Advertisement
ಗದಗಗದಗ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಶಾಸಕ ಎಚ್.ಕೆ. ಪಾಟೀಲ, ಬಿಜೆಪಿಯಿಂದ ಅನಿಲ ಮೆಣಸಿನಕಾಯಿ ಸ್ಪ ರ್ಧಿಸಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿ ಸಿರುವ ಶಾಸಕ ಎಚ್.ಕೆ. ಪಾಟೀಲ ಹ್ಯಾಟ್ರಿಕ್ ಜಯದತ್ತ ದೃಷ್ಟಿ ನೆಟ್ಟಿದ್ದಾರೆ. ಇನ್ನು 2013 ಮತ್ತು 2018ರ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಈ ಬಾರಿ ಮೊದಲ ಗೆಲುವು ಸಾ ಧಿಸಲು ಹವಣಿಸುತ್ತಿದ್ದು, ಅನುಕಂಪದ ಅಲೆ ಅವರ ಪರವಾಗಿದೆ. ಗದಗ ಮತಕ್ಷೇತ್ರಗಳಲ್ಲಿ ಲಿಂಗಾಯತರು(ಪಂಚಮಸಾಲಿ, ಬಣಜಿಗರು, ಗಾಣಿಗೇರ) ಹಾಗೂ ಅಹಿಂದ ವರ್ಗದವರು (ಅಲ್ಪಸಂಖ್ಯಾತರು, ಕುರುಬ ಸಮುದಾದವರು) ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿದ್ದು, ಅವರೇ ನಿರ್ಣಾಯಕರಾಗಿದ್ದಾರೆ. ಶಾಸಕ ಎಚ್.ಕೆ. ಪಾಟೀಲ ರಡ್ಡಿ ಸಮಾಜಕ್ಕೆ ಸೇರಿದವರಾಗಿದ್ದರೆ, ಅನಿಲ ಮೆಣಸಿನಕಾಯಿ ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜೆಡಿಎಸ್‌ನಿಂದ ರಡ್ಡಿ ಸಮಾಜದ ವೆಂಕನಗೌಡ ಗೋವಿಂದಗೌಡ್ರ, ಆಪ್‌ನಿಂದ ಪೀರ್‌ಸಾಬ್ ಶೇಖ್, ಕೆಆರ್‌ಎಸ್‌ನಿಂದ ಆನಂದ ಹಂಡಿ ಸೇರಿ ದಂತೆ ಹಲ ವರು ಅಂತಿಮ ಕಣದಲ್ಲಿದ್ದಾರೆ.
ನರಗುಂದ ಕ್ಷೇತ್ರದಲ್ಲೂ ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ಇದೆ. 1999ರಿಂದ ಅಂದರೆ ಕಳೆದ ಎರಡೂವರೆ ದಶಕಗಳಿಂದಲೂ 5 ಚುನಾವಣೆಗಳಲ್ಲಿ ಮುಖಾಮುಖೀಯಾಗಿರುವ ಸಿ.ಸಿ.ಪಾಟೀಲ ಮತ್ತು ಬಿ.ಆರ್.ಯಾವಗಲ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, 6ನೇ ಚುನಾವಣೆ ಮೇಲೆ ಮತದಾರರ ನಿರೀಕ್ಷೆ ಹೆಚ್ಚಿದೆ. ನರಗುಂದ ಕ್ಷೇತ್ರದಲ್ಲಿ ಲಿಂಗಾಯತರು(ಗಾಣಿಗೇರ, ಪಂಚಮಸಾಲಿ) ಮತ್ತು ಅಹಿಂದ ವರ್ಗದ ಜನರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಬಿಜೆಪಿಯಿಂದ ಪಂಚಮಸಾಲಿ ಸಮಾಜದ ಸಿ.ಸಿ.ಪಾಟೀಲ, ಕಾಂಗ್ರೆಸ್‌ನಿಂದ ರಡ್ಡಿ ಸಮುದಾಯದ ಬಿ.ಆರ್.ಯಾವಗಲ್, ಜೆಡಿಎಸ್‌ನಿಂದ ಲಿಂಗಾಯತ ಸಮಾಜದ ರುದ್ರಗೌಡ ಪಾಟೀಲ ಕಣ ದ ಲ್ಲಿ ದ್ದಾರೆ. ರೋಣ
ಕಳೆದ ನಾಲ್ಕು ಚುನಾವಣೆಗಳಲ್ಲಿ ಎದುರಾಳಿಗಳಾಗಿ ಸ್ಪ ರ್ಧಿಸಿದ್ದ ಕಾಂಗ್ರೆಸ್‌ನ ಜಿ.ಎಸ್.ಪಾಟೀಲ ಹಾಗೂ ಬಿಜೆಪಿಯ ಕಳಕಪ್ಪ ಬಂಡಿ 5ನೇ ಬಾರಿಯೂ ಪ್ರತಿಸ್ಪ ರ್ಧಿಗಳಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ಗಮನ ಹರಿಸಿತ್ತಾದರೂ ಅಂತಿಮ ಗಳಿಗೆಯಲ್ಲಿ ಕಳಕಪ್ಪ ಬಂಡಿ ಅವರೇ ಅಭ್ಯರ್ಥಿಯಾಗಿ ಮುಂದುವರಿದ್ದಾರೆ. ಆಕಾಂಕ್ಷಿಗಳಲ್ಲೊಬ್ಬರಾಗಿದ್ದ ಕಳಕಪ್ಪ ಬಂಡಿ ಸಹೋದರ ಸಿದ್ದಣ್ಣ ಬಂಡಿ ಮುನಿಸಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಹಿನ್ನಡೆಯಾದಂತಿದೆ. ಲಿಂಗಾಯತರು(ಪಂಚಮಸಾಲಿ, ಗಾಣಿಗೇರ), ಅಹಿಂದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ನಿಂದ ರಡ್ಡಿ ಸಮಾಜದ ಜಿ.ಎಸ್. ಪಾಟೀಲ, ಪಂಚಮಸಾಲಿ ಸಮಾಜದ ಕಳಕಪ್ಪ ಬಂಡಿ, ಜೆಡಿಎಸ್‌ನಿಂದ ಮುಸ್ಲಿಂ ಸಮಾಜದ ಮಕು¤ಂಸಾಬ್ ಮುಧೋಳ ಸ್ಪರ್ಧೆ ಮಾಡುತ್ತಿದ್ದಾರೆ.
Related Articles
ಇನ್ನು ಎಸ್ಸಿ ಮೀಸಲು ಕ್ಷೇತ್ರ ಶಿರಹಟ್ಟಿಯಲ್ಲಿ ಭಿನ್ನವಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪ ರ್ಧಿಸಿದ್ದ ರಾಮಕೃಷ್ಣ ದೊಡ್ಡಮನಿಗೆ ಟಿಕೆಟ್ ತಪ್ಪಿಸಿ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿಗೆ ಟಿಕೆಟ್ ನೀಡಿದ್ದರಿಂದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಬಂಡಾಯದ ಕಹಳೆಯೂದಿ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಅದರಂತೆ ಬಿಜೆಪಿಯಲ್ಲೂ ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್ ತಪ್ಪಿಸಿ ವೈದ್ಯ ಡಾ|ಚಂದ್ರು ಲಮಾಣಿಗೆ ಕಮಲದ ಟಿಕೆಟ್ ನೀಡಲಾಗಿದೆ. ಬಂಡಾಯವೆದ್ದು ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದ ಹಾಲಿ ಶಾಸಕ ರಾಮಣ್ಣ ಲಮಾಣಿ ಹಾಗೂ ಮುಖಂಡರಾದ ಭೀಮಸಿಂಗ್ ರಾಠೊಡ, ಗುರುನಾಥ ದಾನಪ್ಪನವರ ನಾಮಪತ್ರ ವಾಪಸ್ ಪಡೆದಿದ್ದಾ ರೆ. ಲಿಂಗಾಯತರು, ಅಹಿಂದ ವರ್ಗದವರು(ದಲಿತರು, ಅಲ್ಪಸಂಖ್ಯಾತರು) ಹಾಗೂ ಮುಖ್ಯವಾಗಿ ಲಂಬಾಣಿ ಸಮುದಾಯದವರಿದ್ದಾರೆ. ಕಾಂಗ್ರೆಸ್‌ನಿಂದ ದಲಿತ ಎಡಗೈ ಸುಜಾತಾ ದೊಡ್ಡಮನಿ, ಬಿಜೆಪಿಯಿಂದ ಲಂಬಾಣಿ ಸಮುದಾಯದ ಡಾ|ಚಂದ್ರು ಲಮಾಣಿ, ಜೆಡಿಎಸ್‌ನಿಂದ ಹನುಮಂತಪ್ಪ ನಾಯಕ ಕಣ ದ ಲ್ಲಿ ರುವ ಪ್ರಮು ಖ ರು.
Advertisement
-ಅರುಣಕುಮಾರ ಹಿರೇಮಠ