಎಫ್ಐ, ಎಸ್‌ಡಿಪಿಐ ಅನುಯಾಯಿಗಳು ಈಶ್ವರಪ್ಪ ಅವರು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ನನಗೆ ಅದರಿಂದ ಯಾವ ಭಯವೂ ಇಲ್ಲ ಎಂದರು.
Related Articles
Advertisement